ಎಲ್ಲಾ ಮೊಬೈಲಿಗೂ ಒಂದೇ ಚಾರ್ಜರ್ ಯಾಕಿಲ್ಲ?
ಮೊಬೈಲ್ ಹ್ಯಾಂಡ್‌ಸೆಟ್‌ಗಳ ಚಾರ್ಜರ್ ಒಂದು ಕಂಪೆನಿಯದಕ್ಕೆ ಇನ್ನೊಂದು ಹೋದಿಕೆಯಾಗುವುದನ್ನು ನೋಡಿದ್ದೀರಾ? ಒಂದೇ ಕಂಪೆನಿಯ ಒಂದು ಹ್ಯಾಂಡ್‌ಸೆಟ್‌ಗೆ ಇನ್ನೊಂದರ ಚಾರ್ಜರ್ ಹೊಂದಿಕೆಯಾಗದೇ ಇರುವುದೂ ಇದೆ.ವಸ್ತುಗಳನ್ನು ತಯಾರಿಸುವಾಗ ಒಂದು ನಿಗದಿತ ಮಾನಕಕ್ಕೆ ಸರಿಯಾಗಿ ಪ್ರತಿಯೋರ್ವ ತಯಾರಕನೂ ತಯಾರಿಸಬೇಕೆಂಬ ಅಲಿಖಿತ ಒಪ್ಪಂದ ಇರುವಾಗ ಈ ತರಹೇವಾರೀ ಚಾರ್ಜರ್‌ಗಳನ್ನು ಯಾಕಾದರೂ ತಯಾರಿಸುತ್ತಾರೊ?ಮಾರುಕಟ್ಟೆಯಲ್ಲಿ ಸಿಗುವ ವಿದ್ಯುತ್ ಪ್ಲಗ್, ಸಾಕೆಟುಗಳು ಒಂದು ಕಂಪೆನಿಯದಕ್ಕೆ ಇನ್ನೊಂದು ಹೊಂದಿಕೆಯಾಗುವುದು ಸಾಮಾನ್ಯ. ಚಾರ್ಜರ್‌ಗಳನ್ನು ಯಾವುದೇ ಹ್ಯಾಂಡ್‌ಸೆಟ್ಟಿನೊಂದಿಗೆ ಬಳಸಬಹುದಾದರೆ ಅವುಗಳ ಬೆಲೆ ತಗ್ಗುವುದೇ ಅಲ್ಲದೆ,ಜನರು ಚಾರ್ಜರ್‌ಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲೂ ಬರುತ್ತದೆ.ಅನುಕೂಲತೆಯಂತೂ ಬಹಳವಾಗಿ ಹೆಚ್ಚುತ್ತದೆ. ದಕ್ಷಿಣ ಕೊರಿಯಾ ಸರಕಾರ ಚಾರ್ಜರ್‌ಗಳಲ್ಲಿ ಏಕರೂಪತೆ ಸಾಧಿಸಲು ಮೊಬೈಲ್ ಹ್ಯಾಂಡ್‌ಸೆಟ್ ತಯಾರಕರಿಗೆ ಶರತ್ತು ಹಾಕಿದೆ. ಈಗ ಚೀನಾದ ಸರದಿ. ಅಲ್ಲಿನ ಸರಕಾರವೂ ಆ ನಿಟ್ಟಿನಲ್ಲಿ ಕ್ರಮ ಕೈಗೊಂಡಿದೆ. ನಮ್ಮಲ್ಲಿ ಸರಕಾರ ಎಚ್ಚೆತ್ತುಕೊಳ್ಳಲು ತಡವಾಗದೇನೋ?
ವರ್ಷಪೂರ್ತಿ ದಿನಕ್ಕೊಂದು ಸಿನೆಮಾ
ಜೋನ್ ಮೆಕಾಸ್‌ಗೆ ಈಗ ಎಂಭತ್ತೈದು ವರ್ಷ. ಆತ ಮೂವತ್ತೈದು ವರ್ಷದವನಾಗಿದ್ದಾಗಿನಿಂದಲೂ ತನ್ನ ಮತ್ತು ತನ್ನ ಬಳಗದವರ ಜೀವನ ವಿಧಾನ,ಶೈಲಿಯನ್ನು ಚಿತ್ರೀಕರಿಸಿಕೊಂಡಿದ್ದಾನೆ. ಆತ ಜಗತ್ತನ್ನು ಬರಿಗಣ್ಣಿನಿಂದ ನೋಡಿದ್ದಕ್ಕಿಂತ ಹೆಚ್ಚು ಕ್ಯಾಮರಾ ಕಣ್ಣಿನಿಂದ ನೋಡಿದ್ದಾನೆ ಎಂದರೆ ತಪ್ಪಿಲ್ಲ.ಹೀಗೆ ಗಂಟೆಗಟ್ಟಲೆ ಹೊತ್ತಿನ ದೃಶ್ಯಗಳು ಆತನ ಬಳಿ ರಾಶಿ ಬಿದ್ದಿವೆ.ಬರುವ 2007ನ್ನು ಸರ್ವರೂ ನೆನಪಿನಲ್ಲಿಟ್ಟುಕೊಳ್ಳುವಂತೆ ಮಾಡಲು ತನ್ನ ಚಿತ್ರೀಕಕರಣವನ್ನು ಬಳಸಬೇಕೆನ್ನುವುದು ಆತನ ಯೋಜನೆ. ಚಿತ್ರೀಕರಣದ ದೃಶ್ಯಗಳನ್ನು ಬಳಸಿ ದಿನಕ್ಕೊಂದು ಚಿತ್ರವನ್ನು ಬಿಡುಗಡೆ ಮಾಡುವುದು ಆತನ ಕನಸು. ಚಿತ್ರವನ್ನು ನೋಡಲು ನೀವು ಚಿತ್ರಮಂದಿರಕ್ಕೆ ಹೋಗಬೇಕಿಲ್ಲ. ಅದನ್ನು ಆತನ ವೆಬ್‌ಸೈಟಿನಲ್ಲಿ ಆತ ಪ್ರದರ್ಶಿಸಲಿದ್ದಾನೆ.http://jonasmekas.comನಲ್ಲಿ ಆತನ ಚಿತ್ರಗಳು ವೀಕ್ಷಣೆಗೆ ಲಭ್ಯ.
ಚಿತ್ರಗಳನ್ನು ಕಿರುಪರದೆ ಮೇಲೆ ವೀಕ್ಷಿಸಿದರೂ ರಂಜನೆಗೆ ಏನೂ ಅಡ್ಡಿಯಿಲ್ಲ. ಚಿತ್ರದಲ್ಲಿ ತಲ್ಲೀನರಾದಾಗ ಗಾತ್ರ ಪ್ರಮುಖವಾಗದು ಎಂದವನ ಅಭಿಪ್ರಾಯ.ಆತನು ಹದಿನಾರು ಎಮ್‌ಎಮ್ ಫಿಲ್ಮಿನಿಂದ ಹಿಡಿದು ಆಧುನಿಕ ಕ್ಯಾಮರಾಗಳೆಲ್ಲವನ್ನೂ ಬಳಸಿದ್ದಾನೆ.ಹಳೆಯ ಚಿತ್ರಗಳೊಂದಿಗೆ ಹೊಸದಾಗಿ ಚಿತ್ರೀಕರಿಸಿದ ಭಾಗಗಳನ್ನೂ ಸೇರಿಸುವ ಯೋಜನೆ ಮೆಕಾಸ್ ಹಾಕಿದ್ದಾನೆ.ಚಿತ್ರ ನಿರ್ಮಾಣದಲ್ಲಿಯೇ ಮುಳುಗಿರುವ ಈತ ಸ್ವತಃ ಚಿತ್ರಗಳನ್ನು ನೋಡಲು ಸಮಯವಿಲ್ಲ ಎಂದು ಸಮಜಾಯಿಷಿಕೆ ಕೊಡುತ್ತಾನೆ.ನೀವೂ ಹಾಗೆಯೇ ಹೇಳಿ ಆತನ ಕಿರು ಸಿನೆಮಾಗಳನ್ನು ನೋಡದಿರಬೇಡಿ ಮತ್ತೆ!
ಮುಖದ ಅನ್ವೇಷಣೆ ಸಾಧ್ಯ
ಗೂಗಲ್ ಶೋಧ ಪುಟದಲ್ಲಿ ಚಿತ್ರಗಳನ್ನು ಹುಡುಕುವ ಸೇವೆ ಲಭ್ಯ. ಐಶ್ವರ್ಯ ರೈಯ ಚಿತ್ರ ಹುಡುಕು ಬೇಕಾದರೆ ನೀವು ಆ ಪದದ ಆಧಾರದ ಮೇಲೆ ಚಿತ್ರ ಹುಡುಕಬೇಕಾಗುತ್ತದೆ.ಜಾಲತಾಣದ ಪುಟಗಳಲ್ಲಿರುವ ಚಿತ್ರಗಳ ಹೆಸರಿನ ಆಧಾರದಲ್ಲಿ ಶೋಧ ಕಾರ್ಯ ನಡೆಯುತ್ತದೆ. ಐಶ್ವರ್ಯಳ ಚಿತ್ರಕ್ಕೆ "ಸುಂದರಿ" ಎಂದು ಹೆಸರಿಸಿದ್ದರೆ, ಆ ಚಿತ್ರ ಶೋಧ ಫಲಿತಾಂಶದಲ್ಲಿ ಒಳಗೊಳ್ಳದು. ಸ್ವೀಡಿಶ್ ಕಂಪೆನಿಯೊಂದು ಹೊಸ ತಂತ್ರಾಂಶ ಅಭಿವೃದ್ಧಿ ಪಡಿಸಿದೆ. ಅದರ ಪ್ರಕಾರ ನೀವು ನಿಮಗೆ ಬೇಕಾದ ವ್ಯಕ್ತಿಯ ಒಂದು ಚಿತ್ರವನ್ನು ನೀಡಿ,ಜಾಲತಾಣಗಳಲ್ಲಿರುವ ಆತನ ಚಿತ್ರವನ್ನು ಹೋಲುವ ಇತರ ಚಿತ್ರಗಳನ್ನು ಹುಡುಕಾಡಬಹುದು. ನೀವು ನೀಡಿದ ಚಿತ್ರದ ಬಾಯಿಯ ಆಕಾರ, ಮೂಗಿನ ವಕ್ರತೆ, ಹಣೆಯ ಅಗಲ ಇತ್ಯಾದಿ ಅಂಶಗಳ ಆಧಾರದಲ್ಲಿ ಚಿತ್ರದ ಹುಡುಕಾಟ ನಡೆಯುವುದೇ ವಿನಃ ಚಿತ್ರಕ್ಕೆ ನೀಡಿದ ಶೀರ್ಷಿಕೆಯ ಆಧಾರದಲ್ಲಿ ಅಲ್ಲ.
ಮೇಲ್ನೋಟಕ್ಕೆ ಇದು ಸುಲಭವೆನ್ನಿಸಿದರೂ, ಹಾಗಿಲ್ಲ. ವ್ಯಕ್ತಿ ಚಹರೆ ಬದಲಾದರೂ ಗುರುತಿಸಲು ನಮಗೆ ಸಾಧ್ಯವಾದರೂ ಕಂಪ್ಯೂಟರ್‌ಗೂ ಅದು ಸಾಧ್ಯವಾಗುವಂತೆ ಮಾಡುವುದು ಸುಲಭವಲ್ಲ.
ಕ್ಲಿಕ್ಕಿಸಿ ಬಹಮಾನ ಗೆಲ್ಲಿರಿ
ಅಲೆಕ್ಸ್ ಎನ್ನುವ ಯುವಕ ತನ್ನ ವಿದ್ಯಾಭ್ಯಾಸಕ್ಕೆ ಹಣ ಒಟ್ಟು ಮಾಡಬೇಕಿತ್ತು. ಆತ ವೆಬ್‌ಪುಟವೊಂದನ್ನು ಆರಂಭಿಸಿದ.ಇದರ ಪುಟಗಳನ್ನು ಕಿರು ಅಂಕಣಗಳಾಗಿ ಮಾಡಿ ಅದನ್ನು ಜಾಹೀರಾತುದಾರರಿಗೆ ಜಾಹೀರಾತು ಪ್ರದರ್ಶಿಸಲು ನೀಡಿ,ಹಣ ಪಡೆದ. ಹೀಗೆ ತನ್ನ ಜಾಲತಾಣದಿಂದ ಆತ ಒಂದು ಮಿಲಿಯನ್ ಡಾಲರ್ ಗಳಿಸಿದ. ಅದೇ ಹುಡುಗ ಈಗ ಇನ್ನೊಂದು ಸಾಹಸಕ್ಕೆ ಇಳಿದಿದ್ದಾನೆ. ಆತನ ಹೊಸ ತಾಣ http://www.pixelotto.comನಲ್ಲಿ ಜಾಹೀರಾತುಗಳಿವೆ.ಇವನ್ನು ಕ್ಲಿಕ್ಕಿಸಿದವರಲ್ಲಿ ಕೆಲವರಿಗೆ ಅದೃಷ್ಟಲಕ್ಷ್ಮಿ ಒಲಿಯಬಹುದು.ಕ್ಲಿಕ್ಕಿಸುವ ಮೊದಲು ನೋಂದಾಯಿಸಿಕೊಳ್ಳಬೇಕು. ಬಹುಮಾನ ಗೆದ್ದರೆ ಅದು ನಿಮಗೆ ತಿಳಿಯಬೇಕಲ್ಲಾ-ಅದಕ್ಕಾಗಿ!
ಶರವೇಗದ ಸರದಾರ ಸೀಮನ್ಸ್
ಫೈಬರ್ ಅಪ್ಟಿಕ್ ಕೇಬಲ್‌ಗಳ ಮೂಲಕ ಅತಿ ಹೆಚ್ಚೆಂದರೆ ಎಷ್ಟು ಬಿಟ್‌ಗಳ ರವಾನೆ ಸಾಧ್ಯ? ಸೀಮನ್ಸ್ ಕಂಪೆನಿಯ ಹೊಸ ತಾಂತ್ರಿಕತೆಯ ಮೂಲಕ ಪ್ರತಿ ಸೆಕೆಂಡಿಗೆ ನೂರೇಳು ಗಿಗಾಬಿಟ್‌ಗಳಷ್ಟು ಮಾಹಿತಿ ರವಾನೆ ಸಾಧ್ಯವಂತೆ-ಅದೂ ಒಂದು ಫೈಬರ್ ಎಳೆಯ ಮೂಲಕ!
*ಅಶೋಕ್‌ಕುಮಾರ್ ಎ
Sunday, December 24, 2006
Sunday, December 17, 2006
ವಾಹನ ಶೆಡ್‌ನಿಂದ ವಿದ್ಯುಚ್ಛಕ್ತಿ
ವಾಹನ ಶೆಡ್‌ನಿಂದ ವಿದ್ಯುಚ್ಛಕ್ತಿ
ಕ್ಯಾಲಿಫೋರ್ನಿಯಾದ ಗೂಗಲ್ ಕಚೇರಿಯಲ್ಲಿ,ವಾಹನ ನಿಲುಗಡೆಗೆ ನಿರ್ಮಿಸಿರುವ ಶೆಡ್ಡಿನಿಂದ ಸಾವಿರ ಮನೆಗಳಿಗೆ ಬೇಕಾದಷ್ಟು ವಿದ್ಯುಚ್ಛಕ್ತಿ ಉತ್ಪಾದನೆಯಾಗುತ್ತದೆ. ಸೌರಫಲಕಗಳನ್ನೇ ಬಳಸಿ, ಶೆಡ್ ನಿರ್ಮಿಸಿ ಸೌರ ವಿದ್ಯುಚ್ಛಕ್ತಿ ಉತ್ಪಾದಿಸಲಾಗುತ್ತಿದೆ.ಒಂಭತ್ತು ಸಾವಿರ ಫಲಕಗಳನ್ನು ನೇರವಾಗಿ ಬಳಸಿದ್ದರೆ. ಇನ್ನಷ್ಟನ್ನು ಮಾಡಿನ ಮೇಲೆ ಅಳವಡಿಸಿ ವಿದ್ಯುತ್ ಉತ್ಪಾದಿಸಲಾಗಿದೆ.ಎನರ್ಜಿ ಇನೋವೇಶನ್ಸ್ ಎನ್ನುವ ಕಂಪೆನಿಗೆ ಈ ಯೋಜನೆಯನ್ನು ಗೂಗಲ್ ಕಂಪೆನಿ ಗುತ್ತಿಗೆ ನೀಡಿದೆ.
ಚಿಕಿತ್ಸೆಗೆ ಭಾರತಕ್ಕೆ ಆಗಮಿಸುವ ವಿಮೆಯಿಲ್ಲದ ಅಮೆರಿಕನ್ನರು
ಅಮೆರಿಕಾದಲ್ಲಿ ಆರೋಗ್ಯ ವಿಮೆಯಿಲ್ಲದವರದು ಇಕ್ಕಟ್ಟಿನ ಸ್ಥಿತಿ. ಚಿಕಿತ್ಸೆಗಾಗಿ ವೈದ್ಯರ ಬಳಿಗೆ ಹೋಗಲೇ ಸಾಧ್ಯವಾಗದಷ್ಟು ಚಿಕಿತ್ಸೆದುಬಾರಿ . ಅಂತವರು ಚಿಕಿತ್ಸೆ ಪಡೆಯುವುದು ಅನಿವಾರ್ಯವಾದಾಗ ಭಾರತದೆಡೆಗೆ ಬರುವುದೀಗ ಮಾಮೂಲಿಯಾಗಿಬಿಟ್ಟಿದೆ.ಅಲ್ಲಿ ಮೂವತ್ತು ಸಾವಿರ ಡಾಲರು ತಗಲುವ ಶಸ್ತ್ರಚಿಕಿತ್ಸೆಯ ಮೂರನೇ ಒಂದು ಪಾಲು ಖರ್ಚಿನಲ್ಲಿ ಚಿಕಿತ್ಸೆ ಮಾತ್ರಾ ಅಲ್ಲದೆ ಬಂದು ಹೋಗುವ ವಿಮಾನ ಖರ್ಚು ಕೂಡಾ ಬರುತ್ತದೆ. ಜತೆಗೆ ನಮ್ಮಲ್ಲಿ ಅವರಿಗೆ ದೊರಕುವ ರಾಜಾಥಿತ್ಯದ ಬೋನಸ್ ಬೇರೆ.ಚಿಕಿತ್ಸೆಯ ಗುಣಮಟ್ಟದಲ್ಲಿ ಹೆಚ್ಚಿನವರಿಗೇ ಭಾರೀ ತೃಪ್ತಿ ಸಿಗುತ್ತದೆ-ಯಾಕೆಂದರೆ ಶಸ್ತ್ರಚಿಕಿತ್ಸಕರು ಹೆಚ್ಚಾಗಿ ಅಮೆರಿಕಾದಿಂದ ವಾಪಾಸಾದ ನುರಿತ ವೈದ್ಯರು.ಚೆನ್ನೈನ ಅಪೊಲೋ, ಮುಂಬೈನ ವರ್ಕಾಟ್, ಬೆಂಗಳೂರಿನ ಮಣಿಪಾಲ ಆಸ್ಪತ್ರೆಗಳಿಗೆ ಇಂತಹ ವಿಮೆರಹಿತ ಅಮೆರಿಕನ್ನರು ಚಿಕಿತ್ಸೆಗೆ ಬರುವುದು ಹೆಚ್ಚು.ಅಂದಹಾಗೆ ಅಮೆರಿಕಾದಲ್ಲಿ ನಲ್ವತ್ತಾರು ದಶಲಕ್ಷ ಅಮರಿಕನ್ನರಿಗೆ ವಿಮೆಯಿಲ್ಲದ ಪರಿಸ್ಥಿತಿ ಬರುತ್ತದೆ.
ಹಾಗೆಂದು ಎಲ್ಲರಿಗೂ ಇಲ್ಲಿನ ಚಿಕಿತ್ಸೆಯ ಬಗ್ಗೆ ಭರವಸೆಯಿಲ್ಲ. ಆದರೆ ಚಿಕಿತ್ಸೆಗೊಳಗಾದವರ ಶಾಭಾಶ್‌ಗಿರಿ ನಮ್ಮ ಆಸ್ಪತ್ರೆಗಳ ಪ್ರಸಿದ್ಧಿ ಹೆಚ್ಚಲು ಕಾರಣವಾಗುತ್ತಿದೆ.ಇನ್ನೊಂದು ವರ್ಗದ ಜನ ಸೌಂದರ್ಯ ಚಿಕಿತ್ಸೆಗಾಗಿ ಬರುವುದಿದೆ. ಬೊಜ್ಜು ಇಳಿಸಿಕೊಳ್ಳಲು, ಹಲ್ಲಿನ ಚಿಕಿತ್ಸೆಗೆ ಬರುವುದು ಅಂತಹ ರೋಗಿಗಳು.ನಮ್ಮಲ್ಲಿ ವೈದ್ಯಕೀಯ ಶಿಕ್ಷಣ ಇನ್ನೂ ದುಬಾರಿಯಾದರೆ ಅಚ್ಚರಿಯಿಲ್ಲ.
ದೂರವಾಣಿ ಕರೆ ಬಹುತೇಕ ಉಚಿತ
ಅಂತರ್ಜಾಲ ಬಳಸಿ ದೂರವಾಣಿ ಕರೆ ಮಾಡಲು ಅವಕಾಶ ನೀಡಿ ಸ್ಕೈಪ್ ಎಂಬ ಅಮೆರಿಕನ್ ಕಂಪೆನಿ ಜನರನ್ನು ದಂಗು ಬಡಿಸಿತ್ತು. ಅದೀಗ ಕರೆ ಮಾಡಲು ವಾರ್ಷಿಕ ಚಂದಾ ಮೂವತ್ತು ಡಾಲರು ಮಾಡಿ ಪ್ರಕಟಣೆ ನೀಡಿದೆ. ಈ ನಿಗದಿತ ಶುಲ್ಕ ತೆತ್ತು ಎಷ್ಟೂ ಕರೆ ಮಾಡಬಹುದು.ಆದರೆ ಕರೆ ಮಾಡಲು ಕಂಪ್ಯೂಟರ್ ಬಳಸಬೇಕಾದ ಪ್ರಮೇಯವೂ ಇದೆ. ವಿಶೇಷ ದೂರವಾಣಿ ಯಂತ್ರ ಬಳಸಿದರೆ, ಕಂಪ್ಯೂಟರ್ ಬೇಕಾಗಿಲ್ಲ. ಈ ಯಂತ್ರಗಳೂ ಉಚಿತ ಎಂದೆಣಿಸಬೇಡಿ!
ಟಿ-ಮೊಬೈಲ್ ಕಂಪೆನಿ ಇದೀಗ ಅಂತರ್ಜಾಲ ಮೂಲಕ ಮೊಬೈಲ್ ಕರೆ ಮಾಡುವ ಅಗ್ಗದ ಕರೆ ಸೌಲಭ್ಯವನ್ನು ಪರೀಕ್ಷಾರ್ಥವಾಗಿ ನೀಡುತ್ತಿದೆ. ಕರೆಯ ಗುಣಮಟ್ಟ ಇನ್ನೂ ಸಾಕಷ್ಟು ತೃಪ್ತಿದಾಯಕವಾಗಿಲ್ಲವಂತೆ. ಆದರೂ ಮೊಬೈಲ್ ಕರೆ ಇಳಿಸಲು ಈ ತಂತ್ರಜ್ಞಾನ ನೆರವಾಗಲಿದೆಯೆನ್ನುವುದು ಖಚಿತ.
ಲ್ಯಾಪ್‌ಟಾಪ್ ಮೂಲಕ ಕಳ್ಳರ ಪತ್ತೆ!
ಬ್ರೆಜಿಲಿನ ವ್ಯಾಪಾರಿ ಜರ್ಮನಿಯ ಪ್ರವಾಸದಲ್ಲಿದ್ದ. ಆತನ ಬ್ರೆಜಿಲಿನ ಮನೆ ಹಿಂದಿನ ಅಂಕಣವೊಂದರಲ್ಲಿ ಪ್ರಸ್ತಾಪಿತವಾಗಿದ್ದ 'ಸ್ಮಾರ್ಟ್ ಮನೆ". ಹಾಗಾಗಿ ಆತನ ಮನೆಗೆ ಕಳ್ಳರು ನುಗ್ಗಿದಾಗ ಆತನ ಮೊಬೈಲ್ ಫೋನಿಗೆ ಕಿರು ಸಂದೇಶದ ಆಗಮನವಾಯಿತು.ಒಡನೆಯೇ ಆತ ತನ್ನ ಲ್ಯಾಪ್‌ಟಾಪ್ ಚಾಲೂ ಮಾಡಿ ಅಂತರ್ಜಾಲ ಮೂಲಕ ತನ್ನ ಮನೆಯಲ್ಲಿ ಸ್ಥಾಪಿಸಿದ ವೆಬ್‌ಕ್ಯಾಮರಾದ ಚಿತ್ರಗಳನ್ನು ನೋಡತೊಡಗಿದ. ಆತನ ಮನೆ ಹೊಕ್ಕ ಕಳ್ಳರು ಆತನ ಕೋಟುಗೀಟು ತೊಟ್ಟು ಚಂದ ನೋಡುತ್ತಿದ್ದರು. ಆತ ತನ್ನ ಪತ್ನಿಗೆ ಫೋನಾಯಿಸಿದರೆ, ಆಕೆಯ ಉತ್ತರ ಬರದು. ನಂತರ ಪೊಲೀಸರನ್ನು ಸಂಪರ್ಕಿಸಿ, ಕಳ್ಳರನ್ನು ಬಂಧನಕ್ಕೆ ಗುರಿಪಡಿಸಲು ಆತನಿಗೆ ಸಾಧ್ಯವಾಯಿತು.
ಹಕ್ಕುಸ್ವಾಮ್ಯ ಶೋಧನೆಗೆ ಗೂಗಲ್ ನೆರವು
ಏಳು ದಶಲಕ್ಷ ಪೇಟೆಂಟ್‌ಗಳ ವಿವರದ ರಾಶಿಯಲ್ಲಿ ನಿಮಗೆ ಬೇಕಾದ ಮಾಹಿತಿಯನ್ನು ಶೋಧಿಸುವುದು ಸುಲಭವೇ? ಅದಕ್ಕೆ ನೆರವು ನೀಡಲು ಪೇಟೆಂಟ್ ಬಗೆಗೇ ಶೋಧ ನಡೆಸುವ ವಿಶೇಷ ಸೇವೆ ಇನ್ನು ಲಭ್ಯ. ಸದ್ಯ ಶೋಧ ಅಮೆರಿಕನ್ ಹಕ್ಕುಸ್ವಾಮ್ಯಕ್ಕೆ ಮಾತ್ರಾ ಸೀಮಿತ.ಹಕ್ಕುಸ್ವಾಮ್ಯ ಸಂಖ್ಯೆ, ಹಕ್ಕುಸ್ವಾಮ್ಯ ಪಡೆದವನ ಹೆಸರು ಇತ್ಯಾದಿಗಳ ಮೂಲಕವೂ ಶೋಧ ಸಾಧ್ಯ.
ದಶಮಾನೋತ್ಸವ ಆಚರಿಸುತ್ತಿರುವ ಫ್ಲಾಶ್ ತಂತ್ರಾಂಶ
ಅಂತರ್ಜಾಲದಲ್ಲಿ ಜಾಲಪುಟಗಳನ್ನು ಶ್ರೀಮಂತಗೊಳಿಸುವಲ್ಲಿ ಅನಿಮೇಶನ್ ಚಿತ್ರಗಳಿಗೆ ಅಗ್ರಸ್ಥಾನವಿದೆ. ಪುಟಗಳಿಗೆ ಜೀವ ತುಂಬುವ ಇವುಗಳ ರಚನೆ ಸಾಧ್ಯವಾಗಿರುವುದು ಫ್ಲಾಶ್ ಎನ್ನುವ ತಂತ್ರಾಂಶದ ಮೂಲಕ. ತೊಂಭತ್ತರ ದಶಕದ ಮಧ್ಯಭಾಗದಲ್ಲಿ ಇದರ ಅಭಿವೃದ್ಧಿಯಾದಾಗ ತಂತ್ರಾಂಶಕ್ಕೆ ಫ್ಯೂಚರ್ ಫ್ಲಾಶ್ ಎಂದು ಹೆಸರಿತ್ತು. ಪಾತ್ರದ ವಿವಿಧ ಭಂಗಿಗಳ ಕಣಜದಿಂದ ಬೇಕಾದ ಭಂಗಿಗಳನ್ನು ಮತ್ತೆ ಎರವಲು ಪಡೆಯುವ ಮೂಲಕ, ಸೀಮಿತ ಚಿತ್ರಗಳ ಸಹಾಯದಿಂದ ಅನಿಮೇಶನ್ ಮೂಡಿಸುವ ಹೊಸ ತಂತ್ರಜ್ಞಾನ ಇದರಲ್ಲಿ ಬಳಸಲಾಗಿದೆ. ಹಾಗಾಗಿ ಪ್ರತಿ ಕ್ರಿಯೆಗೂ ಸರಣಿ ಚಿತ್ರ ಬರೆಯುವ ತಾಪತ್ರಯ ಫ್ಲಾಶ್ ಬಳಸಿದಾಗ ಇರುವುದಿಲ್ಲ. ಈಗ ನಿಧಾನವಾಗಿ ಈ ತಂತ್ರಾಂಶ ಮೊಬೈಲ್ ಪ್ರವೇಶಿಸುತ್ತಿದೆ.*ಅಶೋಕ್‌ಕುಮಾರ್ ಎ

Sunday, December 10, 2006
ಜೀವ ಉಳಿಸುವ ಲೈಫ್‌ಸ್ಟ್ರಾ ಎಂಬ ಹೀರು ನಳಿಗೆ
ಜೀವ ಉಳಿಸುವ ಲೈಫ್‌ಸ್ಟ್ರಾ ಎಂಬ ಹೀರು ನಳಿಗೆ
ನಮ್ಮಲ್ಲಿ ನೀರಿಗೆ ಹೇಳಿಕೊಳ್ಳುವ ಬರವಿರದಿರಬಹುದು. ಆದರೆ ಸ್ವಚ್ಛ ನೀರಿಗೆ ಬರ ತಪ್ಪದ್ದಲ್ಲ. ಕಲುಷಿತ ನೀರಿನಿಂದ ಬರುವ ರೋಗಗಳು ಸಾವಿಗೆ ಪ್ರಧಾನ ಕಾರಣವಾಗುವುದಿದೆ. ಜನರು ಕುಡಿಯುವ ನೀರನ್ನು ಸೋಸಿ ಶುದ್ಧಗೊಳಿಸುವ ಹೀರುನಳಿಕೆಯೊಂದನ್ನು ಸ್ವಿಸ್ ಕಂಪೆನಿಯೊಂದು ಅಭಿವೃದ್ಧಿ ಪಡಸಿದೆ. ಇಂಗಾಲ ಮತ್ತಿತರ ಸಂಯುಕ್ತಗಳನ್ನು ಕೊಳವೆಯೊಂದರಲ್ಲಿ ತುಂಬಿ, ನೀರು ಕುಡಿಯುವಾಗ ಇದನ್ನು ಸ್ಟ್ರಾದಂತೆ ಬಳಸಿ, ನೀರನ್ನು ಸೋಸುವುದು ಕಂಪೆನಿಯು ಕಂಡುಹಿಡಿದ ಅಗ್ಗದ ನೀರು ಶುದ್ಧಕ. ಶೇಕಡಾ ತೊಂಭತ್ತೊಂಭತ್ತು ಬ್ಯಾಕ್ಟಿರಿಯಾಗಳನ್ನು ನಿವಾರಿಸುವ ಈ ಶೋಧಕವು ಏಳುನೂರು ಲೀಟರ್ ಸೋಸಿದ ಬಳಿಕವಷ್ಟೇ ತನ್ನ ಸಾಮರ್ಥ್ಯ ಕಳೆದುಕೊಳ್ಳುತ್ತದೆ. ಒಂದು ಕೊಳವೆಗೆ ನೂರೈವತ್ತು ರೂಪಾಯಿ ದುಬಾರಿ ಅನಿಸಿದರೂ ಪ್ರತಿ ಲೀಟರಿಗೆ ತಗಲುವ ಖರ್ಚು ನಗಣ್ಯ. ಆಸ್ಪತ್ರೆ ಖರ್ಚಿನಲ್ಲಿ ಆಗುವ ಉಳಿಕೆ ಗಮನಿಸಿದರೆ ಇದರ ಉಪಯುಕ್ತತೆ ಯಾರಿಗೂ ಮನವರಿಕೆಯಾದೀತು. ಅಂದ ಹಾಗೆ ಇದಕ್ಕೆ ಲೈಫ್‌ಸ್ಟ್ರಾ ಎಂದು ಹೆಸರಿಸಲಾಗಿದೆ.
ಕಂಪ್ಯೂಟರ್ ಆಟ ಆಡಲು ಸಂಬಳ
ತಮ್ಮ ಉದ್ಯೋಗಿಗೆ ದಿನವಡೀ ಕಂಪ್ಯೂಟರ್ ಗೇಮ್‌ಗಳನ್ನು ಆಡಲು ಕಂಪೆನಿಗಳು ಸಂಬಳ ಕೊಡಬೇಕಾಗುತ್ತದೆ ಎಂದರೆ ನಂಬುವಿರಾ? ಹೌದು-ಕಂಪ್ಯೂಟರ್ ಗೇಮ್‌ಗಳನ್ನು ಅಭಿವೃದ್ಧಿ ಪಡಿಸುವ ಕಂಪೆನಿಗಳು ಅಂತಹ ಉದ್ಯೋಗಿಗಳನ್ನು ನೇಮಿಸಿಕೊಳ್ಳುವುದು ಅನಿವಾರ್ಯ. ಅಭಿವೃದ್ಧಿ ಪಡಿಸಿದ ಆಟ ತಪ್ಪುಗಳಿಂದ ಹೊರತಾಗಿದೆಯೇ ಎಂದು ಕೂಲಂಕಷ ಪರೀಕ್ಷೆ ನಡೆಸಬೇಕಾಗುತ್ತದೆ. ಇದನ್ನು ಪರೀಕ್ಷಿಸಲು ಗಂಟೆಗಟ್ಟಲೆ ಆಟ ಆಡಿಯೇ ನೋಡಬೇಕು.ಆಟವನ್ನು ಬೇರೆ ಬೇರೆ ಕಠಿಣ ಮಟ್ಟದಲ್ಲಿ ಆಡಿ ಪರೀಕ್ಷೆ ನಡೆಸಿ,ಎಲ್ಲೂ ತಪ್ಪುಗಳಾಗುವುದಿಲ್ಲ ಎಂದು ಖಚಿತ ಪಡಿಸಿಕೊಂಡ ನಂತರವಷ್ಟೇ ಅಟವನ್ನು ಬಿಡುಗಡೆ ಮಾಡಬಹುದು. ಹಾಗಾಗಿ ಇದಕ್ಕೆಂದೇ ನಿಯೋಜಿತರಾದ ಪರೀಕ್ಷಕರು ಕಂಪ್ಯೂಟರ್ ಮುಂದೆ ಕುಳಿತು ತಾಳ್ಮೆಯಿಂದ ಆಡಿ ಆಟದಲ್ಲಿ ಕಂಡು ಬರುವ ತಪ್ಪುಗಳನ್ನು ಕಂಡುಹಿಡಿದು ಅಭಿವೃದ್ಧಿ ಪಡಿಸಿದ ಇಂಜಿನಿಯರುಗಳಿಗೆ ವರದಿ ಮಾಡಬೇಕು. ಅವರದನ್ನು ಸರಿಪಡಿಸಿ ಮತ್ತೆ ಪರೀಕ್ಷಿಸಲು ನೀಡಬೇಕು.ಮತ್ತೆ ಪರೀಕ್ಷೆ ಮುಂದುವರಿಯಬೇಕು. ಹೀಗೆ ಪದೇ ಪದೇ ಆಡಿದ ಆಟವನ್ನೇ ಆಡುವ ಹಿಂಸೆ ಈ ಪರೀಕ್ಷಕರಿಗೆ.ಈ ಕೆಲಸಕ್ಕೆ ಸಿಗುವ ಸಂಬಳವೂ ಕಡಿಮೆಯೇ.ಚಾ ಕಂಪೆನಿಗಳ ಚಾಹುಡಿಯ ಗುಣಮಟ್ಟ ಪರೀಕ್ಷಕರ ನೆನಪು ನಿಮಗೆ ಬಂತೇ?
ಗುಂಪು ಕರಗಿಸಲು ಹೊಸ ಅಸ್ತ್ರ
ಇರಾಕಿನಂತಹ ಗಲಭೆ ಪೀಡಿತ ಪ್ರದೇಶಗಳಲ್ಲಿ ಪ್ರಭಾವಶಾಲಿಯಾಗಬಲ್ಲ ಕಿರಣಾಸ್ತ್ರವನ್ನು ಸಂಶೋಧಿಸಲಾಗಿದೆ. ಇದರ ಬಳಕೆಗೆ ಅಮೆರಿಕನ್ ಸೇನಾ ಪಡೆಗಳಿಗೆ ಅನುಮತಿಯನ್ನೂ ನೀಡಲಾಗಿದೆ.ಈ ಹೊಸ ಅಸ್ತ್ರವನ್ನು ಬಳಸಲು ಪಡೆಗಳು ಮಾಡಬೇಕಾದ್ದಿಷ್ಟೆ. ಬಂದೂಕದಿಂದ ಅಲೆಗಳನ್ನು ಹೊರಸೂಸಬೇಕು. ಈ ಅಲೆಗೆ ಮೈಯೊಡ್ಡಿದವರಿಗೆ ಮೈಯಲ್ಲಿ ವಿಪರೀತ ಉರಿ ಉಂಟಾಗುತ್ತದೆ.ಅವರಿಗೆ ಬವಳಿ ಬಂದು ಬೀಳುವಂತಾಗುತ್ತದೆ. ಆದರೆ ಅಲ್ಲಿ ನಿಲ್ಲಲೂ ಸಾಧ್ಯವಾಗದೆ, ಅವರು ಜಾಗ ಖಾಲಿ ಮಾಡುವುದು ಅನಿವಾರ್ಯವಾಗುತ್ತದೆ. ಆ ಅಲೆಗಳು ಅತಿ ಕಿರಿಯ ತರಂಗಾಂತರವುಳ್ಳವು.ಕ್ಷಕಿರಣಗಳಿಗೆ ಹೋಲಿಸಿದರೆ ಇವುಗಳ ತರಂಗಾಂತರ ಅಧಿಕ ಆದರೆ ಮೈಕ್ರೋವೇವ್ ಅವನ್‌ಗಳಿಗೆ ಹೋಲಿಸಿದರೆ ತರಂಗಾಂತರ ಕಿರಿದು.
ಈ ಅಲೆಗಳಿಗೆ ಈಡಾದವರಿಗೆ ಮೈಯುರಿತ ತುಸು ಹೊತ್ತು ಇರುತ್ತದೆ. ಮೈಸುಟ್ಟ ಅನುಭವ ಹೊತ್ತು ಕಳೆದಂತೆಲ್ಲಾ ಕಡಮೆಯಾಗುತ್ತದೆ.ಈ ಆಯುಧಕ್ಕೆ "ಕ್ರಿಯಾಶೀಲ ನಿರಾಕರಣೆ ವ್ಯವಸ್ಥೆ" ಎಂದು ಹೆಸರಿಸಲಾಗಿದೆ.ಆಯುಧವನ್ನು ಆಯ್ದ ಸ್ವಯಂಸೇವಕರ ಮೇಲೆ ಸಫಲವಾಗಿ ಪ್ರಯೋಗಿಸಲಾಗಿದೆ.ಇದರ ಸಂಶೋಧನೆಗೆ ಹತ್ತು ವರ್ಷ ತಗಲಿದೆ. ಬಂದ ಖರ್ಚು ನಲ್ವುತ್ತು ಮಿಲಿಯನ್ ಡಾಲರು.ಇರಾಕಿನಲ್ಲಿ ಇನ್ನೇನು ಇದರ ಪ್ರಯೋಗ ಶುರುವಾಗಲಿದೆ.
ನದಿ ನೀರು ವಿವಾದ ಬಗೆ ಹರಿಸಲು ತಂತ್ರಾಂಶ!
ನೀರಿನ ವಿಶ್ಲೇಷಣೆ ಮತ್ತು ಯೋಜನೆ ವ್ಯವಸ್ಥೆ(ವೀಪ್-WEAP-Water Evaluation And Planning System) ಎನ್ನುವ ತಂತ್ರಾಂಶ ಜಗತ್ತಿನಾದ್ಯಂತ ನೀರಿನ ಹಂಚಿಕೆ ವಿವಾದಗಳನ್ನು ಬಗೆಹರಿಸಲು ಸಮರ್ಥವಾಗಿದೆಯಂತೆ. ಇದು ನೀರಿನ ಲಭ್ಯತೆ ಮತ್ತು ಸಮರ್ಥ ಬಳಕೆ ಬಗೆಗೆ ವಿಶ್ಲೇಷಣೆ ನಡೆಸಿ ಯೋಜಿಸಲು ಅವಕಾಶ ನೀಡುತ್ತದೆ. ಬದಲಾಗುವ ಪರಿಸ್ಥಿತಿಯಲ್ಲಿ ನೀರನ್ನು ಹೇಗೆ ಹಂಚಬಹುದು ಎಂಬುದನ್ನು ತಂತ್ರಾಂಶದ ಮೂಲಕ ಅಧ್ಯಯನ ನಡೆಸಲು ಬರುತ್ತದೆ.
ಕಾವೇರಿ ನೀರಿನ ಹಂಚಿಕೆ ವಿವಾದ ಬಗೆ ಹರಿಸಲು ಅರ್ಘ್ಯಂ ಎನ್ನುವ ಸಾರ್ವಜನಿಕ ದಾನಶೀಲ ಸಂಸ್ಥೆ ಮತ್ತು ತಂತ್ರಾಂಶ ತಯಾರಿಸಿದ ಮೈದಾಸ್ ಎನ್ನುವ ಸಂಸ್ಥೆ ಇದರ ಪ್ರಾಯೋಗಿಕ ಬಳಕೆಗೆ ಒಪ್ಪಂದಕ್ಕೆ ಬಂದಿವೆ.
ಬಂದಿದೆ ಸುಲಭದಲ್ಲಿ ಕಲಿಯಬಹುದಾದ ಕೀಲಿಮಣೆ
ಟೈಪಿಂಗ್ ಕಲಿಯುವುದನ್ನು ಸುಲಭ ಮಾಡುವ ಹೊಸ ವಿನ್ಯಾಸದ ಕೀಲಿ ಮಣೆ ಈಗ ಲಭ್ಯ. ಇದರಲ್ಲಿ ಕೀಲಿಗಳ ಸ್ಥಾನ ಪಲ್ಲಟಗೊಂಡಿದೆ. ಎ,ಬಿ,ಸಿ,ಡಿಗಳನ್ನು ಕ್ರಮಾನುಸಾರ ಜೋಡಿಸಲಾಗಿದೆ. ಬಲ ಹಾಗೂ ಎಡಗೈಗಳ ಮಧ್ಯೆ ಖಾಲಿ ಸ್ಥಳ ನೀಡುವ ಕೀಲಿಗಳು ಪ್ರತಿ ಹೆಬ್ಬೆರಳಿಗೆ ಪ್ರತ್ಯೇಕ ಪ್ರತ್ಯೇಕವಾಗಿ ಲಭ್ಯವಿವೆ.ಬೆಲೆ ಎಪ್ಪತ್ತು ಡಾಲರು.ಕೀಲಿಗಳ ಸಂಖ್ಯೆಯಲ್ಲೂ ಕಡಿತವಾಗಿದೆ.

Saturday, December 02, 2006
ಕನ್ನಡದ ನಿಘಂಟು ಅಂತರ್ಜಾಲದಲ್ಲಿ ಲಭ್ಯ
ಕನ್ನಡದ ನಿಘಂಟು ಅಂತರ್ಜಾಲದಲ್ಲಿ ಲಭ್ಯ
ಅಂತರ್ಜಾಲದಲ್ಲಿ ಕನ್ನಡ ನಿಘಂಟು ಕನ್ನಡ ಕಸ್ತೂರಿ ಎನ್ನುವ ಜಾಲತಾಣದಲ್ಲಿ ಲಭ್ಯವಿತ್ತು.(http://www.kannadakasturi.com/kasturiEnglishKanDictionary/start.asp ಇದೀಗ ಪ್ರೊ.ಜಿ.ವೆಂಕಟಸುಬ್ಬಯ್ಯನವರ ನಿಘಂಟು ಕೂಡಾ ಲಭ್ಯವಿದೆ.http://www.baraha.com/nighantu/index.phpನಲ್ಲಿ ಇದು ಸಿಗುತ್ತದೆ. ಅಂಕಣದಲ್ಲಿ ಪದವನ್ನು ಟೈಪಿಸಿ,"ಹುಡುಕು" ಗುಂಡಿ ಒತ್ತಿದರೆ ಪದದ ಅರ್ಥ ಬರುತ್ತದೆ.
ಬರೆ ಮನೆಯಲ್ಲ ಸ್ಮಾರ್ಟ್ ಮನೆ
ದಕ್ಷಿಣ ಕೊರಿಯಾದಲ್ಲಿ ಗೃಹಸಂಕೀರ್ಣಗಳನ್ನು ವಿನೂತನ ತಂತ್ರಜ್ಞಾನದೊಂದಿಗೆ ನಿರ್ಮಿಸುವ ಪ್ರವೃತ್ತಿ ಆರಂಭವಾಗಿದೆ. ಇವನ್ನು ಸ್ಮಾರ್ಟ್ ಮನೆಗಳು ಎಂದು ಕರೆಯಲಾಗುತ್ತದೆ.ಈಗಾಗಲೇ ನೂರು ಮನೆಗಳು ನಿರ್ಮಾಣವಾಗಿ ಬಳಕೆಗೆ ಸಿದ್ಧವಾಗಿವೆ.ಇನ್ನೂ ಮೂವತ್ತು ಸಾವಿರ ಮನೆಗಳ ನಿರ್ಮಾಣ ಮುಂದಿನ ವರ್ಷಗಳಲ್ಲಿ ನಡೆಯಲಿದೆಯಂತೆ. ಈ ಮನೆಗಳಲ್ಲಿ ವಿಡಿಯೋ ಕ್ಯಾಮರಾವನ್ನು ಮನೆ ಬಾಗಿಲಲ್ಲಿ ಇರಿಸಿ, ಮನೆ ಬಾಗಿಲಿಗೆ ಬಂದವರನ್ನು ಒಳಗಿನಿಂದಲೇ ಟಿವಿಯ ಮೂಲಕ ನೋಡುವ ಏರ್ಪಾಡು ಇರುತ್ತದೆ.ಸಂಕೀರ್ಣದ ಗಾಳಿಯ ಗುಣಮಟ್ಟ ಅಳೆದು ಅಗತ್ಯವಾದರೆ ಶುದ್ಧಕಗಳನ್ನು ಚಾಲೂ ಮಾಡಿಸುವ ವ್ಯವಸ್ಥೆಯಿದೆ. ಹೊರಗಿರುವಾಗಲೂ ಮನೆಯಲ್ಲಿ ಏನು ನಡೆಯುತ್ತಿದೆ ಎಂದು ತಿಳಿಯುವ ಅನುಕೂಲತೆಯಿದೆ.ಎಲ್ ಜಿ ಇಲೆಕ್ಟ್ರಾನಿಕ್ಸ್ ಕಂಪೆನಿಯು ಈ ಮನೆಗಳ ತಂತ್ರಜ್ಞಾನವನ್ನು ಒದಗಿಸಿದೆ. ಮನೆಗಳಿಗೆ ವಿದ್ಯುತ್ ಪೂರೈಸುವ ತಂತಿಗಳನ್ನು ಬಳಸಿ, ಕೇಬಲ್ ಟಿವಿ, ಅಂತರ್ಜಾಲ ಸೇವೆ ಒದಗಿಸಲಾಗುತ್ತಿದೆ. ಮನೆಯ ವಾಶಿಂಗ್ ಮೆಶೀನ್ ಕೂಡಾ ಟಿವಿ ಜತೆ ಸಂಪರ್ಕ ಹೊಂದಿದ ಕಾರಣ ಬಟ್ಟೆ ಒಗೆದಾದ ತಕ್ಷಣ ಸೂಚನೆ ಸಿಗುತ್ತದೆ.
ಮುಂದಿನ ದಿನಗಳಲ್ಲಿ ಇನ್ನೂ ಆಧುನಿಕ ತಂತ್ರಜ್ಞಾನ ಅಳವಡಿಸಿ, ಮನೆಯ ಬಾಗಿಲುಗಳನ್ನು ಧ್ವನಿ ಮೂಲಕ ನಿಯಂತ್ರಣ ಮಾಡಲು ಸಾಧ್ಯವಾಗಲಿದೆ.ಫ್ರಿಜ್ ಒಳಗಿರುವ ಸಾಮಾನುಗಳಿಗೆ ಅಳವಡಿಸಿದ ರೇಡಿಯೋ ಗುರುತು ಕಾರ್ಡ್ ಮೂಲಕ ಪ್ರಿಜ್ ಅವನ್ನು ಗುರುತಿಸಬಲ್ಲುದು. ಅವುಗಳನ್ನು ಬಳಸಿ ತಯಾರಿಸಬಹುದಾದ ಅಡುಗೆಗಳನ್ನು ಹೇಳಲೂ ಅದು ಸಮರ್ಥವಾಗಲಿದೆ.ಮನೆಯ ಕನ್ನಡಿ, ನೀವು ಧರಿಸುವ ಉಡುಗೆ ಬಗ್ಗೆ ಸಲಹೆ ನೀಡುವ, ನಿಮ್ಮ ದಿನದ ಕಾರ್ಯಕ್ರಮ ಪಟ್ಟಿಯನ್ನು ತೋರಿಸುವ ಕೆಲಸವನ್ನೂ ಮಾಡಲಿದೆಯಂತೆ!
ಎರಡು ಸಾವಿರ ವರ್ಷಗಳ ಹಿಂದಿನ ಕಂಪ್ಯೂಟರ್!
ಎರಡು ಸಾವಿರ ವರ್ಷಗಳ ಹಿಂದೆಯೇ ಬಳಕೆಯಾಗುತ್ತಿದೆಯೆನ್ನಲಾದ ಸಾದೃಶ ಕಂಪ್ಯೂಟರನ್ನು ನೌಕೆಯ ಅವಶೇಷಗಳಲ್ಲಿ ಗುರುತಿಸಲಾಗದೆ. ರೋಮನ್‌ರು ಗ್ರಹಣ ಸಂಭವಿಸಬಹುದಾದ ದಿನಗಳ ಲೆಕ್ಕಾಚಾರಕ್ಕೆ ಬಳಸುತ್ತಿದ್ದರೆನ್ನಲಾದ ಈ ಸಾಧನ,ಗ್ರಹಗಳ ಚಲನೆಯ ಬಗ್ಗೆ ಲೆಕ್ಕಾಚಾರ ಮಾಡಲೂ ಬಳಕೆಯಾಗುತ್ತಿತ್ತು ಎಂದು ಗುಮಾನಿಯಿದೆ.ಸಾವಿರದೊಂಭೈನೂರರ ವೇಳೆಗೇ ಈ ಕಂಪ್ಯೂಟರಿನ ಮೊದಲ ಅವಶೇ಼ಷಗಳು ಪತ್ತೆಯಾದವಾದರೂ, ನಂತರ ಮತ್ತೂ ಎಂಭತ್ತೊಂದು ಭಾಗಗಳು ಪತ್ತೆಯಾಗಿವೆ. ಈ ಸಾಧನ ಕ್ರಿಸ್ತಪೂರ್ವ ನೂರನೇ ಇಸವಿಯದಾಗಿರಬಹುದು ಎಂದು ವಿಶ್ಲೇಷಣೆಗಳ ಮೂಲಕ ಕಂಡುಕೊಳ್ಳಲಾಗಿದೆ.ಇದರ ಆಕೃತಿ ಮೇಲ್ನೋಟಕ್ಕೆ ಗಡಿಯಾರದ ಹಾಗಿದ್ದಿರಬಹುದು ಎಂದು ವಿಜ್ಞಾನಿಗಳ ಊಹೆ.
ವಿಮಾನ ನಿಲ್ದಾಣಗಳಲ್ಲಿ ಆರೆಫೈಡಿ ಬಳಕೆ
ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ಬ್ಯಾಗುಗಳನ್ನು ಜತೆಗೆ ಇರಿಸಿಕೊಳ್ಳುವಂತಿಲ್ಲ.ಅವುಗಳನ್ನು ಪ್ರತ್ಯೇಕವಾಗಿ ವಿಮಾನಗಳ ಸರಕು ಸಾಗಾಣಿಕ ಭಾಗದಲ್ಲಿ ವಿಮಾನಗಳಲ್ಲಿ ಹೇರಲಾಗುತ್ತದೆ.ಬ್ಯಾಗುಗಳನ್ನು ವಿಮಾನದಲ್ಲಿ ಹೇರಲು ಸ್ವಯಂಚಾಲಿ ವ್ಯವಸ್ಥೆ ಇರುತ್ತದೆ. ಸಾಗಣಾ ಪಟ್ಟಿಗಳ ಮೇಲಿರಿಸಿದ ಬ್ಯಾಗುಗಳು, ವಿಮಾನದತ್ತ ಚಲಿಸುತ್ತಿದ್ದಂತೆ, ಅವುಗಳಿಗೆ ಹಾಕಿರುವ ಪಟ್ಟಿಯಲ್ಲಿ ದಾಖಲಾದ ವಿವರಗಳನ್ನು ಓದಿ, ಅದರ ಮಾಲಕ ಹೋಗಬೇಕಾದ ಸ್ಥಳದತ್ತ ಸಾಗುವ ವಿಮಾನಕ್ಕೆ ಅವುಗಳ ಹೇರಿಕಾ ಕಾರ್ಯ ನಡೆದು ಬಿಡುತ್ತದೆ. ಬ್ಯಾಗುಗಳ ಪಟ್ಟಿಗಳನ್ನು ಓದಲು ಲೇಸರ್ ಬಳಕೆಯಾಗುತ್ತದೆ. ಪಟ್ಟಿ ಒದ್ದೆಯಾದರೆ, ಮುದ್ದೆಯಾದರೆ,ಅಥವಾ ಪಟ್ಟಿ ಓದುವ ಸಾಧನದ ಮುಂಭಾಗಕ್ಕೆ ಸರಿಯಾಗಿ ಬರದೆ ಓದುವಿಕೆ ಸರಿಯಾಗಿ ನಡೆಯದೆ,ಬ್ಯಾಗುಗಳು ತಪ್ಪು ವಿಮಾನಕ್ಕೆ ಹೇರಿಕೆಯಾಗುವುದು ಆಗಾಗ ನಡೆಯುತ್ತದೆ.ರೇಡಿಯೋ ತರಂಗಗಳ ಮೂಲಕ ತಮ್ಮಲ್ಲಿ ದಾಖಲಾಗಿರುವ ವಿವರಗಳನ್ನು ಓದುವ ಸಾಧನಕ್ಕೆ ಪ್ರೇಷಿಸುವ ಆರೆಫೈಡಿಯನ್ನು ಬಳಸುವ ಪ್ರಯತ್ನಗಳೀಗ ನಡೆದಿವೆ. ಆರೆಫೈಡಿಯು ಮಾಮೂಲಿ ಪಟ್ಟಿಗಳಿಗಿಂತ ಹತ್ತು ಪಟ್ಟು ಅಧಿಕ ದುಬಾರಿಯಾಗಿರುವುದು ಒಂದು ತೊಂದರೆಯಾದರೂ, ಈ ಪಟ್ಟಿಗಳನ್ನು ಬಳಸಿದರೆ ಬ್ಯಾಗುಗಳು ತಪ್ಪು ವಿಮಾನದಲ್ಲಿ ಹೋಗುವಂತಹ ತಪ್ಪುಗಳು ನಡೆಯವು.
ಸೆಲ್‌ಫೋನ್ ಸಂಕೇತ ಸಿಗುವುದಿಲ್ಲವೇ?ಬಂದಿದೆ ಪರಿಹಾರ
ದೊಡ್ಡ ಕಟ್ಟಡಗಳು ಅಡ್ಡವಾಗಿದ್ದರೆ, ಮನೆ ತಗ್ಗಿನಲ್ಲಿದ್ದರೆ ಸೆಲ್‌ಫೋನ್ ಸಂಕೇತಗಳು ಮನೆಯೊಳಗೆ ಸಿಗದಿರುವುದಿದೆ. ಇದೀಗ ಅಮೆರಿಕನ್ ಕಂಪೆನಿಯೊಂದು ಸಂಕೇತವನ್ನು ಪ್ರಬಲಗೊಳಿಸುವ ಕಿರು ಸಾಧನವನ್ನು ಅಭಿವೃದ್ಧಿ ಪಡಿಸಿದೆ.ಇದರಲ್ಲಿ ಒಂದು ಕಿರು ಆಂಟೆನಾವೂ ಇದೆ. ಬೇಕೆಂದರೆ, ಇದಕ್ಕೆ ಕೇಬಲ್ ಸಂಪರ್ಕಿಸಿ, ಕೇಬಲ್‌ನ್ನು ಮನೆಯ ಹೊರಗೆ ಗೋಡೆ ಅಥವಾ ಎತ್ತರದ ಜಾಗದಲ್ಲಿರಿಸಬಹುದು.ಬೆಲೆ ನಾಲ್ಕು ನೂರು ಡಾಲರು.

Subscribe to:
Posts (Atom)