ಭಾಷೆ ಕಲಿಯಿರಿ,ಕಲಿಸಿರಿ!!
ಭಾಷೆ ಕಲಿಕೆಗೆ ಅಂತರ್ಜಾಲದ ಸಮುದಾಯದ ನೆರವು ಸಿಗುತ್ತದೆ.ಯಾವುದೇ ಭಾಷೆಯನ್ನು ಕಲಿಯಲು ಅದರ ಅಪರಿಮಿತ ಬಳಕೆಯೇ ಸುಲಭದ ಹಾದಿ ಎನ್ನುವುದನ್ನು ಒಪ್ಪುತ್ತೀರಾ? ಎಷ್ಟೋ ವೇಳೆ ನಮಗೆ ಭಾಷೆ ಕಲಿಯಲು ಕಲಿಸುವವರಿಲ್ಲದಿರುವುದೂ ಕಾರಣವಾಗಿರುತ್ತದೆ. ಮಾತಾನಾಡುವಾಗ,ಬರೆಯುವಾಗ ತಪ್ಪುಗಳು ಆಗುತ್ತವೆ ಎನ್ನುವ ಹಿಂಜರಿಕೆಯಿಂದಲೂ ನಮಗೆ ಕಲಿಕೆಯಲ್ಲಿ ಪೂರ್ಣವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. www.livemocha.com ಅಂತಹ ತಾಣಗಳು ಉಚಿತವಾಗಿ ಭಾಷೆ ಕಲಿಕೆಗೆ ನೆರವಾಗುತ್ತವೆ.ಕನ್ನಡವೂ ಸೇರಿದಂತೆ ಮೂವತ್ತಕ್ಕೂ ಹೆಚ್ಚು ಭಾಷೆಗಳ ಕಲಿಕೆಗೆ ಇಲ್ಲಿ ನೆರವು ಸಿಗುತ್ತದೆ. ನಿಮಗೆ ಯಾವ ಭಾಷೆ ಕಲಿಯಬೇಕು ಮತ್ತು ಯಾವ ಭಾಷೆಯನ್ನು ಬಲ್ಲಿರಿ ಎಂದು ನೋಂದಾಯಿಸಿಕೊಳ್ಳುವ ವೇಳೆ ತಿಳಿಸಿದರೆ, ನಿಮಗೆ ಬಲ್ಲ ಭಾಷೆಯಲ್ಲಿ ಕಲಿಯಬೇಕಾದ ಭಾಷೆಯಲ್ಲಿ ತಿಳಿಸಬಲ್ಲ ಜನರ ಸಮುದಾಯಕ್ಕೆ ನಿಮ್ಮನ್ನು ಸಂಪಕಿಸಲಾಗುತ್ತದೆ. ನಿಮ್ಮ ಉಚ್ಛಾರವನ್ನು ಈ ಸಮುದಾಯದ ಆನ್‌ಲೈನ್ ಇರುವ ಸದಸ್ಯರು ಆಲಿಸಿ, ಸಲಹೆ ನೀಡುವರು. ನಿಮ್ಮ ಬರವಣಿಗೆಯೂ ಹೀಗೆ ಪ್ರತಿಕ್ರಿಯೆಗಿಟ್ಟಿಸಿಕೊಂಡು,ನಿಮ್ಮ ತಪ್ಪು-ಒಪ್ಪುಗಳು ನಿಮಗೆ ತಿಳಿಯುತ್ತವೆ. ಅದೇ ವೇಳೆ ನೀವೂ ನಿಮಗೆ ತಿಳಿದಿರುವ ಭಾಷೆಯಲ್ಲಿ ಇತರರಿಗೆ ನೆರವಾಗುತ್ತೀರಿ.
-----------------------------------------------------------------
ವಿಂಡೋಸ್7 ಇಲ್ಲವೇ,ಉಬುಂಟು ಇದಯಲ್ಲಾ..?
ವಿಂಡೋಸ್ 7 ಕಳೆದ ಶುಕ್ರವಾರ ಬಿಡುಗಡೆಯಾಯಿತು.ಇದಕ್ಕೆ ಮೊದಲು ವಿಂಡೋಸ್ ವಿಸ್ತಾ ಕಂಪ್ಯೂಟರ್ ಕಾರ್ಯನಿರ್ವಹಣಾ ತಂತ್ರಾಂಶವನ್ನು ಬಿಡುಗಡೆ ಮಾಡಿ,ನಿರೀಕ್ಷಿಸಿದ ಯಶಸ್ಸು ಗಳಿಸಲು ವಿಫಲವಾದ ಮೈಕ್ರೋಸಾಫ್ಟ್ ಕಂಪೆನಿ,ತನ್ನ ಗ್ರಾಹಕರ ವಿಶ್ವಾಸವನ್ನು ಉಳಿಸಿಕೊಳ್ಳಲು, ವಿಂಡೋಸ್ 7 ಯಶಸ್ಸು ಗಳಿಸುವುದು ಅಗತ್ಯವಾಗಿದೆ. ಈ ಸಲ ಮೈಕ್ರೋಸಾಫ್ಟ್ ಕಂಪೆನಿಯು ಯಂತ್ರಾಂಶ ತಯಾರಕರ ಜತೆ ಕೆಲಸ ಮಾಡಿ,ಅವರ ಯಂತ್ರಾಂಶವು ಹೊಸ ವ್ಯವಸ್ಥೆಯಲ್ಲಿ ಸರಾಗವಾಗಿ ಕೆಲಸ ಮಾಡುವಂತೆ,ವಿನ್ಯಾಸಗೊಳಿಸಲು ಶ್ರಮ ತೆಗೆದುಕೊಂಡಿದೆ.ಹಳೆಯ ಆವೃತ್ತಿಗಳಲ್ಲಿ ಕೆಲಸ ಮಾಡುತ್ತಿದ್ದ ಯಂತ್ರಾಂಶಗಳು ಇದರಲ್ಲಿ ಕೆಲಸ ಮಾಡುವಂತೆ ಮಾಡುವ ಆಯ್ಕೆಯನ್ನು ನೀಡಲಾಗಿದೆ.ಅಲ್ಲದೆ ವಿಂಡೋಸ್ 7ನ ಯಂತ್ರಾಂಶ ಅಗತ್ಯ ಮಾಡಲು ಪ್ರಯತ್ನಿಸಲಾಗಿದೆ.ಸಂಸ್ಕಾರಕ 1ಗಿಗಾಹರ್ಟ್ಸ್,ಕನಿಷ್ಠ512ಎಂಬಿ ರಾಮ್(ಒಂದು ಜಿಬಿ ಉತ್ತಮ),16ಜಿಬಿ ಹಾರ‍್ಡ್‌ಡಿಸ್ಕ್ ಅವಕಾಶ ಮತ್ತು ಡೈರೆಕ್ಟ್9 ಗ್ರಾಫಿಕ್ಸ್ ಬೇಕು.ಹೊಸ ಕಾರ್ಯನಿರ್ವಹಣಾ ತಂತ್ರಾಂಶದ ಬೆಲೆ ಸುಮಾರು ಆರು ಸಾವಿರ.ಮೂವತ್ತೆರಡು ಬಿಟ್ ಮತ್ತು ಅರುವತ್ತನಾಲ್ಕು ಬಿಟ್ ಕಂಪ್ಯೂಟರುಗಳಿಗೆ ವಿನ್7 ಸಿಗುತ್ತದೆ.
ಉಳ್ಳವರು ದುಡ್ಡು ತೆತ್ತು ವಿಂಡೋಸ್7 ಖರೀದಿಸ ಬಹುದು,ನಾವೇನು ಮಾಡುವುದು-ಬಡವರಯ್ಯಾ ಎನ್ನುವವರು ಯೋಚಿಸಿಬೇಕಾಗಿಲ್ಲ. ವಿನ್ 7ಗೆ ಎಲ್ಲಾ ವಿಧದಲ್ಲೂ ಸ್ಪರ್ಧೆ ನೀಡಬಲ್ಲ ಲಿನಕ್ಸ್ ಕಾರ್ಯನಿರ್ವಹಣಾ ತಂತ್ರಾಂಶ ಉಬುಂಟು9.10 ಹೊಸ ಆವೃತ್ತಿ ರಾಜ್ಯೋತ್ಸವದ ವೇಳೆ ನಿಮ್ಮ ಬಳಕೆಗೆ ಲಭ್ಯವಿದೆ.ಇದನ್ನು ಉಚಿತವಾಗಿ ಬಳಸಬಹುದು.ಕನ್ನಡದ ಬಳಕೆಯನ್ನೂ ಸರಾಗವಾಗಿಸುವ ಉಬುಂಟು,ಬಳಕೆದಾರಸ್ನೇಹೀ ಗುಣ ಹೊಂದಿದೆ.ಅಂತರ್ಜಾಲ,ವಿಡಿಯೋ,ಆಡಿಯೋ,ಪದಸಂಸ್ಕರಣೆ ಇವೆಲ್ಲವನ್ನೂ ಸುಗಮವಾಗಿಸುವ ಉಬುಂಟುವನ್ನು ಕಂಪ್ಯೂಟರಿನಲ್ಲಿ ಸ್ಥಾಪಿಸಿಕೊಂಡರೆ ವಿಂಡೋಸ್ ಹಂಗೇ ಬೇಡ.
-----------------------------------------------------------------------
ಲಿನಕ್ಸಾಯಣ
ಲಿನಕ್ಸ್ ಕಂಪ್ಯೂಟರ್ ಕಾರ್ಯನಿರ್ವಹಣ ತಂತ್ರಾಂಶವು ಮುಕ್ತ ಮತ್ತು ಉಚಿತವಾಗಿ ಸಿಗುತ್ತದೆ.ಉಬುಂಟು,ಫೆಡೋರಾ,ಸೂಸಿ,ಮ್ಯಾಂಡ್ರಿವಾ,ಮಿಂಟ್ ಹೀಗೆ ಹಲವು ಲಿನಕ್ಸ್ ತಂತ್ರಾಂಶದ ಹಲವು ಪ್ರಭೇದಗಳು ಲಭ್ಯವಿವೆ.ಆದರೆ ಇವನ್ನು ಬಳಸಲು ಕಂಪ್ಯೂಟರ್‌ಗೆ ಹೊಸಬರಾದವರಿಗೆ ತುಸು ಹಿಂಜರಿಕೆ ಇರುವುದು ಸ್ವಾಭಾವಿಕ.ಅಂತವರಿಗೆ ಸಹಾಯ ಮಾಡಲು,ಅವರ ಅನುಮಾನಗಳನ್ನು ನೀಗಿಸಲು ಇರುವ ತಾಣವೇ ಲಿನಕ್ಸಾಯಣ.ನೆಟ್(http://linuxaayana.net
ಇಲ್ಲಿ ಲಿನಕ್ಸಿನಲ್ಲಿ ಕನ್ನಡ ಬಳಕೆ ಹೇಗೆ,ಅಂತರ್ಜಾಲ ಜಾಲಾಟ,ನಿಸ್ತಂತು ಜಾಲದ ಬಳಕೆಗೆ ಕಂಪ್ಯೂಟರನ್ನು ಸಿದ್ಧಗೊಳಿಸುವುದು ಹೇಗೆ ಮುಂತಾದ ವಿಷಯಗಳ ಬಗೆಗೆ ಬರಹಗಳಿವೆ.ಬರಹಗಳನ್ನು ಸೇರಿಸಲು ಮತ್ತು ತಿದ್ದಲೂ ಅವಕಾಶವಿದೆ.ಓಂಶಿವಪ್ರಕಾಶ್ ಬರೆದಿರುವ ಲಿನಕ್ಸಾಯಣ ಸರಣಿ ಬರಹಗಳು ಇಲ್ಲಿ ಲಭ್ಯವಿರುತ್ತವೆ.ಟ್ವಿಟರಿನಲ್ಲಿಯೂ ಲಿನಕ್ಸಾಯಣದ ಬಗೆಗೆ ಸಂದೇಶಗಳು ಬೇಕಿದ್ದರೆ,twitter.com/linuxaayana ಪುಟವನ್ನು ನೋಡಿ.
------------------------------------------------------------------------
ಕ್ರೈಮ್ ಮ್ಯಾಪ್ ನೀಡುವ ವೆಬ್‌ಸೈಟ್
ಇಂಗ್ಲೆಂಡ್ ಮತ್ತು ವೇಲ್ಸಿನಲ್ಲಿ ಅಪರಾಧ ಪ್ರಕರಣಗಳ ಬಗೆಗೆ ಮಾಹಿತಿ ಒದಗಿಸಲು ಅಂತರ್ಜಾಲ ತಾಣವೊಂದನ್ನು ಸಿದ್ಧಗೊಳಿಸಲಾಗಿದೆ.ತಾಣದಲ್ಲಿ ಕಳ್ಳತನ,ದರೋಡೇ,ಹಿಂಸೆ,ವಾಹನಗಳನ್ನೊಳಗೊಂಡ ಪ್ರಕರಣಗಳು ಮತ್ತು ಸಮಾಜ ಬಾಹಿರ ಚಟುವಟಿಕೆಗಳ ಬಗೆಗೆ ಮಾಹಿತಿಯಿದೆ. ವರ್ತಮಾನದಲ್ಲಿ ನಡೆದ ಪ್ರಕರಣಗಳು,ಹಳೆಯ ಪ್ರಕರಣಗಳ ಬಗೆಯೂ ಅಲ್ಲಿ ನಕಾಶೆ ಮೂಡುತ್ತದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ, ಈಗ ಒಂದು ಪ್ರದೇಶದಲ್ಲಿ ಪ್ರಕರಣಗಳ ಸಂಖ್ಯೆ ಇಳಿದಿವೆಯೋ ಅಲ್ಲ ಹೆಚ್ಚಿವೆಯೋ ಎಂಬುದನ್ನು ಹೋಲಿಸಿನೋಡಲೂ ಸಾಧ್ಯವಾಗುತ್ತದೆ.ಈ ತಾಣ ಎಷ್ಟು ಜನಪ್ರಿಯವಾಗಿದೆ ಎಂದರೆ,ತಾಣವನ್ನು ವೀಕ್ಷಿಸಲು ಬಯಸುವವರ ಸಂಖ್ಯೆ ಸರ್ವರಿನ ಸಾಮರ್ಥ್ಯವನ್ನು ಮೀರಿ ಇರುವುದು ಸಾಮಾನ್ಯವಾಗಿ ಬಿಟ್ಟಿದೆ.ಇಂಗ್ಲೆಂಡಿನ 43 ಪೊಲೀಸ್ ಬಲಗಳು ಈ ರೀತಿಯ ತಾಣವನ್ನು ನಡೆಸುತ್ತಿವೆ.
---------------------------------------------------------------------------
ಹೊಸ ಸ್ಪರ್ಶಸಂವೇದಿ ಮೌಸ್
ಆಪಲ್ ಕಂಪೆನಿಯು ಗುಂಡಿಗಳಿಲ್ಲದ ಹೊಸ ಸ್ಪರ್ಶಸಂವೇದಿ ಮೌಸನ್ನು ಹೊರ ತಂದಿದೆ. ಈ ಮೌಸ್ ಐಫೋನ್ ಸಾಧನದ ಸ್ಪರ್ಶ ಸಂವೇದಿ ತೆರೆಯ ಸೌಲಭ್ಯಗಳನ್ನು ಕಂಪ್ಯೂಟರಿನಲ್ಲಿ ಪಡೆಯಲು ನೆರವಾಗುತ್ತದೆ. ಸ್ಪರ್ಶಿಸಿದ ಬಗೆಯಿಂದಲೇ ನೋಡುತ್ತಿರುವ ಪುಟದ ಮೇಲ್ಭಾಗ ಅಥವ ಕೆಳಭಾಗದತ್ತ ಸಾಗುವ ಸೌಕರ್ಯ ಇಲ್ಲಿ ಸಿಗುತ್ತದೆ. ಕ್ಲಿಕ್ಕಿಸಿದರೆ,ಬಲ-ಎಡ ಗುಂಡಿಗಳ ಕ್ಲಿಕ್ಕಿಸುವಿಕೆ ಇವೆಲ್ಲವನ್ನೂ ಅದು ಸ್ಪರ್ಶಿಸಿದ ರೀತಿಯಿಂದಲೇ ತಿಳಿದುಕೊಳ್ಳುತ್ತದೆ. ಕ್ಯಾಪಾಸಿಟಿವ್ ಸಂವೇದಕಗಳಿಂದ ಇದನ್ನು ತಯಾರಿಸಲಾಗಿದೆ.ಬ್ಲೂಟೂತ್ ಮೂಲಕ ಇದನ್ನು ಕಂಪ್ಯೂಟರಿಗೆ ನಿಸ್ತಂತು ಮಾಧ್ಯಮದ ಮೂಲಕ ಸಂಪರ್ಕಿಸಲಾಗುತ್ತದೆ. ಆದ್ದರಿಂದ ಕೇಬಲ್ ಮುಕ್ತವಾಗಿರುತ್ತದೆ.ಇದು ಕೆಲಸ ಮಾಡಲು ಆಪಲ್ ಕಂಪ್ಯೂಟರ್ ಮತ್ತು ಲೆಪರ್ಡ್ ಕಂಪ್ಯೂಟರ್ ಕಾರ್ಯನಿರ್ವಹಣಾ ತಂತ್ರಾಂಶ ಬೇಕು. ಹೊಸ ಕಂಪ್ಯೂಟರ್ ಮತ್ತು ಮ್ಯಾಕ್‌ಬುಕ್ ನೋಟ್‌ಬುಕ್‌ಗಳ ಜತೆ ಈ ಮೌಸ್ ಬಳಕೆಗೆ ಸಿಗಲಿದೆ.ಬೆಲೆ ಸುಮಾರು ಎಪ್ಪತ್ತು ಡಾಲರುಗಳು.
-----------------------------------------------------
ನುಕ್ ಎನ್ನುವ ಇ-ಬುಕ್ ರೀಡರ್
ನುಕ್ ಎನ್ನುವುದು ಹೊಸ ಇ-ಬುಕ್ ರೀಡರ್ ಸಾಧನ.ಕಿಂಡ್ಲ್ ಎನ್ನುವ ಸಾಧನದಂತೆಯೇ ಇದು ಪುಸ್ತಕವನ್ನು ಕೈಯಲ್ಲಿ ಹಿಡಿದು ಓದಿದ ಅನುಭವ ನೀಡುವ ಸಾಧನ.ಬ್ಯಾಟರಿಯಿಂದ ಕೆಲಸ ಮಾಡುವ ಕಾರಣ ಇದನ್ನು ಬೇಕೆಂದಲ್ಲಿಗೆ ಒಯ್ಯಬಹುದು.ಬಾರ್ನೆಸ್ ಅಂಡ್ ನೋಬ್ಲ್ ಕಂಪೆನಿಯು ಈ ಸಾಧನವನ್ನು ಮಾರುಕಟ್ಟೆಗೆ ಒದಗಿಸಿದೆ.ಕಂಪೆನಿಯು ಪುಸ್ತಕ ಉದ್ದಿಮೆಯಲ್ಲಿ ತೊಡಗಿಸಿಕೊಂಡಿದ್ದು,ತಾನೇ ಸ್ವತ: ಇ-ಪುಸ್ತಕಗಳನ್ನು ಒದಗಿಸುತ್ತದೆ. ನುಕ್‌ಗೆ ಪುಸ್ತಕಗಳನ್ನು ಅಂಗಡಿಯ ನಿಸ್ತಂತು ಸಂಪರ್ಕದ ಮೂಲಕ ಇಳಿಸಿಕೊಳ್ಳಬಹುದು. ಇಳಿಸಿಕೊಂಡ ಪುಸ್ತಕಗಳನ್ನು ಹದಿನಾಲ್ಕು ದಿನಗಳ ಮಟ್ಟಿಗೆ ಇತರರಿಗೆ ಎರವಲು ನೀಡಬಹುದು. ಒಂದು ಪುಸ್ತಕವನ್ನು ಒಂದು ಸಲ ಮಾತ್ರಾ ಎರವಲು ನೀಡಬಹುದು.ಬೆಲೆ ಸುಮಾರು ಇನ್ನೂರೆಪ್ಪತ್ತೈದು ಡಾಲರು. ಕಿಂಡಲ್ ಸಾಧನವೂ ಇದೇ ಬೆಲೆಯಲ್ಲಿ ಲಭ್ಯ.
---------------------------------------------------------------------
*ಅಶೋಕ್‌ಕುಮಾರ್ ಎ
udayavani
久々の
-
久々に体験教室の講師をさせて頂きました。
少人数でしっかり見て回れたと思います。
今回の1番のビフォアアフター。
たった2時間でこんなにも!!!
カリカチュア教室って凄い!!!
15 hours ago





0 comments:
Post a Comment