ಶಾಲೆಯಿಂದ ವಿದ್ಯಾರ್ಥಿ ಮೇಲೆ ಗೂಡಚರ್ಯೆ!
ಅಮೆರಿಕಾದ ಪಿಲ್ಲಿಯ ಹಾರಿಂಟನ್ ಶಾಲೆ ತನ್ನ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪನ್ನು ನೀಡುತ್ತದೆ.ವಿದ್ಯಾರ್ಥಿಗಳ ಕಲಿಕೆಗೆ ನೆರವಾಗುವ ತಂತ್ರಾಂಶಗಳನ್ನು ಮತ್ತು ಇತರ ಸಂಪನ್ಮೂಲಗಳನ್ನೂ ಶಾಲೆಯ ಲ್ಯಾಪ್‌ಟಾಪ್ ಬಳಸಿ ಬಳಸಲು ಅನುಕೂಲ ಕಲ್ಪಿಸಿದೆ.ಲ್ಯಾಪ್‌ಟಾಪಿನಲ್ಲಿ ಒಂದು ವೆಬ್‌ಕ್ಯಾಮ್ ಕೂಡಾ ಲಭ್ಯವಿದೆ.ಅದನ್ನು ಶಾಲೆಯಿಂದಲೇ ಚಾಲೂ ಮಾಡಿ ನೋಡುವ ಸೌಲಭ್ಯವಿದೆ.ಈ ಸೌಲಭ್ಯವನ್ನು ಲ್ಯಾಪ್‌ಟಾಪ್ ಕಳವಾದಾಗ ಬಳಸಲು ಶಾಲೆ ಇಚ್ಛಿಸಿತ್ತು.ಕಳವು ಮಾಡಿದಾತ,ಲ್ಯಾಪ್‌ಟಾಪ್ ಅಂತರ್ಜಾಲಕ್ಕೆ ಸಂಪರ್ಕಿಸಿದಾಗ,ಆತನನ್ನು ಪತ್ತೆ ಹಚ್ಚಲು ವೆಬ್‌ಕ್ಯಾಮ್ ಬಳಸಬಹುದಲ್ಲ ಎನ್ನುವುದು ಹೀಗೆ ಮಾಡಲು ಕಾರಣ.ಇತ್ತೀಚೆಗೆ ಶಾಲೆಯು ಓರ್ವ ವಿದ್ಯಾರ್ಥಿಯ ನಡವಳಿಕೆ ಬಗ್ಗೆ,ಆತನ ತಂದೆಯಲ್ಲಿ ದೂರು ನೀಡಿತ್ತು.ಅದರ ಪ್ರಕಾರ,ವಿದ್ಯಾರ್ಥಿಯ ನಡವಳಿಕೆ ಸರಿಯಿಲ್ಲ,ಮನೆಯಲ್ಲಾತ ವಿದ್ಯಾರ್ಥಿಗಳಿಗೆ ಹೇಳಿಸಿದಲ್ಲದ ನಡವಳಿಕೆ ಹೊಂದಿದ್ದಾನೆ.ಅದಕ್ಕೆ ಲ್ಯಾಪ್‌ಟಾಪಿನ ವೆಬ್‌ಕ್ಯಾಮ್‌ನಿಂದ ತೆಗೆದ ವಿಡಿಯೋಗಳ ಸಾಕ್ಷಿ ಇದೆ ಎಂದಿತ್ತು.ಇದೀಗ ವಿವಾದ ಎಬ್ಬಿಸಿದೆ.ಈ ರೀತಿ ಗೂಡಚರ್ಯೆ ನಡೆಸಲು ವೆಬ್‌ಕ್ಯಾಮ್ ಬಳಸಬಹುದೆಂಬ ಮುನ್ನೆಚ್ಚರಿಕೆಯನ್ನು ಶಾಲೆ ನೀಡದೆ,ವಿದ್ಯಾರ್ಥಿಯ ಖಾಸಗಿತನದ ಉಲ್ಲಂಘನೆ ಮಾಡಿದ್ದಾದರೂ ಯಾಕೆ ಎನ್ನುವ ಪ್ರಶ್ನೆಯೇ ಮಹತ್ವ ಪಡೆದಿದೆ.ವಿದ್ಯಾರ್ಥಿ ಕೆಟ್ಟ ರೀತಿಯ ನಡವಳಿಕೆ ಹೊಂದಿದ್ದು ಹೌದೇ ಎನ್ನುವ ಬಗ್ಗೆ ತಲೆಕೆಡಿಸಿಕೊಳ್ಳುವವರೇ ಇಲ್ಲ.
------------------------------------------
ದ್ರುಪಾಲನ್ನು ಕನ್ನಡಕ್ಕೆ ತರೋಣ
ದ್ರುಪಾಲ್ ಎನ್ನುವುದು ಅಂತರ್ಜಾಲತಾಣಗಳು,ಚರ್ಚಾವೇದಿಕೆಗಳು,ಸಾಮಾಜಿಕ ತಾಣಗಳಂತವನ್ನು ನಿರ್ವಹಿಸಲು ಲಭ್ಯವಿರುವ ಉಚಿತ ತಂತ್ರಾಂಶ.ಇದರಲ್ಲಿ ಬಳಕೆದಾರರಿಗೆ ಸಹಾಯ ಮತ್ತು ಸೂಚನೆಗಳು ಸ್ಥಳೀಯ ಭಾಷೆಗಳಲ್ಲೂ ಲಭ್ಯವಾಗಬೇಕು ಎನ್ನುವ ಆಶಯದ,ಅನುವಾದ ಯೋಜನೆಗಳು ಪ್ರಗತಿಯಲ್ಲಿವೆ.ದ್ರುಪಾಲನ್ನು ಕನ್ನಡಕ್ಕೆ ತರುವ ಯೋಜನೆಯೂ ಇದೆ.ಇದಕ್ಕೆ ನೆರವಾಗಲು ಬಯಸುವವರು,ತಮ್ಮ ಹೆಸರನ್ನು http://localize.drupal.org ನೋಂದಾಯಿಸಿಕೊಂಡು,ಸುಮಾರು200000ದಷ್ಟಿರುವ ವಾಕ್ಯಗಳನ್ನು ಭಾಷಾಂತರಿಸಲು ನೆರವಾಗಬಹುದು.ನೋಂದಾಯಿಸಿಕೊಂಡವರು,ಅಂತರ್ಜಾಲದ ಸಂಪರ್ಕವಿದ್ದಾಗ,ಅನುವಾದಿಸಬೇಕಾದ ಶಬ್ದಗಳು ಅಥವ ಪದಗುಚ್ಛಗಳನ್ನು ಅನುವಾದಿಸಲು ಸಾಧ್ಯವಾಗುತ್ತದೆ.ಅನುವಾದಗಳನ್ನು ಮೊದಲಾಗಿ,ಸೂಚನೆಗಳೆಂದು ಪರಿಗಣಿಸಿ,ಉಳಿಸಿಕೊಳ್ಳಲಾಗುವುದು.ಯೋಜನೆಯ ನಿರ್ವಾಹಕರು ತದನಂತರ,ಸೂಚನೆಗಳನ್ನು ಉಳಿಸಿಕೊಳ್ಳಬಹುದೇ ಎಂದು ತೀರ್ಮಾನಿಸುತ್ತಾರೆ.ಫೇಸ್‌ಬುಕ್ ಅನ್ನು ಕನ್ನಡಕ್ಕೆ ತರುವ ಯೋಜನೆಯೂ ಸಕ್ರಿಯವಾಗಿದೆ.ಅರ್ಕುಟ್ ಈಗಾಗಲೇ ಕನ್ನಡದಲ್ಲಿ ಲಭ್ಯವಿದೆ.ಅಂತರ್ಜಾಲತಾಣಗಳನ್ನು ಸ್ಥಳೀಯ ಭಾಷೆಗಳಲ್ಲಿ ಒದಗಿಸುವುದೀಗ ಹೊಸ ಫ್ಯಾಶನ್.
-------------------------------------------------------
ಇ-ವಿದ್ಯಾ
ತಂತ್ರಜ್ಞಾನದಿಂದ ಮೌಲ್ಯವರ್ಧಿತ ಕಲಿಕೆಗಾಗಿನ ರಾಷ್ಟ್ರೀಯ ಕಾರ್ಯಕ್ರಮ(nptel) ಸಹಿತ ವಿವಿಧ ಮೂಲಗಳಿಂದ ಅತ್ಯುಚ್ಛ ಮಟ್ಟದ ಬಹುಮಾಧ್ಯಮ ಶೈಕ್ಷಣಿಕ ವಿಷಯಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸಲು ಬೆಳಗಾವಿಯ ವಿಶ್ವೇಶ್ವರಾಯ ತಾಂತ್ರಿಕ ವಿಶ್ವವಿದ್ಯಾಲಯ ಯೋಜನೆ ಹಮ್ಮಿಕೊಂಡಿದೆ.ಇ-ವಿದ್ಯಾ ಎಂಬ ಹೆಸರಿನ ಈ ಕಾರ್ಯಕ್ರಮದಲ್ಲಿ ಕಾಲೇಜುಗಳಲ್ಲಿ ಸರ್ವರ್ ಅನ್ನು ಸ್ಥಾಪಿಸಿ,ಅದರ ಮೂಲಕ,ನೋಂದಾಯಿಸಿಕೊಂಡ ವಿದ್ಯಾರ್ಥಿಗಳು,ಶಿಕ್ಷಕರಿಗೆ ಈ ಕಲಿಕಾವಸ್ತುಗಳನ್ನು ತಲುಪಿಸಲು ಯೋಜಿಸಿದೆ.ಇಂತಹ ಒಂದು ಸರ್ವರನ್ನು ನಿಟ್ಟೆಯ ಎನ್ ಎಮ್ ಎ ಎಂ ತಾಂತ್ರಿಕ ಮಹಾವಿದ್ಯಾಲಯದಲ್ಲೂ ಸ್ಥಾಪಿಸಲಾಗಿದ್ದು.ಇದೀಗ ಬಳಕೆಗೆ ಲಭ್ಯವಿದೆ.ಮುನ್ನೂರು ಜಿಬಿಗಳಷ್ಟು ವಿಡಿಯೋ-ಆಡಿಯೋ ಇತ್ಯಾದಿ ಪರಿಕರಗಳನ್ನು ಕಾಲೇಜಿನ ಕಂಪ್ಯೂಟರ್ ಜಾಲದ ಮೂಲಕ ಪಡೆಯುವ ಸೌಲಭ್ಯವಿದ್ದು,ಕಾಲೇಜಿನಲ್ಲೇ ಸರ್ವರ್ ಇರುವ ಕಾರಣ,ಅಂತರ್ಜಾಲಕ್ಕೆ ಸಂಪರ್ಕಿಸದೇ ಪರಿಕರಗಳನ್ನು ಬಳಸಿಕೊಳ್ಳಬಹುದು.
--------------------------------------------------------------------------
ಗೂಗಲ್‌ನಿಂದ ವಿದ್ಯುಚ್ಛಕ್ತಿ ಮಾರಾಟಕ್ಕೂ ಪದಾರ್ಪಣೆ
ಗೂಗಲ್ ಎನರ್ಜಿ ಎನ್ನುವ ಹೊಸ ವಿದ್ಯುಚ್ಛಕ್ತಿ ಕಂಪೆನಿಯನ್ನು ಸ್ಥಾಪಿಸಿರುವ ಗೂಗಲ್ ಕಂಪೆನಿಯು,ವಿದ್ಯುಚ್ಛಕ್ತಿಯನ್ನು ಖರೀದಿಸಲು ಮತ್ತು ಮಾರಾಟಕ್ಕೆ ಅನುಮತಿಯನ್ನು ಪಡೆದುಕೊಂಡಿದೆ.ಈ ಅನುಮತಿ ಅಮೆರಿಕಾದಲ್ಲಿ ಅನ್ವಯವಾಗುತ್ತದೆ ಎನ್ನುವುದನ್ನು ಬೇರೆ ಹೇಳಬೇಕಿಲ್ಲವಷ್ಟೇ?ವಿದ್ಯುಚ್ಛಕ್ತಿಯನ್ನು ಖರೀದಿಸಿ,ಅಗತ್ಯವಿರುವವರಿಗೆ ಸಗಟಾಗಿ ಮಾರಾಟ ಮಾಡಲು ಕಂಪೆನಿಗೆ ಪರವಾನಗಿ ಲಭಿಸಿದೆ.ಸೌರಶಕ್ತಿಯಂತಹ ಮೂಲಗಳಿಂದ ವಿದ್ಯುತ್ ಉತ್ಪಾದಿಸಿ,ಅದನ್ನು ಮಾರಾಟ ಮಾಡುವುದು ಗೂಗಲ್‌ನ ಬಹುಕಾಲದ ಕನಸು.
---------------------------------------------------------
ಫೊಟೋಶಾಪ್ ತಂತ್ರಾಂಶಕ್ಕೆ ಇದೀಗ ಇಪ್ಪತ್ತು ವರ್ಷ
ಫೊಟೋಶಾಪ್ ತಂತ್ರಾಂಶವು ಚಿತ್ರಗಳನ್ನು ಮಾರ್ಪಡಿಸಲು ಬಳಕೆಯಾಗುವ ಅತ್ಯಂತ ಜನಪ್ರಿಯ ತಂತ್ರಾಂಶ.ಇದು ಈಗ ಎರಡು ದಶಕಗಳನ್ನು ಪೂರೈಸಿ,ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿದೆ.ಲಿನಕ್ಸ್ನಲ್ಲಿ ಇಂಕ್‌ಸ್ಕೇಪ್,ಜಿಂಪ್ ಮುಂತಾದ ಮುಕ್ತ ತಂತ್ರಾಂಶಗಳು ಇದೇ ರೀತಿಯ ಸವಲತ್ತುಗಳನ್ನು ನೀಡಿ,ಫೊಟೋಶಾಪ್‌ಗೆ ಸ್ಪರ್ಧೆ ನೀಡಿದರೂ,ಅಡೋಬ್ ಕಂಪೆನಿಯ ಈ ತಂತ್ರಾಂಶ ಇನ್ನೂ ತನ್ನ ಜನಪ್ರಿಯತೆ ಉಳಿಸಿಕೊಂಡಿದೆ.
--------------------------------------------
ಸುಲಭ ಲ್ಯಾಪ್‌ಟಾಪ್
ಅಲೆಕ್ಸ್ ಎನ್ನುವ ಹೊಸ ಲ್ಯಾಪ್‌ಟಾಪನ್ನು ಕಂಪ್ಯೂಟರಿನ ಬಳಕೆಯಲ್ಲಿ ಪರಿಣತರಲ್ಲದವರಿಗಾಗಿಯೇ ಬಿಡುಗಡೆ ಮಾಡಲಾಗಿದೆ.ಅಲೆಕ್ಸ್‌ನಲ್ಲಿ ಅಂತರ್ಜಾಲ ಜಾಲಾಟ,ಮಿಂಚಂಚೆ,ಪದಸಂಸ್ಕರಣ ಇತ್ಯಾದಿ ಜನಪ್ರಿಯ ಚಟುವಟಿಕೆಗಳನ್ನು ಸುಲಭವಾಗಿ ಮಾಡಲು ತಂತ್ರಾಂಶಗಳನ್ನು ನೀಡಲಾಗಿದೆ. ಈ ತಂತ್ರಾಂಶವು ಲಿನಕ್ಸಿನಂತಹದ್ದೇ ಕಾರ್ಯನಿರ್ವಹಣಾ ತಂತ್ರಾಂಶದ ಬಲದಲ್ಲಿ ಕೆಲಸ ಮಾಡುತ್ತವೆ.ಅಂತರ್ಜಾಲ ಸಂಪರ್ಕ,ದೂರವಾಣಿ ಮೂಲಕ ಸಹಾಯವಾಣಿಗಳಿಗಾಗಿ ಮಾಸಿಕ ನಲುವತ್ತು ಡಾಲರುಗಳಷ್ಟು ಶುಲ್ಕವನ್ನು ಬಳಕೆದಾರರು ನೀಡಬೇಕಾಗುತ್ತದೆ.
Udayavani
Monday, February 22, 2010
Monday, February 15, 2010
ಕಾಲೇಜು ಬಸ್ಸಿನಲ್ಲಿ ನಿಸ್ತಂತು ಜಾಲ ತಂದ ಮಾಯಾಜಾಲ

ತಾಸುಗಟ್ಟಲೆ ಪಯಣಿಸಿ,ಕಾಲೇಜಿಗೆ ತಲುಪುವ ವಿದ್ಯಾರ್ಥಿಗಳು ಬಸ್ಸಿನಲ್ಲಿ,ಸುಮ್ಮನೆ ಹರಟೆ ಕೊಚ್ಚುವುದು,ಗಲಾಟೆ ಮಾಡುವುದು ಸಾಮಾನ್ಯ.ಆದರೆ ಅಮೆರಿಕಾದ ಟ್ಯೂಕ್ಸನ್‌ನ ಶಾಲಾ ಬಸ್ಸಿನಲ್ಲಿ ಮೊಬೈಲ್ ರೌಟರ್ ಅನ್ನು ಬಳಸಿ,ಚಲಿಸುವ ಬಸ್ಸಿನಲ್ಲಿ ನಿಸ್ತಂತು ಅಂತರ್ಜಾಲ ಸೇವೆ ಆರಂಭಿಸಿದ ಬಳಿಕ,ಪರಿಸ್ಥಿತಿ ಸಂಪೂರ್ಣ ಬದಲಾಗಿದೆ.ಈಗ ವಿದ್ಯಾರ್ಥಿಗಳು ತಮ್ಮ ಲ್ಯಾಪ್‌ಟಾಪಿನಲ್ಲಿ ಅಂತರ್ಜಾಲಕ್ಕೆ ಸಂಪರ್ಕಿಸಿ,ಕ್ಲಾಸಿನಲ್ಲಿ ನೀಡಿದ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಲು ಯತ್ನಿಸುವುದೋ,ಅಲ್ಲ ಅಂತರ್ಜಾಲ ಜಾಲಾಡುವುದೋ ಮಾಡುತ್ತಾ,ಬಸ್ಸಿನಲ್ಲಿ ಶಾಂತ ಪರಿಸ್ಥಿತಿ ಇರುತ್ತದೆ ಎಂದು ಬಸ್ಸಿನ ನಿರ್ವಾಹಕರು ಹೇಳುತ್ತಾರೆ ಎಂದು ನ್ಯೂಯಾರ್ಕ್‌ಟೈಮ್ಸ್ ವರದಿ ಮಾಡಿದೆ.ಅಟೊನೆಟ್ ಕಂಪೆನಿಯು ಒದಗಿಸಿದ ಮೊಬೈಲ್ ರೌಟರನ್ನಿದರಲ್ಲಿ ಬಳಸಲು ಸುಮಾರು ಹತ್ತು ಸಾವಿರ ಆರಂಭಿಕ ಮತ್ತು ತಿಂಗಳಿಗೆ ಮೂರು ಸಾವಿರ ಖರ್ಚು ಬರುತ್ತದೆಯಂತೆ.ನಮ್ಮ ಹೆದ್ದಾರಿಗಳಲ್ಲಿನ ಹೊಂಡಗಳಲ್ಲಿ ಎದ್ದು-ಬಿದ್ದು ಓಡುವ ಬಸ್ಸುಗಳಲ್ಲಿ ಅಂತರ್ಜಾಲ ಇದ್ದರೂ ಲ್ಯಾಪ್‌ಟಾಪ್ ತೆರೆಯುವ ಧೈರ್ಯ ಯಾರಿಗೆ ಬರಬೇಕು ಅಲ್ಲವೇ?
--------------------------------------------
ಗೂಗಲ್ ಬುಸುಗುಟ್ಟುತ್ತಿದೆ!
ಗೂಗಲ್ ಕೂಡಾ ಟ್ವಿಟರ್ ಅಂತಹದೇ ಸೇವೆ ನೀಡುವ ಸಾಹಸಕ್ಕಿಳಿದಿದೆ.ಗೂಗಲ್ ಬಜ್(buzz) ಎಂಬ ಹೊಸ ಸೇವೆಯು ಗೂಗಲ್‌ನ ಮಿಂಚಂಚೆಯ ಒಳಗೇ ಸಿಗಲಾರಂಭಿಸಿದೆ.ಇದರಲ್ಲಿ ಬಳಕೆದಾರ ತನ್ನ ಸಂದೇಶವನ್ನು ಇತರರಿಗೆ ನೀಡಬಹುದು.ತನ್ನ ಚಿತ್ರ,ವಿಡಿಯೋ ಅಥವ ಅಂತರ್ಜಾಲ ಕೊಂಡಿಗಳನ್ನು ಹಂಚಿಕೊಳ್ಳಬಹುದು.ಬ್ಲಾಗುಗಳನ್ನು ನೀಡಬಹುದು.ಬಳಕೆದಾರ ಇತರರನ್ನು ಹಿಂಬಾಲಿಸಬಹುದು.ಇತರರೂ ಬಳಕೆದಾರರನ್ನು ಹಿಂಬಾಲಿಸಬಹುದು.ಟ್ವಿಟರ್ ಸಂದೇಶವೂ ಇಲ್ಲಿ ಕಾಣಿಸುವಂತೆ ಮಾಡಲು ಸಾಧ್ಯ.ಇದರಲ್ಲಿ ಟ್ವಿಟರ್,ಪೇಸ್‌ಬುಕ್ ಸೇವೆಗಳಿಗಿಂತ ಹೇಳಿಕೊಳ್ಳುವ ವಿಶೇಷತೆಯೇನೂ ಕಾಣಿಸುತ್ತಿಲ್ಲ.ಆದರೆ,ಇದು ಮಿಂಚಂಚೆಯ ಜತೆಗೇ ಕಾಣಿಸುವುದು,ಗೂಗಲ್ ಸೇವೆ ಜನಪ್ರಿಯವಾಗಲು ಒಂದು ಕಾರಣವಾಗಬಹುದು.ಮಿಂಚಂಚೆ ಖಾತೆ ಪರಿಶೀಲಿಸುವಾಗ ಇದು ಕಣ್ಣಿಗೆ ಬಿದ್ದು,ಇತರರ ಸಂದೇಶಕ್ಕೆ ಪ್ರತಿಕ್ರಿಯಿಸುವಂತೆ ಆಗುವುದು ಸಹಜ ತಾನೇ?ಟ್ವಿಟರ್,ಫೇಸ್‌ಬುಕ್ ಆದರೆ,ಅವುಗಳ ಅಂತರ್ಜಾಲ ತಾಣಗಳಿಗೆ ಹೋದರೆ ಮಾತ್ರಾ ಅಲ್ಲಿ ಬಂದಿರುವ ಸಂದೇಶಗಳು ಕಾಣಿಸುತ್ತವೆ.ಗೂಗಲ್‌ನದ್ದೇ ಆದ ಅರ್ಕುಟ್ ಸೇವೆಗೂ ಇದು ಸ್ಪರ್ಧೆ ನೀಡಬಹುದು.
--------------------------------------------------------------------
ಗೂಗಲ್‌ನಿಂದ ಶರವೇಗದ ಅಂತರ್ಜಾಲ ಸಂಪರ್ಕ ಯೋಜನೆ
ತಾನೂ ಅಂತರ್ಜಾಲ ಸೇವಾದತೃವಾಗಿ(ಐ ಎಸ್ ಪಿ) ಶರವೇಗದ ಸಂಪರ್ಕ ನೀಡುವುದು ಅಷ್ಟೇನೂ ದುಸ್ಸಾಧ್ಯ ಕೆಲಸವಲ್ಲ ಎಂದು ಇತರ ಐ ಎಸ್ ಪಿಗಳಿಗೆ ತೋರಿಸಿಕೊಟ್ಟು,ಶರವೇಗದ ಸಂಪರ್ಕದಿಂದಾಗುವ ಲಾಭಗಳಿಗೆ ಬಳಕೆದಾರರನ್ನು ಪರಿಚಯಿಸುವ ಸಾಹಸಕ್ಕೆ ಇಳಿಯಲು ಗೂಗಲ್ ಬಯಸಿದೆ.ಅಮೆರಿಕಾದ ಕೆಲವು ನಗರಗಳಲ್ಲಾದರೂ ಫೈಬರ್ ಜಾಲಗಳನ್ನು ಸ್ಥಾಪಿಸಿ,ಅವುಗಳ ಮೂಲಕ ಸೆಕೆಂಡಿಗೆ ಗಿಗಾಬಿಟ್ ವೇಗದ ಅಂತರ್ಜಾಲ ಸೇವೆ ಒದಗಿಸಿ,ಚಲನಚಿತ್ರಗಳ ವಿಡಿಯೋವನ್ನೂ ಒಂದೆರಡು ನಿಮಿಷಗಳೊಳಗೆ ಡೌನ್‌ಲೋಡ್ ಮಾಡಲು ಸಾಧ್ಯವಾಗಿಸಿ,ಸದ್ಯದ ಐ ಎಸ್ ಪಿ ಸೇವೆ ಒದಗಿಸುವ ವೆರಿಜೋನ್,ಅಮೆರಿಕಾ ಆನ್‌ಲೈನ್ ಮುಂತಾದವರಿಗೆ ಶಾಕ್‌ಟ್ರೀಟ್‌ಮೆಂಟ್ ನೀಡಲು ಗೂಗಲ್ ಬಯಸಿದೆ.ಗೂಗಲ್ ಪ್ರವೇಶಿಸುವ ಕ್ಷೇತ್ರದಲ್ಲಿ ಹಣಗಳಿಕೆ ಸುಲಭ ಸಾಧ್ಯವಲ್ಲ.ಇಂತಹ ಯೋಜನೆಯನ್ನು ಬಹಿರಂಗವಾಗಿಸಿ,ಐ ಎಸ್ ಪಿಗಳು ತಮ್ಮ ಸೇವೆಯನ್ನು ಉತ್ತಮಗೊಳಿಸುವತ್ತ ಯೋಚಿಸುವಂತೆ ಮಾಡಿರುವುದು ಗೂಗಲ್ ಹೆಗ್ಗಳಿಕೆ.
-----------------------------------------------------
ಆನ್‌ಲೈನ್ ಪಾವತಿಗೆ ಬಾಧೆ
ಪೇಪಾಲ್ ಹಣ ಪಾವತಿಸಲು ಆನ್‌ಲೈನ್‌ನಲ್ಲಿ ಸೇವೆ ಒದಗಿಸುತ್ತಿದೆ.ಭಾರತದ ಬಳಕೆದಾರರಿಗೂ ಈ ಸೇವೆ ಲಭ್ಯ.ಬ್ಯಾಂಕ್ ಅಥವ ಕ್ರೆಡಿಟ್‌ಕಾರ್ಡ್ ಮೂಲಕ ಹಣ ಪಾವತಿಗೆ ಅವಕಾಶ ನೀಡುವ ಸರಳ ವ್ಯವಸ್ಥೆ ಇಲ್ಲಿದೆ.ಈಗ ಭಾರತಕ್ಕೆ ಹರಿದು ಬರುವ ವಿದೇಶಿ ಹಣದ ಬಗ್ಗೆ ಪೇಪಾಲ್ ರಿಸರ್ವ್ ಬ್ಯಾಂಕಿನ ನೀತಿಗಳಿಗೆ ಅನುಗುಣವಾಗಿ ಕಾರ್ಯಾಚರಿಸುತ್ತಿಲ್ಲವೆಂಬ ಕಾರಣದಿಂದ, ರಿಸರ್ವ್ ಬ್ಯಾಂಕ್ ಪೇಪಾಲ್ ಕಂಪೆನಿಗೆ ನೋಟಿಸು ನೀಡಿರುವ ಹಿನ್ನೆಲಿಯಲ್ಲಿ,ಪೇಪಾಲ್ ಭಾರತದ ಬಳಕೆದಾರರಿಗೆ ಹಣಪಾವತಿ ಸೇವೆ ನಿಲ್ಲಿಸಿದೆ.ಇದು ಇ-ವಾಣಿಜ್ಯದಲ್ಲಿ ತೊಡಗಿರುವ ಭಾರತೀಯರಿಗೆ ತೊಂದರೆ ತಂದಿದೆ.ಇನ್ನು ಕೆಲವು ತಿಂಗಳುಗಳ ಕಾಲ ತನ್ನ ಸೇವೆ ಬಾಧಿತವಾಗಬಹುದು ಎನ್ನುವುದು ಪೇಪಾಲ್ ಹೇಳಿಕೆ.ಒಮ್ಮೆ ತನ್ನ,ವ್ಯವಹಾರವನ್ನು ನೇರ್ಪುಗೊಳಿಸಿದೊಡನೆ ಪಾವತಿ ಸೇವೆ ಮತ್ತೆ ಪ್ರಾರಂಭವಾಗುತ್ತದೆ ಎಂದು ಪೇಪಾಲ್ ಹೇಳಿಕೊಂಡಿದೆ.
---------------------------------------------
ನೀಲಿಹೂವು ಮತ್ತು ಒಂಟಿಹಕ್ಕಿ
http://neelihoovu.wordpress.com ವಿಳಾಸದಲ್ಲಿ ಲಭ್ಯವಿರುವ ಕನ್ನಡ ಬ್ಲಾಗ್ ರಂಜಿತ್ ಅಡಿಗರದ್ದು.ಉಡುಪಿಯ ಈ ಬ್ಲಾಗಿಗ ತನ್ನ ನವಿರು ಬರಹಗಳು,ಕತೆಗಳು ಮತ್ತು ಕವನಗಳ ಮೂಲಕ ಜನರನ್ನು ರಂಜಿಸುತ್ತಿದ್ದಾರೆ.ಪತ್ರಿಕೆಗಳಲ್ಲೂ ಆಗಾಗ ಕಾಣಿಸಿಕೊಳ್ಳುವ ಇವರ ಬರಹಗಳನ್ನೂ ಇಲ್ಲಿ ಕಾಣಬಹುದು.ಸದ್ಯ ಕೆಲಸಕ್ಕಾಗಿ ಸಿಂಗಾಪುರದಲ್ಲಿದ್ದರೂ ಕನ್ನಡದ ನಂಟನ್ನು ಬಿಡದಿರುವಂತೆ ಮಾಡುವಲ್ಲಿ ಬ್ಲಾಗ್ ಕಾಣಿಕೆಯೂ ಇರಬಹುದು.ಒಂದು ಸಾಲಿನ ನ್ಯಾನೋಕತೆಗಳ ಗುಚ್ಛವೀ ತಾಣದ ಹೈಲೈಟ್.
ಇಂಜಿನಿಯರಿಂಗ್ ವಿದ್ಯಾರ್ಥಿ ಸುಪ್ರೀತ್ ಭರವಸೆಯ ಬರಹಗಾರನಾಗಿ ಅಂತರ್ಜಾಲದಲ್ಲಿ ಪರಿಗಣಿಸಲ್ಪಡುವ ಯುವಕ.ಇವರ http://ontihakki.wordpress.com ಬ್ಲಾಗ್ ವೈಚಾರಿಕ ಬರಹಗಳು,ಕವನ,ಅವರ ಓದಿನ ಬಗ್ಗೆ ಹಲವು ಮಜಲುಗಳನ್ನು ಪರಿಚಯಿಸುವ ಬ್ಲಾಗ್ ತಾಣ.ಅವರ ಸಂಪಾದಕತ್ವದಲ್ಲಿ ಸಡಗರ ಎಂಬ ಪತ್ರಿಕೆಯೂ ಪ್ರಕಟಣೆಯಾಗುತ್ತಿತ್ತು.ಸದ್ಯ ಮುದ್ರಣ ನಿಲ್ಲಿಸಿದ್ದರೂ,ಆನ್‌ಲೈನ್ ಪತ್ರಿಕೆಯಾಗಿ http://kalaravapatrike.wordpress.com/ ಆಗಿ ಬ್ಲಾಗ್ ತಾಣದಲ್ಲಿ ಲಭ್ಯವಿದೆ.
-----------------------------------------------
ವರ್ಕ್ ಈಗ ಯಾರದ್ದು?
ಆರ್ದ್‌ವರ್ಕ್ ಒಂದು ಬಗೆಯ ಶೋಧ ಸೇವೆ.ಇಲ್ಲಿ ನಿಮ್ಮ ಸಂಶಯಗಳಿಗೆ ಉತ್ತರಿಸುವ ಪರಿಣತನ ಶೋಧ ನಡೆಸಿಕೊಡುವ ಸೇವೆ ಸಿಗುತ್ತದೆ.ಆರ್ದ್‌ವರ್ಕ್ ಕೆಲಸ ಆರಂಭಿಸಿ ಒಂದು ವರ್ಷವಷ್ಟೇ ಆಯಿತು.ಇದರಲ್ಲಿ ಯಾರು ಬೇಕಾದರೂ,ತಮ್ಮ ಪರಿಣತಿ ಇರುವ ಕ್ಷೇತ್ರಗಳ ಬಗ್ಗೆ ನೋಂದಾಯಿಸಿಕೊಳ್ಳಬಹುದು.ನಂತರ ಇತರರಿಂದ ಪ್ರಶ್ನೆಗಳು ಬಂದಾಗ,ನೀವಾ ಕ್ಷೇತ್ರದಲ್ಲಿ ಪರಿಣತರೆಂದು ನೋಂದಾಯಿಸಿಕೊಂಡಿದ್ದರೆ,ಪ್ರಶ್ನೆಗೆ ಉತ್ತರಿಸುವ ಅದೃಷ್ಟ ನಿಮ್ಮದಾಗಬಹುದು.ನೀವು ಉತ್ತರಿಸಲು ತಡ ಮಾಡಿದರೆ,ಪ್ರಶ್ನೆ ಇತರ ಪರಿಣತರಿಗೆ ವರ್ಗಾಯಿಸಲ್ಪಡಬಹುದು.ಈ ಕೆಲಸಕ್ಕೆ ಮಿಂಚಂಚೆ,ಮೊಬೈಲ್ ಇತ್ಯಾದಿ ವಿವಿಧ ಮಾಧ್ಯಮಗಳನ್ನು ವರ್ಕ್ ಬಳಸುತ್ತದೆ.ನಿಮಗೆ ಪ್ರಶ್ನೆಗೆ ಉತ್ತರಿಸಲು ಸಮರ್ಥರು ಗೊತ್ತಿದ್ದರೆ,ಪ್ರಶ್ನೆಯನ್ನು ಅವರಿಗೆ ವರ್ಗಾಯಿಸುವ ಸ್ವಾತಂತ್ರ್ಯವೂ ಇದೆ.ನಿಮ್ಮ ಸಂಶಯಗಳನ್ನು ಪ್ರಶ್ನೆಯನ್ನು ವರ್ಕ್‌ಗೆ ಕಳಿಸಿ,ಉತ್ತರವನ್ನು ಕೆಲವೇ ನಿಮಿಷಗಳಲ್ಲಿ ಪಡೆಯುವ ಭರವಸೆ ಇಡಬಹುದು.ಈ ಕಂಪೆನಿಯೀಗ ಗೂಗಲ್‌ನಿಂದ ಖರೀದಿಯಾಗಿದೆ.ವರ್ಕ್‌ನ ಸೇವೆ ಮೊದಲಿನಂತೆ ಮುಂದುವರಿಯಲಿದ್ದು,ಇದೀಗ ಗೂಗಲ್ ಲ್ಯಾಬಿನ ಭಾಗವಾಗಿ ಸೇವೆಯನ್ನು ನೀಡಲಿದೆ.ಗೂಗಲ್‌ನೊಳಗೆ ಸೇರಿದ ವರ್ಕ್ ಸೇವೆ ಇನ್ನಷ್ಟು ಹೊಳಪು ಪಡೆಯುವುದು ನಿಶ್ಚಿತ.ಗೂಗಲ್‌ನ ಅಸಂಖ್ಯಾತ ಬಳಕೆದಾರರ ಲಾಭ,ಸೇವೆಯನ್ನು ಇನ್ನೂ ಹೆಚ್ಚು ತ್ವರಿತವಾಗಿ ಮತ್ತು ಸಮರ್ಥವಾಗಿ ನೀಡಲು ವರ್ಕ್‌ಗೆ ಸಹಾಯ ಮಾಡಲಿದೆ.ಈ ಕಂಪೆನಿಯನ್ನು ತನ್ನದಾಗಿಸಿಕೊಳ್ಳಲು ಗೂಗಲ್ ಐವತ್ತು ದಶಲಕ್ಷ ಡಾಲರು ಖರ್ಚು ಮಾಡಿದೆ.
----------------------------------------------------------

Labels:
ಕಾಲೇಜು ಬಸ್ಸಿನಲ್ಲಿ ನಿಸ್ತಂತು,
ಜಾಲ,
ತಂದ,
ಮಾಯಾಜಾಲ
Monday, February 08, 2010
ಪರೀಕ್ಷೆಯಲ್ಲಿ ಮೋಸ ಮಾಡಲು ಹೈಟೆಕ್ ಬಳಕೆ
ಪರೀಕ್ಷೆಯಲ್ಲಿ ಮೋಸ ಮಾಡಲು ಹೈಟೆಕ್ ಬಳಕೆ
ಪರೀಕ್ಷೆಗಳಲ್ಲಿ ಮೋಸ ಮಾಡಿ,ನಕಲು ಮಾಡಲು ಹೈಟೆಕ್ ಸಾಧನಗಳ ಬಳಕೆ ಒಂದೇ ಸವನೆ ಹೆಚ್ಚುತ್ತಿದೆ.ಮೊಬೈಲ್ ಅಂತಹ ಸಾಧನಗಳನ್ನು ಪರೀಕ್ಷಾ ಕೊಟಡಿಗಳಿಗೆ ಒಯ್ಯುವುದಕ್ಕೆ ನಿಷೇಧವಿದ್ದರೂ,ಅವುಗಳ ಕಿರುಗಾತ್ರದಿಂದ ಕೊಟಡಿಯೊಳಗವನ್ನು ಅವಿತು ಕೊಂಡೊಯ್ಯುವುದು ಕಷ್ಟದ ಕೆಲಸವಲ್ಲ,ಕಿವಿಗೆ ಸಿಕ್ಕಿಸಿದ ಇಯರ್ ಫೋನ್ ಮೂಲಕ,ಮೊಬೈಲನ್ನು ನಿಸ್ತಂತುವಾಗಿ ಕೇಳುವ ಸೌಕರ್ಯದಿಂದ,ಉತ್ತರವನ್ನು ಆಲಿಸಿ,ಬರೆಯುವುದು ಸುಲಭವಾಗಿದೆ.ಐಪಾಡುಗಳಂತಹ ಮ್ಯೂಸಿಕ್ ಪ್ಲೇಯರುಗಳೂ ಪ್ರೊಗ್ರಾಮುಗಳು,ಪ್ರಶ್ನೆಗಳಿಗೆ ಉತ್ತರಗಳನ್ನು ಇರಿಸಿಕೊಳ್ಳಲು ಅವಕಾಶ ನೀಡುತ್ತವೆ.ಪ್ರಶ್ನೆಗಳಿಗೆ ಉತ್ತರಗಳನ್ನು ಓದಿ ಹೇಳಿ ಮುದ್ರಿಸಿಕೊಂಡು,ಅವನ್ನು ಆಲಿಸಿಕೊಂಡು ಉತ್ತರ ಬರೆಯಲು ಸಾಧ್ಯ.ನಿಸ್ತಂತು ಇಯರ್‌ಪೋನ್‌ಗಳು,ಕರ್ತವ್ಯದಲ್ಲಿರುವ ಶಿಕ್ಷಕರನ್ನು ವಂಚಿಸಲು ಸಹಾಯ ಮಾಡುತ್ತವೆ.ಕಂಪ್ಯೂಟರ್ ಲ್ಯಾಬ್ ಪರೀಕ್ಷೆಗಳಲ್ಲಿ,ಕಂಪ್ಯೂಟರ್ ಜಾಲದಲ್ಲಿ ಅವತಿರಿಸಿದ ಉತ್ತರಗಳನ್ನು ಬಳಸುವುದು,ಪ್ರೊಗ್ರಾಮುಗಳನ್ನು ಕಂಪ್ಯೂಟರ್ ಜಾಲದಿಂದ,ಇಲ್ಲವೇ ಕಂಪ್ಯೂಟರಿನ ಹಾರ್ಡ್‌ಡಿಸ್ಕಿನ ಒಂದು ಫೋಲ್ಡರಿನಲ್ಲಿ ಅಡಗಿಸಿಟ್ಟು,ಪರೀಕ್ಷೆಯಲ್ಲಿ ಬಳಸುವುದು ಸುಲಭಸಾಧ್ಯ.ಇನ್ನು ಫ್ಲಾಶ್ ಸ್ಮೃತಿಕೋಶಗಳಲ್ಲಿ ಅವಿತಿರಿಸಿದ ಉತ್ತರಗಳನ್ನು ಕಂಪ್ಯೂಟರಿಗೆ ನಕಲಿ ಮಾಡಿಕೊಳ್ಳಲು,ಯು ಎಸ್ ಬಿ ಪೋರ‍್ಟ್ ಸುಲಭದಲ್ಲಿ ಅವಕಾಶ ನೀಡುತ್ತದೆ.
ಹಳೆಕಾಲದ ಕಾಗದ ಚೀಟಿಗಳಿಗೂ ತಂತ್ರಜ್ಞಾನ ಹೊಸ ಮೆರುಗು ನೀಡಿದೆ.ನ್ಯಾನೋಗಾತ್ರದ ಚೀಟಿಗಳಲ್ಲಿ ಪುಟಗಟ್ಟಲೆ ನಕಲಿ ಸಾಮಗ್ರಿ ತುಂಬಿಸಲು ಪೊಟೋಸ್ಟಾಟ್ ತಂತ್ರಜ್ಞಾನದ ಗಾತ್ರ ಇಳಿಸುವ ತಂತ್ರಜ್ಞಾನ ಸಹಾಯ ಮಾಡಿದೆ.ಬೆರಳಿನ ನಡುವೆ ಇಂತಹ ಚೀಟಿಗಳನ್ನಿರಿಸಿಕೊಂಡು,ಅನುಕೂಲಕರ ಸಮಯದಲ್ಲಿ ನಕಲಿ ಮಾಡುವ ವಿದ್ಯಾರ್ಥಿಗಳು ಸಿಕ್ಕಿಹಾಕಿಕೊಳ್ಳುವುದು ಅಮಾವಾಸ್ಯೆಗೋ ಹುಣ್ಣಿಮೆಗೋ ಒಮ್ಮೆ.ಇಂಗ್ಲೆಂಡ್,ವೇಲ್ಸ್,ಅಯರ್ಲ್ಯಾಂಡಿನಲ್ಲಿ ಕಳೆದವರ್ಷವೊಂದರಲ್ಲಿ ಪರೀಕ್ಷಾ ಅಕ್ರಮಗಳಲ್ಲಿ ನಾಲ್ಕುಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಸಿಕ್ಕಿಹಾಕಿಕೊಂಡಿದ್ದಾರೆ.ಅಂದಹಾಗೆ,ನಕಲು ತಡೆ ಸಾಧನಗಳೂ ಲಭ್ಯವಿವೆ.ಅನಧಿಕೃತ ಮೊಬೈಲ್ ಬಳಕೆಯನ್ನು ಗುರುತಿಸಲು,ಮೊಬೈಲ್ ಸಂಕೇತಗಳನ್ನು ಜ್ಯಾಮ್ ಮಾಡುವ ತಂತ್ರಜ್ಞಾನಗಳೂ ಇವೆ.ನಮ್ಮ ವಿದ್ಯಾರ್ಥಿಗಳೂ ತಂತ್ರಜ್ಞಾನದ ಬಳಕೆಯನ್ನು ನಕಲು ಮಾಡಲು ಬಳಸುವುದರಲ್ಲಿ ಹಿಂದೆ ಬಿದ್ದಿಲ್ಲವೆನ್ನುವುದು ಬೇಸರ ತರುವ ವಿಷಯ.ಪ್ರೊಗ್ರಾಮ್ ಮಾಡಬಲ್ಲ ಕ್ಯಾಲ್ಕ್ಯುಲೇಟರುಗಳೂ ಅಕ್ರಮಗೈಯಲು ಸುಲಭ ಸಾಧನಗಳಾಗಿವೆ.ಅವನ್ನು ಪರಿಶೀಲಿಸಲು,ಆ ಸಾಧನಗಳನ್ನು ಬಳಸಲು ಬರಬೇಕು.ಇಲ್ಲವೇ ಅತ್ಯಾಧುನಿಕ ಕ್ಯಾಲ್ಕ್ಯುಲೇಟರ್ ಬಳಕೆಯನ್ನೇ ನಿಷೇಧಿಸಬೇಕು.
------------------------------------------------------------------------
ಫೇಸ್‌ಬುಕ್‌ಗೀಗ ಆರು ವರ್ಷ
ಜಗತ್ತಿನ ಅತ್ಯಂತ ಜನಪ್ರಿಯ ತಾಣಗಳಲ್ಲಿ ಎರಡನೇ ಸ್ಥಾನದಲ್ಲಿರುವ ಫೇಸ್‌ಬುಕ್ ಇದೀಗ ಆರನೇ ವರ್ಷಕ್ಕೆ ಕಾಲಿಟ್ಟಿದೆ.ನಲುವತ್ತುಕೋಟಿ ಚಂದಾದಾರರನ್ನು ಹೊಂದಿರುವ ಈ ಅಂತರ್ಜಾಲ ತಾಣ ಬಳಸಲು ಅತಿ ಸುಲಭವಾದ ವಿನ್ಯಾಸವನ್ನು ಹೊಂದಿದೆ.ಈ ತಾಣದ ವಾರ್ಷಿಕ ಆದಾಯ ಮುನ್ನೂರೈವತ್ತು ಮಿಲಿಯನ್ ಡಾಲರುಗಳು.ಮಾರ್ಕ್ ಜ್ಯುಕರ್‌ಬರ್ಘ್ ಈ ತಾಣದ ಒಡೆತನ ಹೊಂದಿದ್ದಾನೆ.ಒಂಭೈನೂರು ಉದ್ಯೋಗಿಗಳು ಇಲ್ಲಿ ಕೆಲಸ ಮಾಡುತ್ತಿದ್ದಾರೆ.ದಿನಾಲೂ,ಅರುವತ್ತಾರು ದಶಲಕ್ಷ ಸಂದೇಶಗಳು ಇಲ್ಲವೇ ವಿಡಿಯೋಗಳ ವಿನಿಮಯವಾಗುತ್ತವೆ.ಅಂದಹಾಗೆ ಇದೊಂದು ಸಾಮಾಜಿಕ ಸಂಪರ್ಕ ತಾಣ.
-----------------------------------------------------------------------------
ಓದುಬಜಾರ್
ಬ್ಲಾಗ್‌ಲೋಕದ ಮಹಾಮರ್ಜರ್ ಎನ್ನುವ ಹಣೆಪಟ್ಟಿಯೊಂದಿಗೆ ಕಾಣಿಸಿಕೊಳ್ಳುವ ಓದುಬಜಾರ್,ಪುಸ್ತಕಗಳ ಬಿಡುಗಡೆ,ಉತ್ತಮ ಓದಿನ ಬಗ್ಗೆ ಮೀಸಲಾದ ಬ್ಲಾಗ್.ಪುಸ್ತಕ ಬಿಡುಗಡೆ ಕಾರ್ಯಕ್ರಮಗಳ ಬಗೆಗಿನ ಚಿತ್ರ-ವರದಿಗಳು ಇಲ್ಲಿನ ಹೈಲೈಟ್.ಓದಲೇಬೇಕಾದ ಪುಸ್ತಕದ ಬಗ್ಗೆ ಶಿಫಾರಸ್ಸು ಕೂಡಾ ಓದುಬಜಾರಿನಲ್ಲಿದೆ.http://odubazar.wordpress.com ವಿಳಾಸದಲ್ಲಿ ಓದುಬಜಾರ್ ಲಭ್ಯ.
ಅವಧಿhttp://avadhi.wordpress.com ವಿಳಾಸದಲ್ಲಿ ಕಾಣುವ ಬ್ಲಾಗ್‌ತಾಣ.ಸಮಾರಂಭಗಳ ಬಗ್ಗೆ ಸೂಚನೆಗಳು,ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ವರದಿಗಳು,ಚಿತ್ರಗಳು,ಕನ್ನಡದ ಬ್ಲಾಗುಗಳ ಬಗ್ಗೆ ಮಾಹಿತಿ,ಬಿಸಿ-ಬಿಸಿ ಸುದ್ದಿಗಳು,ಸಂವಾದಗಳು ಎಲ್ಲವೂ ಒಂದೇ ಕಡೆ ಲಭ್ಯವಾಗಿಸಿರುವುದು ಅವಧಿಯ ಹಿರಿಮೆ.ಅತ್ಯಂತ ಜನಪ್ರಿಯ ಬ್ಲಾಗುಗಳಲ್ಲೊಂದಾಗಿರುವುದು ಯು ಎಸ್ ಬಿ ಪೋರ್ಟಿನ ಹೆಗ್ಗಳಿಕೆ.ಟ್ವಿಟರ್ ಮಾಧ್ಯಮದ ಮೂಲಕವೂ ಸತತವಾಗಿ ಪ್ರಕಟನೆ ಹೊರಡಿಸಿ,ಜನರನ್ನು ತಲುಪುವ ಪ್ರಯತ್ನವೂ ಇದಕ್ಕೆ ಕಾರಣವೆಂದರೆ ತಪ್ಪಲ್ಲ.
-------------------------------------------------------------------------
ಶರವೇಗದ ಯುಎಸ್‌ಬಿ 3.0
ಇನ್ನು ಹೊಸ ಕಂಪ್ಯೂಟರ್ ಮತ್ತು ಸಾಧನಗಳಲ್ಲಿ ಲಭ್ಯವಾಗಲಿರುವ ಯು ಎಸ್ ಬಿ ಪೋರ್ಟ್ ಹೊಸ ಆವೃತ್ತಿಯದ್ದಾಗಿ ಯು ಎಸ್ ಬಿ-3.0 ಎಂದು ಕರೆಯಲಾಗುತ್ತದೆ.ಪ್ರತಿ ಸೆಕೆಂಡಿಗೆ ನಾಲ್ಕು ಜಿಬಿ ವೇಗದಲ್ಲಿ ದತ್ತಾಂಶವನ್ನು ಕಂಪ್ಯೂಟರಿನಿಂದ ವಿನಿಮಯ ಮಾಡಲಿದು ನೆರವಾಗುತ್ತದೆ.ಯು ಎಸ್ ಬಿ 2.0ರ ಹತ್ತು ಪಟ್ಟು ವೇಗದಲ್ಲಿದು ಕೆಲಸ ಮಾಡುತ್ತದೆ.ಕಂಪ್ಯೂಟರಿಗೆ ಕ್ಯಾಮರಾ,ಪ್ರಿಂಟರ್,ಹೊರಗಿನ ಹಾರ್ಡ್‌ಡಿಸ್ಕ್ ಹೀಗೆ ಯಾವ ಸಾಧನವನ್ನು ಸಂಪರ್ಕಿಸಲು ಅವಕಾಶ ನೀಡುವುದೇ ಅಲ್ಲದೆ,ಸಾಧನವನ್ನು ಗುರುತಿಸಲು ತಕ್ಷಣ ನೆರವಾಗುವುದು ಇದರ ವೈಶಿಷ್ಟ್ಯವಾಗಿದೆ.ಆಯತಾಕಾರದ ಗುಳಿ ಇರುವ ಯು ಎಸ್ ಬಿಗೆ ಸಾಧನವನ್ನು ಸಂಪರ್ಕಿಸುವುದೂ ಬಹುಸುಲಭ-ಸ್ಕ್ರೂ ಇತ್ಯಾದಿಗಳ ಹಂಗಿಲ್ಲ,ಪಿನ್‌ಗಳು ಮುರಿಯುವ ಭಯವಿಲ್ಲ.ಇದರ ಸಂಶೋಧನೆಯಲ್ಲಿ ಇಂಟೆಲ್ ಕಂಪೆನಿಯ ಅಜಯ ಭಟ್ ಅವರ ಸಂಶೋಧನೆಯ ಪಾಲೂ ಇದೆ.ಹೊಸ ಯು ಎಸ್ ಬಿ ಇರುವ ಕಂಪ್ಯೂಟರುಗಳಿಗೆ ಹಳೆಯ ಸಾಧನಗಳನ್ನು ತುರುಕಿದರೂ ಸಮಸ್ಯೆಯಾಗದು ಎನ್ನುವುದು ಸಮಾಧಾನ ತರುವ ವಿಷಯವಾಗಿದೆ.
------------------------------------------------------------------
ಸಿಂಬಿಯನ್ ಮೊಬೈಲ್ ತಂತ್ರಾಂಶವೀಗ ಮುಕ್ತ..ಮುಕ್ತ..
ನೋಕಿಯಾ, ಏಟಿ&ಟಿ,ಎಲ್ಜಿ, ಮೊಟೊರೊಲಾ, ಎನ್ ಟಿ ಟಿ ಡೊಕೊಮೊ, ಸಾಮ್ಸಂಗ್, ಸೋನಿ ಎರಿಕ್ಸನ್, ಎಸ್ ಟಿ ಎಂ ಮೈಕ್ರೊ ಎಲೆಕ್ಟ್ರೊನಿಕ್ಸ್, ಟೆಕ್ಸಸ್ ಇನ್ಸ್ಟ್ರುಮೆಂಟ್ಸ್ ಮತ್ತು ವೊಡಾಫೋನ್ ಮೊಬೈಲ್ ಕಂಪೆನಿಗಳು ಸೇರಿ ಸ್ಥಾಪಿಸಿದ ಸಿಂಬಿಯನ್ ಫೌಂಡೇಶನ್ ವತಿಯಿಂದ ಸಿಂಬಿಯನ್ ಮೊಬೈಲ್ ಕಾರ್ಯನಿರ್ವಹಣಾ ತಂತ್ರಾಂಶವನ್ನು ಮುಕ್ತವಾಗಿಸುವ ಯೋಜನೆ ಎರಡು ವರ್ಷಗಳ ಹಿಂದೆಯೇ ಆರಂಭವಾಗಿತ್ತು.ಈಗದು ಕೊನೆಗೂ ನಿಜವಾಗಿದೆ.ಸುಮಾರು ಮೂವತ್ತಮೂರು ಕೋಟಿ ಮೊಬೈಲ್ ಹ್ಯಾಂಡ್‌ಸೆಟ್‌ಗಳು ಸಿಂಬಿಯನ್ ವ್ಯವಸ್ಥೆಯನ್ನು ಬಳಸಿ,ಅತಿ ಹೆಚ್ಚು ಜನಪ್ರಿಯ ವ್ಯವಸ್ಥೆಯಾಗಿದೆ.ಆದರೆ ಗೂಗಲ್‌ನ ಆಂಡ್ರಾಯಿಡ್ ನಿರ್ವಹಣಾ ವ್ಯವಸ್ಥೆಯು ಲಭ್ಯವಾದ ನಂತರ ಸಿಂಬಿಯನ್ ವ್ಯವಸ್ಥೆಯ ಜನಪ್ರಿಯತೆಯ ಬಗ್ಗೆ ಸಂಶಯ ವ್ಯಕ್ತವಾಗಿತ್ತು.ಈಗ ಇದು ಮುಕ್ತವಾಗಿ,ತಂತ್ರಾಂಶದ ಸಾಲುಗಳನ್ನು ಬಹಿರಂಗಗೊಳಿಸುವುದು,ತಂತ್ರಾಂಶ ಅಭಿವೃದ್ಧಿಗೆ ಹೊಸ ಚಾಲನೆ ನೀಡಿ,ಸಿಂಬಿಯನ್ ತನ್ನ ಮೇಲುಗೈಯನ್ನು ಉಳಿಸಿಕೊಳ್ಳಲು ನೆರವಾಗುವುದು ನಿಶ್ಚಿತ.
Udayavani
------------------------------------------------------------------------------
*ಅಶೋಕ್‌ಕುಮಾರ್ ಎ

Monday, February 01, 2010
ತಾರಸಿಗೆ ಬಿಳಿ ಬಣ್ಣ:ಪರಿಸರಪ್ರಿಯವೇ?
ತಾರಸಿಗೆ ಬಿಳಿ ಬಣ್ಣ:ಪರಿಸರಪ್ರಿಯವೇ?
ತಾರಸಿಗೆ ಬಿಳಿ ಬಣ್ಣ ಬಳಿದರೆ,ಸೂರ್ಯನ ಕಿರಣಗಳು ಪ್ರತಿಫಲಿತವಾಗುವುದು ಹೆಚ್ಚುತ್ತದೆ.ತಾರಸಿಯು ಕಾದು ಬಿಸಿಯಾಗುವಿಕೆಯೂ ಕಡಿಮೆಯಾಗುತ್ತದೆ.ಇದರಿಂದ ಕಟ್ಟಡದ ಒಳಗೆ ತಂಪಿನ ಅನುಭವವಾಗುತ್ತದೆ ಎನ್ನುವುದು ಹೆಚ್ಚಿನವರೂ ಬಲ್ಲ ವಿಚಾರವೇ.ಅಮೆರಿಕಾದಲ್ಲಿ ಕಂಪ್ಯೂಟರ್ ಸಿಮ್ಯುಲೇಶನ್ ಬಳಸಿ ನಡೆಸಲಾದ ಅಧ್ಯಯನದಿಂದ,ಇಡೀ ನಗರದ ಕಟ್ಟಡಗಳಿಗೆಲ್ಲಾ ಬಿಳಿ ಬಣ್ಣ ಬಳಿದರೆ,ಇಂಧನ ಉಳಿತಾಯ ಸಾಧ್ಯ ಎಂದು ಕಂಡುಕೊಳ್ಳಲಾಗಿದೆ.ಸರಾಸರಿ ಒಂದರಿಂದ ಮೂರು ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಇಳಿಕೆಯಾಗಬಹುದು.ಪರಿಣಾಮವಾಗಿ ಕಟ್ಟಡಗಳು ಹೀರಿಕೊಳ್ಳುವ ಶಾಖದ ಪ್ರಮಾಣದಲ್ಲಿ ಇಳಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ.ಕಟ್ಟಡಗಳಲ್ಲಿ ಬಳಸಲಾಗುವ ವಾತಾನುಕೂಲಿ ವ್ಯವಸ್ಥೆಗಳು ಇದರಿಂದ ಕಡಿಮೆ ಇಂಧನ ಬಳಸಿ,ಪರಿಸರದ ಮೇಲೆ ಒತ್ತಡ ಕಡಿಮೆಯಾಗಬಹುದು ಎಂದು ಅಧ್ಯಯನದಿಂದ ವ್ಯಕ್ತವಾದ ಇನ್ನೊಂದು ಅಂಶ.ಇದರ ನಿಜವಾದ ಪರಿಣಾಮಗಳೇನು ಅನ್ನುವುದು ಕಟ್ಟಡಗಳ ಸಾಂದ್ರತೆ,ಅವುಗಳ ಮೇಲ್ಮೈಯು ಎಷ್ಟು ಸ್ವಚ್ಛವಾಗಿವೆ,ಕಟ್ಟಡ ನಿರ್ಮಾಣಕ್ಕೆ ಬಳಸಿದ ವಸ್ತುಗಳು ಯಾವುವು ಎನ್ನುವ ಅಂಶವನ್ನೂ ಹೊಂದಿಕೊಂಡಿವೆ.
----------------------------------------------------------
ಅಂತರ್ಜಾಲದಲ್ಲೀಗ ಯುನಿಕೋಡ್ ಬಳಕೆ ತಾರಕಕ್ಕೆ
ಅಂತರ್ಜಾಲದಲ್ಲಿ ಅಸ್ಕೀ,ಯುನಿಕೋಡ್,ವಿಂಡೋಸ್,ಲ್ಯಾಟಿನ್ ಮುಂತಾದ ಮಾನಕಗಳನ್ನು ಬಳಸಿ,ಅಕ್ಷರಗಳನ್ನು ಮೂಡಿಸಬಹುದು.ಅವುಗಳ ಪೈಕಿ,ಯುನಿಕೋಡ್ ಜಗತ್ತಿನ ಬಹುತೇಕ ಎಲ್ಲಾ ಭಾಷೆಗಳ ಅಕ್ಷರಗಳಿಗೂ ಲಭ್ಯವಿದೆ.ಹಾಗಾಗಿ,ಯುನಿಕೋಡ್ ಬಳಕೆ ಅಂತರ್ಜಾಲ ತಾಣಗಳಲ್ಲಿ ಹೆಚ್ಚು ಜನಪ್ರಿಯವಾಗುತ್ತಿದೆ.ಗೂಗಲ್ ಅಧ್ಯಯನದ ಪ್ರಕಾರ ಈಗ ಅಂತರ್ಜಾಲತಾಣಗಳ ಪೈಕಿ ಅರ್ಧಕ್ಕೂ ಹೆಚ್ಚು ತಾಣಗಳು ಯುನಿಕೋಡ್ ಬಳಸುತ್ತಿವೆ.ಶೋಧ ಸೇವೆ ಒದಗಿಸುವ ದೃಷ್ಟಿಯಿಂದ ಈ ಬೆಳವಣಿಗೆ ಹೆಚ್ಚು ಸಮಾಧಾನ ಕೊಡುವ ಸಂಗತಿಯಾಗಿದೆ.
----------------------------------------------------------------
ಯಾವ ಅಕ್ಷರಶೈಲಿ ಬಳಸಿದರೆ ಶಾಯಿ ಖರ್ಚು ಕಡಿಮೆ?
ಪುಟಗಳನ್ನು ಮುದ್ರಿಸುವಾಗ ಶಾಯಿ ಬಳಕೆ,ಪುಟದಲ್ಲಿ ಬಳಕೆಯಾದ ಅಕ್ಷರಶೈಲಿಯನ್ನೂ ಅವಲಂಬಿಸಿದೆ ಎನ್ನುವುದು ಸ್ಪಷ್ಟ ತಾನೇ?ಈ ಬಗ್ಗೆ ನಡೆಸಿದ ಅಧ್ಯಯನವೊಂದು ಅಕ್ಷರಶೈಲಿಯಲ್ಲಿ ರಂಧ್ರಗಳನ್ನು ಬಳಸಿರುವ ಇಕೋಫಾಂಟ್ ಕಡಿಮೆ ಶಾಯಿ ಬಳಸುವುದು ಕಂಡುಕೊಂಡಿದೆ.ಏರಿಯಲ್,ಟೈಮ್ಸ್ ರೋಮನ್,ಕೊರಿಯರ್ ಮುಂತಾದ ಜನಪ್ರಿಯ ಅಕ್ಷರಶೈಲಿಗಳ ಪೈಕಿ,ಕೊರಿಯರ್ ಶಾಯಿ ಬಳೆಕೆಯ ದೃಷ್ಟಿಯಿಂದ ಮಿತವ್ಯಯಿ ಎನ್ನುವುದೂ ಗೊತ್ತಾಗಿದೆ.
--------------------------------------------------------------
ನಮ್ಮ ವಿಟ್ಲ
ಅಂತರ್ಜಾಲತಾಣವೊಂದನ್ನು ಬಳಸಿಕೊಂಡು,ಊರಿನ ಅಭಿವೃದ್ಧಿ ಕಾರ್ಯಗಳ ಬಗೆಗೆ ವರದಿ,ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಮಾಹಿತಿ,ಸಾಂಸ್ಕೃತಿಕ ಚಟುವಟಿಕೆಗಳ ಬಗೆಗೆ ವಿವರಗಳನ್ನು ನೀಡುವ ಪರಿಪಾಠ ಹೆಚ್ಚುತಿದೆ.ಇಸ್ಮಾಯಿಲ್ ಬಶೀರ್ ಸಂಪಾದಕತ್ವದಲ್ಲಿ ಬರುತ್ತಿರುವ "ನಮ್ಮ ವಿಟ್ಲ" ತಾಣ ಇಂತಹ ಒಂದು ಪ್ರಯತ್ನ ಮಾಡುತ್ತಿದೆ.ವಿಟ್ಲ ಪಟ್ಟಣದ ಅಭಿವೃದ್ಧಿ ಕಾಮಗಾರಿಗಳು,ಪ್ರೇಕ್ಷಣೀಯ ಸ್ಥಳಗಳು,ಜನರ ಸಾಧನೆಗಳ ಬಗ್ಗೆ ಇಲ್ಲಿ ವರದಿಗಳಿವೆ.ಫೊಟೋಗ್ಯಾಲರಿಯೂ ಇಲ್ಲಿದೆ.ಜನರ ಸಮಸ್ಯೆಗಳ ಬಗೆಗೆ ಗಮನ ಸೆಳೆಯಲು,"ಜನದನಿ" ಅಂಕಣವೂ ಇಲ್ಲಿದೆ.ಅಂತರ್ಜಾಲ ಬಳಕೆ ಜನರಲ್ಲಿ ಹೆಚ್ಚಿದರೆ ಇಂತಹ ತಾಣಗಳು ಹೆಚ್ಚು ಫಲಪ್ರದವಾದಾವು."ನಮ್ಮ ವಿಟ್ಲ" ಕಾಣಲು http://vittla.webs.com/ ಅಂತರ್ಜಾಲ ತಾಣದ ವಿಳಾಸ ನೋಡಿ.
ಅಟೋ ಚಾಲಕನ ಅಂತರ್ಜಾಲ ತಾಣವೂ ಇದೆ ಎಂದರೆ ಆಶ್ಚರ್ಯವಾಯಿತೇ?http://tuktastic.com/ ಅಂತಹ ಒಂದು ತಾಣ.ಚೆನ್ನೈಯ ಸಾಮ್ಸನ್ ಈ ತಾಣದ ಒಡೆಯ.ತಾಜ್ ಕೋರಮಂಡಲ್ ಹೋಟೆಲ್‌ನ ತಂಗುದಾಣದಲ್ಲಿ ಈತನ ರಿಕ್ಷಾ ನಿಲ್ಲುತ್ತದಂತೆ.ಊರು ಸುತ್ತಲು ತನ್ನ ಟುಕ್‌ಟುಕ್ ಅಗ್ಗದ ವಾಹನ ಎಂದಾತ ಹೇಳಿಕೊಳ್ಳುತ್ತಾನೆ.ಅಟೋದಲ್ಲಿ ಸುತ್ತುವ ಮಜಾವೇ ಬೇರೆ ಎಂದು ಬೇರೆ ಹೇಳಿಕೊಳ್ಳುತ್ತಾನೆ.

ಆಪಲ್ ಐಪ್ಯಾಡ್‌ನಲ್ಲಿ ಏನಿಲ್ಲ?
ಆಪಲ್ ಕಂಪೆನಿಯ ಹೊಸ ಸಾಧನ ಐಪ್ಯಾಡ್ ಎಂಬ ಹೆಸರಿನೊಂದಿಗೆ ಬಿಡುಗಡೆಯಾಗಿದೆ.ಐಸ್ಲೇಟ್ ಎಂಬ ಹೆಸರು ಬಳಕೆಯಾಗಬಹುದೆಂಬ ಗುಮಾನಿ ಸುಳ್ಳಾಯಿತು.ಸುಮಾರು ಆರುನೂರೈವತ್ತು ಗ್ರಾಂ ತೂಗುವ ಐಪ್ಯಾಡ್,ಇಪ್ಪತ್ತನಾಲ್ಕು ಸೆಂಟಿಮೀಟರ್ ಉದ್ದ,ಹದಿನೆಂಟು ಸೆಂಟಿಮೀಟರ್ ಅಗಲವಾಗಿದೆ.ಇದರಲ್ಲಿ ಕೀಲಿಮಣೆಯಿಲ್ಲ,ಬದಲಾಗಿ ಪರದೆಯ ಮೇಲೆ ಕೀಲಿ ಮಣೆ ಮೂಡಿಸಿ,ಅದನ್ನು ಬಳಸಿ ಟೈಪಿಸಬೇಕು.ವಿಡಿಯೊ ಅಥವಾ ಕ್ಯಾಮರಾವೂ ಇದರಲ್ಲಿಲ್ಲ.ಹಾಗಾಗಿ ಅಂತರ್ಜಾಲ ಕರೆಗಳನ್ನು ಮಾಡುವಾಗ,ಅದು ಧ್ವನಿ ಅಥವ ಪಠ್ಯದ ಮೂಲಕ ಮಾತ್ರಾ ಸಾಧ್ಯವಾಗುತ್ತದೆ.ಯುಎಸ್ಬಿ ಪೋರ್ಟ್ ಸೌಲಭ್ಯವಿಲ್ಲವಾದ ಕಾರಣ,ಪ್ರಿಂಟರಿಗೆ ಸಂಪರ್ಕಿಸಲು ತಂತಿ ಬಳಸುವಂತಿಲ್ಲ.ಫ್ಲ್ಯಾಶ್ ಎನ್ನುವ ತಂತ್ರಾಂಶ ಇದರಲ್ಲಿ ಬಳಕೆಯಾಗದ ಕಾರಣ,ಯುಟ್ಯೂಬ್ ವಿಡಿಯೋ ನೋಡಲು ಸಮಸ್ಯೆಯಾಗಬಹುದು.ಇದರ ಉದ್ದ-ಅಗಲದ ಪ್ರಮಾಣ 4:3ಆಗಿರುವುದು,ಅಗಲ ತೆರೆಯಲ್ಲಿ ನೋಡಲು ನಿರ್ಮಿಸಿರುವ ಚಿತ್ರಗಳ ವೀಕ್ಷಣೆಗೂ ಸೂಕ್ತವಾಗಿಲ್ಲ.ಐಪ್ಯಾಡ್‌ನಲ್ಲಿ ಒಂದು ಸಲ ಒಂದು ಕೆಲಸ ಮಾತ್ರಾ ಮಾಡಲು ಸಾಧ್ಯ.ಜಿಪಿಎಸ್ ಸೌಕರ್ಯ ಲಭ್ಯವಿಲ್ಲ.ಹೆಚ್ಚು ಬೆಲೆಯ ಐಪ್ಯಾಡ್‌ಗಳಲ್ಲಿ ಮಾತ್ರಾ ಮೂರು-ಜಿ ಸೌಕರ್ಯ ಇದೆ.
ಇದರ ಬೆಲೆ ಐನೂರರಿಂದ ಎಂಟುನೂರ ಇಪ್ಪತ್ತೊಂಭತ್ತು ಡಾಲರು ಪರಿಮಿತಿಯಲ್ಲಿದೆ. ಈ ಬೆಲೆಗಿಂತ ಕಡಿಮೆ ಬೆಲೆಗೆ ಸಿಗುವ ನೆಟ್‌ಬುಕ್ ಬಿಟ್ಟು ಜನ ಇದನ್ನು ಖರೀದಿಸಬಹುದೇ ಎಂದು ಪ್ರಶ್ನಿಸುವವರಿದ್ದಾರೆ.ಆದರೆ ನೆಟ್‌ಬುಕ್‌ಗಿಂತ ಹಿಡಿದು ಬಳಸಲು ಹೆಚ್ಚು ಅನುಕೂಲ ಎನ್ನುವುದರಲ್ಲಿ ಅನುಮಾನ ಇಲ್ಲ.ಐಪೋಡ್ ಇದ್ದವರಿಗೆ ಐಪ್ಯಾಡ್ ಅಗತ್ಯವಿಲ್ಲ ಎಂಬ ಅಭಿಪ್ರಾಯ ಹಲವರದ್ದಾಗಿದೆ.ಪತ್ರಿಕೆಗಳನ್ನು ಇಳಿಸಿ ಐಪ್ಯಾಡ್ ಅನುಕೂಲಕರ ಎನ್ನುವುದು,ಪತ್ರಿಕಾ ಮಾಧ್ಯಮದ ಗಮನ ಸೆಳೆದಿದೆ.ಓದುಗರನ್ನು ಹೆಚ್ಚಿಸಿಕೊಳ್ಳಲು ವಿಫಲವಾಗಿರುವ ವಿದೇಶೀ ಪತ್ರಿಕೆಗಳು ಐಪ್ಯಾಡ್ ಒದಗಿಸಲು ಉದ್ದೇಶಿಸಿರುವ ಚಂದಾದಾರತ್ವದ ಆಧಾರದ ಪತ್ರಿಕೆಯನ್ನು ಇಳಿಸಿಕೊಂಡು,ಐಪ್ಯಾಡಿನಲ್ಲಿ ಓದುವ ಸೌಕರ್ಯವು ಹೊಸ ಆದಾಯ ಮೂಲವಾಗಬಹುದೇನೋ ಎನ್ನುವ ಕುತೂಹಲ ಹೊಂದಿವೆ.ಸಂಗೀತ ಉದ್ಯಮಕ್ಕೆ ಐಪೋಡ್ ಕಾಯಕಲ್ಪ ಒದಗಿಸಿದಂತೆ,ಮುದ್ರಣ ಮಾಧ್ಯಮಕ್ಕೆ ಐಪ್ಯಾಡ್ ಬೆಂಬಲದಿಂದ ಹೆಚ್ಚು ಆದಾಯ ಬರಬಹುದು ಎನ್ನುವ ನಿರೀಕ್ಷೆ ಇದೆ.
ಐಪ್ಯಾಡ್ ಎನ್ನುವ ಹೆಸರಿನ ಬಗ್ಗೆಯೂ ವಿವಾದ ಎದ್ದಿದೆ.ಇದು ನ್ಯಾಪ್‌ಕಿನ್ ಅಂತಹ ಉತ್ಪನ್ನದಂತೆ ಕಾಣಿಸುತ್ತದೆ ಎಂಬ ಕಟಕಿಯಂತೂ ಸಾಮಾನ್ಯ.ಫ್ಯುಜಿತ್ಸು ಎನ್ನುವ ಜಪಾನಿ ಕಂಪೆನಿಯೂ ಇದೇ ಹೆಸರಿನ ಸಾಧನವೊಂದನ್ನು ಈಗಾಗಲೇ ಮಾರುತ್ತಿದೆ.ಅಂಗಡಿಗಳಲ್ಲಿ ಸಾಮಗ್ರಿಗಳ ಸ್ಟಾಕು ಪರಿಶೀಲನೆಗೆ ಬಳಕೆಯಾಗುವ ಸಾಧನವದು.ಎಸ್ಟಿ ಮೈಕ್ರೋ ಎಲೆಕ್ಟ್ರಾನಿಕ್ಸ್ ಎನ್ನುವ ಕಂಪೆನಿಯು ಯುರೋಪಿನಲ್ಲಿ ಐಪ್ಯಾಡ್ ಪದ ಬಳಕೆಯ ಹಕ್ಕು ಹೊಂದಿದೆ.
ಉದಯವಾಣಿ

ತಾರಸಿ,
ಪರಿಸರಪ್ರಿಯ,
ಬಿಳಿಬಣ್ಣ
Subscribe to:
Posts (Atom)