ಅಂತರ್ಜಾಲದಲ್ಲಿ ನಿಮ್ಮ ಇಮೇಜ್ ಕಾಪಾಡಿಕೊಳ್ಳಿ!
ಅಂತರ್ಜಾಲದಲ್ಲಿ ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡುವಂತಹ ಮಾಹಿತಿಗಳಿವೆಯೆಂಬ ಖಾತರಿ ನಿಮಗಿದೆಯೇ?ನೀವು ಯಾವತ್ತಾದರೂ ಅಂತರ್ಜಾಲದಲ್ಲಿ ವಿವಾದಗಳಿಗೆ ಸಿಕ್ಕಿರಬಹುದು.ಚರ್ಚೆಗೆ ಗ್ರಾಸವಾಗಿರಬಹುದು.ಕುಡಿಯುವಾಗ ಅಥವಾ ಯಾವುದೋ ವಿವಾದಾಸ್ಪದ ವ್ಯಕ್ತಿಯ ಜತೆಗೆ ನಿಮ್ಮ ಚಿತ್ರ ಇರಬಹುದು.ಮುಂದೆಂದಾದರೂ ಇವು ನಿಮಗೆ ತೊಂದರೆ ಉಂಟು ಮಾಡಬಹುದು.ಹೊಸ ನೌಕರಿಗೆ ಅರ್ಜಿ ಹಾಕುವಾಗ,ನಿಮ್ಮ ಬಗ್ಗೆ ಹೊಸ ಕಂಪೆನಿ ಅಂತರ್ಜಾಲದ ಗೂಗಲ್ ಅಂತಹ ಶೋಧ ಸೇವೆ ಬಳಸಿ ಪರೀಶೀಲಿಸುವಾಗ,ಇಂತಹ ನೆಗೆಟಿವ್ ವಿವರಗಳಿರುವ ಚಿತ್ರಗಳನ್ನು ನೋಡಿ,ನಿಮ್ಮ ಬಗ್ಗೆ ಕಂಪೆನಿ ಕೆಟ್ಟ ಅಭಿಪ್ರಾಯ ಹೊಂದಬಹುದು.ಇದು ಬರೇ ಕಲ್ಪನೆಯಲ್ಲ.ಹಲವರಿಗೆ ,ಅಂತರ್ಜಾಲದಲ್ಲಿ ಅವರ ಬಗ್ಗೆ ಇರುವ ಮಾಹಿತಿಗಳು ಅವಕಾಶಗಳಿಗೆ ಕಲ್ಲು ಬೀಳಲು ಕಾರಣವಾದದ್ದಿದೆ.ಈಗ ಇಂತಹ ಪುಟಗಳನ್ನು ಅಡಗಿಸಲು,ಸಾಧ್ಯವಾದರೆ ಅವನ್ನು ತೆಗೆದು ಹಾಕಿ,ವ್ಯಕ್ತಿಯ ಬಗ್ಗೆ ಉತ್ತಮ ಅಭಿಪ್ರಾಯ ನೀಡುವ ಪುಟಗಳೇ ಹುಡುಕುವವರ ಕಣ್ಣಿಗೆ ಬೀಳಿಸುವ ಸೇವೆ ಒದಗಿಸುವ ಅಂತರ್ಜಾಲ ತಾಣಗಳೂ ಇವೆ.ReputationDefender ಇಂತಹ ಒಂದು ತಾಣವಾಗಿದೆ.ಇದು ವ್ಯಕ್ತಿಯ ಬಗೆಗಿನ ಗೂಗಲ್ ಶೋಧವು ಉತ್ತಮ ಅಭಿಪ್ರಾಯ ಮೂಡಿಸುವಂತೆ,ಆತನ ಬಗ್ಗೆ ಇರುವ ಕೆಟ್ಟ ಪುಟಗಳನ್ನು ಕಿತ್ತು ಹಾಕುವ ಸೇವೆಗಳನ್ನು ಒದಗಿಸುತ್ತದೆ.ಈ ಸೇವೆ ಉಚಿತವೇನೂ ಅಲ್ಲ.ಅದಕ್ಕೆ ನಿಗದಿತ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಅಂತರ್ಜಾಲದಲ್ಲಿ ಇರುವ ಚಿತ್ರಗಳಲ್ಲಿ ನಮ್ಮ ಪರಿಚಿತರು ಇದ್ದರೆ,ಅವರನ್ನು ಟ್ಯಾಗ್ ಮಾಡಿ,ಅವರ ಇತರ ಮಾಹಿತಿಗಳಿಗೆ ಥಳಕು ಹಾಕುವುದು ಸಾಧ್ಯ.ಇತ್ತೀಚೆಗಿನವರೆಗೂ ಇಂತಹ ಥಳಕು ಹಾಕುವುದು ಬಳಕೆದಾರರ ಕೈಯಲ್ಲಿತ್ತು.ಆದರೆ ಮುಖವನ್ನು ನೋಡಿ ವ್ಯಕ್ತಿಯನ್ನು ಗುರುತಿಸುವ ತಂತ್ರಾಂಶಗಳ ಅಭಿವೃದ್ಧಿಯಾಗುತ್ತಿರುವ ಈಗಿನ ದಿನಗಳಲ್ಲಿ,ಚಿತ್ರಗಳಲ್ಲಿ ವ್ಯಕ್ತಿಯನ್ನು ಗುರುತಿಸಿ,ಆತನ ಇತರ ಚಿತ್ರಗಳ ಜತೆ ಥಳಕು ಹಾಕುವ ಪ್ರಕ್ರಿಯೆಯು ಕಂಪ್ಯೂಟರೇ ಮಾಡುತ್ತಿದೆ.ಹೀಗಾಗಿ,ಯಾರಾದರೂ ಮೊಬೈಲ್ ಸಾಧನದಲ್ಲಿ ತೆಗೆದ ಚಿತ್ರಗಳಲ್ಲಿ ಕಂಡು ಬಂದ ವ್ಯಕ್ತಿಯ ಮುಖವನ್ನೂ ಆತನ ಇತರ ಚಿತ್ರಗಳ ಜತೆ ಥಳಕು ಹಾಕುವ ಸಾಧ್ಯತೆ ಹೆಚ್ಚಿದೆ.ಆಕಸ್ಮಿಕ ಘಟನೆಗಳ ಚಿತ್ರಗಳಲ್ಲಿ ಈ ರೀತಿ ವ್ಯಕ್ತಿ ಕೆಟ್ಟ ರೀತಿಯಲ್ಲಿ ಚಿತ್ರಿತವಾಗಿರುವ ಚಿತ್ರಗಳೂ ಇರಬಹುದು.ಅಂತಹ ಕೆಟ್ಟ ಇಮೇಜ್ ನೀಡುವ ಚಿತ್ರಗಳಲ್ಲಿ ವ್ಯಕ್ತಿಯು ಗುರುತಿಸಲ್ಪಟ್ಟರೆ,ಆತನ ಇಮೇಜ್ ಕೆಡದೇ ಇರದು.ಮಾಹಿತಿಗಳಿಗೂ ಅಂತಿಮ ದಿನಾಂಕ-ಎಕ್ಸ್‌ಪೈರಿ ದಿನಾಂಕ ಗೊತ್ತು ಪಡಿಸಿ,ನಿಗದಿತ ಸಮಯದ ನಂತರ ಮಾಹಿತಿಗಳು ಮಾಯವಾಗುವ ಹಾಗೆ ಮಾಡಿ,ಅಂತರ್ಜಾಲದಲ್ಲಿ ಸೇರಿದ ಮಾಹಿತಿಗಳು ಸದಾ ಉಳಿದುಕೊಳ್ಳದೇ ಇರುವ ಹಾಗೆ ಮಾಡುವ "ವ್ಯಾನಿಶ್" ಸೇವೆಯನ್ನು ಲಭ್ಯವಾಗಿಸಲು ವಾಷಿಂಗ್ಟನ್ ವಿವಿಯ ಸಂಶೋಧಕರು ಪ್ರಯತ್ನಿಸುತ್ತಿದ್ದಾರೆ.ನಿಗದಿತ ಸಮಯದ ನಂತರ ಮಾಹಿತಿಯು ಗೂಢ ಲಿಪೀಕರಣಗೊಂಡು,ಒಂದು ಕೀಲಿ ಸಂಖ್ಯೆ ನೀಡಿದರೆ ಮಾತ್ರ ಗುಟ್ಟು ಬಿಟ್ಟು ಕೊಡುವ ರೀತಿ ಬದಲಾಗಿ ಬಿಡುವಂತೆ ಮಾಡಲು ಸಂಶೋಧಕರು ಸಫಲರಾಗಿದ್ದಾರೆ.
----------------------------------
ಕಿವಿಯನ್ನು ಕೆಪ್ಪಾಗಿಸುವ ಮೊಬೈಲ್ ಬಳಕೆ
ಕಿವಿಯ ಬಳಿ ಮೊರೆತ ಕೇಳುವ ಸಮಸ್ಯೆಯು ಮೊಬೈಲ್ ಬಳಕೆಯ ಕಾರಣವೂ ಬರುತ್ತದೆಯೇ? ಸಣ್ಣ ಮಟ್ಟದ ಸಮೀಕ್ಷೆಯೊಂದು ಇಂತಹ ಫಲಿತಾಂಶ ನೀಡಿದೆ.ಸಣ್ಣ ಸಮೀಕ್ಷೆಗಳ ಫಲಿತಾಂಶ ನಂಬಿಕೆಗೆ ಅರ್ಹವೇನೂ ಅಲ್ಲ.ಹಾಗೆಂದು ಅವುಗಳನ್ನು ತಳ್ಳಿಹಾಕಲೂ ಸಾಧ್ಯವಿಲ್ಲ.ಕೆಲವು ಬಗೆಯ ರೋಗಗಳು,ಕೆಲವು ಔಷಧ ಸೇವನೆಯ ಕಾರಣ ಕಿವಿ ಮೊರೆತ ಸಮಸ್ಯೆ ಬರುವುದಿದೆ.ಕಿವಿಯೊಳಗೆ ಯಾವಾಗಲೂ ಕೇಳಿಸುವ ಸದ್ದಿನ ಈ ಮೊರೆತ ಸಮಸ್ಯೆಗೆ ಮೊಬೈಲ್‌ನ ಅತಿ ಬಳಕೆ ಕಾರಣವಾಗಿದೆಯೆಂದು ಜನರಲ್ಲಿ ನಡೆಸಿದ ಸಮೀಕ್ಷೆಗಳು ಫಲಿತಾಂಶ ನೀಡಿವೆ.ಹತ್ತರಲ್ಲಿ ಓರ್ವ ವ್ಯಕ್ತಿ, ಅತಿಬಳಕೆಯ ನಂತರ ಇಂತಹ ಸಮಸ್ಯೆಗಳಿಗೆ ತುತ್ತಾಗಿರುವುದು ಕಂಡು ಬಂದಿದೆ.ಆಸ್ಟ್ರಿಯಾದಲ್ಲಿ ನಡೆಸಿದ ಸಮೀಕ್ಷೆಗಳು ಈ ಅಭಿಪ್ರಾಯ ಹೊಮ್ಮಿಸಿವೆ.
-----------------------------------------------
ಡಿ ಟಿ ಎಚ್ ಸೇವೆ ಆಗಲಿದೆ ಅಗ್ಗ
ಟ್ರಾಯ್ ದೃಷ್ಟಿಯಿದೀಗ ಡಿಟಿಎಚ್,ಐಪಿಟಿವಿ ಅಂತಹ ಟಿವಿ ಕಾರ್ಯಕ್ರಮಗಳ ಡಿಜಿಟಲ್ ಪ್ರಸಾರದಲ್ಲಿ ತೊಡಗಿದವರ ಮೇಲೆ ಬಿದ್ದಿದೆ.ಈ ಕ್ಷೇತ್ರದಲ್ಲಿ ಸದ್ಯ ಬಹಳ ಸ್ಪರ್ಧೆ ಇದ್ದರೂ,ಗ್ರಾಹಕರಿಗೆ ಅಗ್ಗದ ಸೇವೆ ಲಭ್ಯವಾಗುತ್ತಿಲ್ಲ.ಗ್ರಾಹಕರ ಹಕ್ಕಿನ ರಕ್ಷಣೆಗೋಸ್ಕರ ಮಧ್ಯಪ್ರವೇಶಿಸಿರುವ ಟ್ರಾಯ್,ಮಾಸಿಕ ಕನಿಷ್ಠ ಶುಲ್ಕವನ್ನು ನೂರೈವತ್ತು ರೂಪಾಯಿಗಳಿಗೆ ಸೀಮಿತಗೊಳಿಸುವ ಆದೇಶವನ್ನು ನೀಡಿದೆ.ಈ ಆದೇಶ ಸೆಪ್ಟೆಂಬರ್‌ನಿಂದ ಜಾರಿಗೆ ಬರಲಿದೆ.ಪ್ರತಿ ಪೇ ಚಾನೆಲಿನ ದರವನ್ನು ಪ್ರತ್ಯೇಕವಾಗಿ ನಿಗದಿ ಪಡಿಸುವಂತೆ,ಟ್ರಾಯ್ ಸೂಚಿಸಿದೆ.ಗ್ರಾಹಕ ಆಯ್ದ ಪ್ಯಾಕೇಜಿನ ದರವನ್ನು ಆರು ತಿಂಗಳ ಕಾಲ ಹೆಚ್ಚಿಸದಿರುವಂತೆ ಮತ್ತು ಅದನ್ನು ಮೊದಲ ಆರು ತಿಂಗಳಲ್ಲಿ ಉಚಿತವಾಗಿ ಬದಲಿಸಲು ಅವಕಾಶ ಸಿಗಲಿದೆ.ಈ ಅವಧಿಯಲ್ಲಿ ಪ್ಯಾಕೇಜಿನ ದರವನ್ನು ಇಳಿಸುವ ಅವಕಾಶವಷ್ಟೇ ಸೇವಾದಾತೃಗಳಿಗಿರುತ್ತದೆ.ಡಿಟಿಎಚ್ ಆಂಟೆನಾ,ಸೆಟ್ ಟಾಪ್ ಬಾಕ್ಸ್ ಇತ್ಯಾದಿ ಕೆಟ್ಟರೆ,ಅವನ್ನು ಉಚಿತವಾಗಿ ಸರಿ ಪಡಿಸಿಕೊಡುವ ಜವಾಬ್ದಾರಿ ಸೇವೆ ನೀಡುವಾತನದ್ದಾಗಲಿದೆ.ಸೆಟ್ ಟಾಪ್ ಬಾಕ್ಸ್ ಅಳವಡಿಸಿದಲ್ಲಿ ಕೇಬಲ್ ಟಿವಿ ಸೇವೆ ನೀಡುವವರಿಗೂ ಈ ನಿಯಮಗಳು ಅನ್ವಯವಾಗಲಿದೆ.ದೂರದರ್ಶನದ ಚಾನೆಲುಗಳನ್ನು ಒದಗಿಸುವುದು ಕಡ್ಡಾಯವಾಗಲಿದೆ.
-----------------------------------------------
ಪತ್ರಿಕೆಗಳ ಹಕ್ಕುಸ್ವಾಮ್ಯ:ಆದಾಯ ಮೂಲ?
ಪತ್ರಿಕೆಗಳ ಪ್ರಸಾರ ಇಳಿದು,ಅವುಗಳ ಆದಾಯ ಇಳಿಮುಖವಾಗುವ ಪ್ರವೃತ್ತಿ ವಿದೇಶಗಳಲ್ಲಿ ಕಂಡು ಬರುತ್ತಿದೆ.ಅಂತರ್ಜಾಲ ಆವೃತ್ತಿಗಳ ಜನಪ್ರಿಯತೆ ಏರಿದರೂ,ಜಾಹೀರಾತುಗಳು ಸೀಮಿತವಾಗಿ ಸಿಗುವ ಕಾರಣ,ಅವುಗಳಿಂದ ಬರುವ ಆದಾಯ ತೃಪ್ತಿದಾಯಕವಾಗಿಲ್ಲ.ಇದಕ್ಕೊಬ್ಬ ವಕೀಲ ಒಂದುಪಾಯ ಹೂಡಿದ್ದಾನೆ.ಆತನು ಪತ್ರಿಕೆಗಳ ಕಾಪಿರೈಟ್ ಉಲ್ಲಂಘಿಸುವ ಅಪರಾಧ ಮಾಡುವವರ ಮೇಲೆ ಕಣ್ಣಿರಿಸುತ್ತಾನೆ.ಅಂತಹ ಅಪರಾಧ ಮಾಡಿದ ದೊಡ್ಡಕುಳಗಳ ಮೇಲೆ ನ್ಯಾಯಾಲಯದಲ್ಲಿ ಖಟ್ಲೆ ಜಡಿದು,ಪರಿಹಾರ ಕೇಳಿ,ತನ್ಮೂಲಕ ಪತ್ರಿಕೆಗಳಿಗೆ ನೆರವಾಗುವ ಯತ್ನ ನಡೆಸಿದ್ದಾನೆ.ಸ್ಟೀವ್ಸ್ ಗಿಬ್ಸನ್ ಎನ್ನುವಾತನ ಯೋಚನೆಯಿದು.ರೈಟ್‌ಹೆವನ್ ಎನ್ನುವ ಲಾಸ್‌ವೇಗಸ್‌ನ ಕಂಪೆನಿಯ ಸಿಇಓ ಆಗಿರುವ ಗಿಬ್ಸನ್,ಮಾಧ್ಯಮಗಳು ತಮ್ಮ ಸಂಪನ್ಮೂಲಗಳ ಪ್ರಯೋಜನ ಪಡೆಯಲು ಹೀಗೆ ಮಾಡುವುದು ಅನಿವಾರ್ಯ ಎಂದು ಅಭಿಪ್ರಾಯ ಪಡುತ್ತಾನೆ.ಎಂಬತ್ತಕ್ಕೂ ಹೆಚ್ಚು ಕೇಸುಗಳನ್ನೀಗಲೇ ಕಂಪೆನಿಯು ವಿವಿಧ ಕೋರ್ಟುಗಳಲ್ಲಿ ದಾಖಲಿಸಿದೆ.ಆದರೆ ಬ್ಲಾಗ್‌ಗಳಲ್ಲಿ ಇಂತಹ ಕಾಪಿರೈಟ್ ಕಾಯಿದೆಯ ಉಲ್ಲಂಘನೆ ನಡೆದಾಗ,ಅವರುಗಳ ಮೇಲೆ ಕ್ರಮಕೈಗೊಳ್ಳುವುದು ಸುಲಭದ ಕೆಲಸವಲ್ಲ ಎನ್ನುವುದನ್ನು ಯಾರಾದರೂ ಊಹಿಸಬಹುದು.
------------------------------------------
ಅಗ್ಗದ ಟ್ಯಾಬ್ಲೆಟ್
ಒಂದೂವರೆಸಾವಿರ ರುಪಾಯಿಯಲ್ಲಿ ಗಣಕವೇ?ಭಾರತದ ಸಂಶೋಧಕರು ಅತ್ಯಂತ ಮಿತದರದಲ್ಲಿ ಅಂತರ್ಜಾಲ ಜಾಲಾಟ,ಪದಸಂಸ್ಕರಣದಂತಹ ಅಗತ್ಯ ತಂತ್ರಾಂಶಗಳ ಬಳಕೆಗೆ ಅನುವು ಮಾಡುವ,ವಿಡಿಯೋ ಕಾನ್ಫರೆನ್ಸ್ ಮಾಡಲಾಗುವ ಸಾಧನವನ್ನು ತಯಾರಿಸಿದೆ.ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಾಲ್ ಇದನ್ನು ಬಿಡುಗಡೆ ಮಾಡಿ,ಮುಂದಿನ ದಿನಗಳಲ್ಲಿ ಬೆಲೆ ಇನ್ನೂ ಇಳಿಯುವ ಬಗ್ಗೆ ಆಶಾವಾದ ವ್ಯಕ್ತಪಡಿಸಿದರು.ಇದರಲ್ಲಿ ಲಿನಕ್ಸ್ ಕಾರ್ಯನಿರ್ವಹಣಾ ತಂತ್ರಾಂಶ ಬಳಸಲಾಗುವುದು.
-------------------------------------------
ಬ್ರಾಡ್‌ಬ್ಯಾಂಡ್ ವ್ಯಾಪಿಸಲು ಹೊಸ ಯೋಜನೆ
ಬ್ರಾಡ್‌ಬ್ಯಾಂಡನ್ನು ದೇಶದ ಪ್ರತಿ ಪಂಚಾಯಿತಿ ಮಟ್ಟಕ್ಕೂ ಒಯ್ಯಲು ಸರಕಾರ ಹೊಸ ಕಾರ್ಯಯೋಜನೆ ಸಿದ್ಧಗೊಳಿಸಿದೆ.ಇದಕ್ಕೆ ಮೂಲಸೌಕರ್ಯವೆಂದರೆ ಫೈಬರ್ ಅಪ್ಟಿಕ್ ಕೇಬಲ್.ಹೊಸತಾಗಿ ಕೇಬಲ್ ಹಾಕುವುದು ಬಹು ದುಬಾರಿ,ಜತೆಗೆ ಸಮಯ ಬೇರೆ ಹೆಚ್ಚು ಬೇಕಾಗುತ್ತದೆ.ಇದನ್ನು ತಪ್ಪಿಸಲು ಸದ್ಯ ಲಭ್ಯವಿರುವ ಕೇಬಲ್‌ಗಳನ್ನೇ ಬಳಸಿ ಬ್ರಾಡ್‌ಬ್ಯಾಂಡ್ ಸೇವೆ ಒದಗಿಸುವುದು ಹೊಸ ಯೋಜನೆಯ ಪ್ರಮುಖ ಅಂಶ.ಬಿಎಸೆನ್ನೆಲ್,ಪವರ್‌ಗ್ರಿಡ್ ಮತ್ತು ರೈಲ್‌ಟೆಲ್ ಮುಂತಾದ ಸಾರ್ವಜನಿಕ ರಂಗದ ಸಂಸ್ಥೆಗಳು ಅಳವಡಿಸಿರುವ ಕೇಬಲ್‌ಗಳನ್ನು ಈ ಉದ್ದೇಶಕ್ಕೆ ಬಳಸುವ ಮೂಲಕ,ಮಿತವ್ಯಯ ಮತ್ತು ಹೆಚ್ಚು ಬಳಕೆ ಮಾಡುವುದು ಸರಕಾರದ ಯೋಜನೆ.ಮೊದಲಾಗಿ ನಾಲ್ಕು ರಾಜ್ಯಗಳ ನೂರು ಗ್ರಾಮ ಪಂಚಾಯತುಗಳನ್ನು ಈಗ ಲಭ್ಯವಿರುವ ಸಾರ್ವಜನಿಕ ರಂಗದ ಸಂಸ್ಥೆಗಳ ಕೇಬಲ್ ಜಾಲದ ಮೂಲಕ ಸಂಪರ್ಕಿಸಿ,ಪರೀಕ್ಷಿಸಲಾಗುವುದು.ನ್ಯಾಶನಲ್ ಇನ್ಫೊರ್ಮೇಶನ್ ಸೆಂಟರ್( ಎನ್ ಐ ಸಿ )ಇದಕ್ಕೆ ಅಗತ್ಯವಾದ ತಂತ್ರಾಂಶವನ್ನು ಒದಗಿಸಲಿದೆ.ಪೂರ್ತಿ ಯೋಜನೆ ಅನುಷ್ಠಾನಕ್ಕೆ ಮೂರು ವರ್ಷಗಳೇ ಹಿಡಿಯಬಹುದು.ಖರ್ಚು ಹದಿನೆಂಟು ಸಾವಿರ ಕೋಟಿಗಳಾಗಬಹುದು.ಪ್ರತಿ ಪಂಚಾಯತಿಗೂ ಮೂರು ಬ್ರಾಡ್‌ಬ್ಯಾಂಡ್ ಸಂಪರ್ಕ,ಕೇಬಲ್ ಟಿವಿ ಸಂಪರ್ಕ ,ಮೂರು ದೂರವಾಣಿ ಸಂಪರ್ಕಗಳನ್ನು ಉಚಿತವಾಗಿ ಒದಗಿಸುವುದು ಜತೆಗೆ ಕಂಪ್ಯೂಟರ್ ಮತ್ತು ಪ್ರಿಂಟರುಗಳನ್ನೂ ಉಚಿತವಾಗಿ ಒದಗಿಸಿ,ಗ್ರಾಮೀಣ ಜನರನ್ನು ಆಕರ್ಷಿಸುವ ಯೋಜನೆಯಿದೆ.
udayavani bangalore
---------------------------------
Udayavani
*ಅಶೋಕ್‌ಕುಮಾರ್ ಎ
Monday, July 26, 2010
Monday, July 19, 2010
ಕ್ಯಾಂಪಸ್ ಸಂದರ್ಶನ:ಯಾವ ಸೆಮಿಸ್ಟರಿನಲ್ಲಿ ನಡೆಯಬೇಕು?

ಕಾಲೇಜಿನ ಕ್ಯಾಂಪಸ್ಸಿಗೆ ಹೋಗಿ ವಿದ್ಯಾರ್ಥಿಗಳನ್ನು ಆಯ್ದುಕೊಳ್ಳುವ ಪ್ರಕ್ರಿಯೆಗೀಗ ಮತ್ತೆ ಚಾಲನೆ ದೊರಕಿದೆ.ಆರ್ಥಿಕ ಕುಸಿತದ ದಿನಗಳು ಮುಗಿದು,ಕಂಪೆನಿಗಳಿಗೆ ಕೈತುಂಬಾ ಹೊರಗುತ್ತಿಗೆ ಕೆಲಸಗಳು ಬರುತ್ತಿರುವುದು,ಇದಕ್ಕೆ ಕಾರಣ.ಜೂನಿಗೆ ಮುಗಿದ ಆರ್ಥಿಕ ತ್ರೈಮಾಸಿಕದಲ್ಲಿ ಟಿಸಿಎಸ್ ಅಂತಹ ಐಟಿ ಕಂಪೆನಿ ಉತ್ತಮ ಪ್ರದರ್ಶನ ನೀಡಿದೆ.ಇನ್ಫೋಸಿಸ್ ತುಸು ಹಿನ್ನಡೆ ಅನುಭವಿಸಿದರೂ,ಮುಂದಿನ ತ್ರೈಮಾಸಿಕದ ಬಗ್ಗೆ ಹೆಚ್ಚಿನ ಭರವಸೆ ಹೊಂದಿದೆ.ಬಹುಶ: ಇತರ ಐಟಿ ಕಂಪೆನಿಗಳೂ ಇದೇ ರೀತಿಯ ಆಶಾದಾಯಕ ಸ್ಥಿತಿಯಲ್ಲಿವೆ.ಹಾಗಾಗಿ ಕ್ಯಾಂಪಸ್ ಸಂದರ್ಶನಗಳು ಮತ್ತೆ ಚುರುಕು ಪಡೆದುಕೊಳ್ಳುವುದು ನಿಶ್ಚಿತ.ಇದೇ ವೇಳೆ ನ್ಯಾಸಾಕಾಂ ಕಂಪೆನಿಗಳಿಗೆ ಕ್ಯಾಂಪಸ್ ಸಂದರ್ಶನಗಳನ್ನು ಕೊನೆಯ ವರ್ಷದಲ್ಲಿರುವ ವಿದ್ಯಾರ್ಥಿಗಳಿಗೆ ನಡೆಸುವಂತೆ ಕೋರಿದೆ.ಕಂಪೆನಿಗಳೂ ಈ ನಿರ್ದೇಶನವನ್ನು ಪಾಲಿಸಿಕೊಂಡು ಬರುತ್ತಿವೆ.ಅಂತಿಮ ವರ್ಷದಲ್ಲಿ ಕಲಿಯುತ್ತಿರುವವರಿಗೆ ನೌಕರಿ ಖಾತರಿ ದೊರಕುವುದು ಕಾಲೇಜು,ವಿದ್ಯಾರ್ಥಿಗಳಿಗೆ ಮತ್ತು ಹೆತ್ತವರಿಗೆ ಅನುಕೂಲಕರವೆನಿಸುತ್ತದೆ.ಎಕ್ಸೆಂಚುವೇಟ್ ಕಂಪೆನಿ ಮಾತ್ರಾ ಒಂದೆರಡು ಕಾಲೇಜುಗಳಲ್ಲಿ ಮೂರನೇ ವರ್ಷದ ವಿದ್ಯಾರ್ಥಿಗಳಿಗೇ ಕ್ಯಾಂಪಸ್ ಸಂದರ್ಶನ ನಡೆಸಿ,ಅವರುಗಳಿಗೆ ನೌಕರಿ ಭರವಸೆ ನೀಡಿರುವುದು ವರದಿಯಾಗಿದ್ದು,ಇದೀಗ ಚರ್ಚೆಗೆ ಗ್ರಾಸವಾಗಿದೆ.ಒಂದು ಕಂಪೆನಿ ಹೀಗೆ ಮಾಡಿದೊದನೆ,ಇತರ ಕಂಪೆನಿಗಳೂ ಹೀಗೆ ಮಾಡುವುದು ಸಾಮಾನ್ಯ.ತಮಗೆ ಕಾಲೇಜುಗಳ ಉತ್ತಮ ವಿದ್ಯಾರ್ಥಿಗಳು ಬೇಕು ಎನ್ನುವ ಕಂಪೆನಿಗಳ ಮೇಲಾಟ ಯಾವಾಗಲೂ ಇದ್ದದ್ದೇ.ತಾವು ತಡವಾಗಿ ಹೋದರೆ,ತಮಗೆ ಉಳಿದ ಕಂಪೆನಿಗಳಿಂದ ತಿರಸ್ಕೃತ ವಿದ್ಯಾರ್ಥಿಗಳು ಸಿಗುತ್ತಾರೆ ಎನ್ನುವುದು ಕಂಪೆನಿಗಳ ಅನಿಸಿಕೆ.ಹಾಗಾಗಿ ಕಂಪೆನಿಗಳು ತಾವೇ ಮೊದಲು ಸಂದರ್ಶನಕ್ಕೆ ಕಾಲೇಜಿಗೆ ಭೇಟಿ ಕೊಡಬಯಸುತ್ತಾರೆ.ಈಗ ಒಂದು ಕಂಪೆನಿ ಮೂರನೇ ವರ್ಷದವರಿಗೆ ಸಂದರ್ಶನ ನಡೆಸಿದರೆ,ಉಳಿದವರೂ ಅವರನ್ನನ್ನುಸರಿಸಿದರೆ,ಸಮಸ್ಯೆಯಾಗುತ್ತದೆ.ನೌಕರಿ ಖಾತರಿಯಾದ ವಿದ್ಯಾರ್ಥಿಗಳಲ್ಲಿ ಹಿಂದಿನ ಉತ್ಸಾಹ ಉಳಿದಿರುವುದಿಲ್ಲ.ಅವರು ಶೈಕ್ಷಣಿಕ ವಿಷಯಗಳನ್ನು ಕಡೆಗಣಿಸುವುದು ಕಂಡು ಬಂದಿತ್ತು.ಹಾಗಾಗಿ,ಈಗ ಮತ್ತೆ ಹಳೆಯ ಚಾಳಿ ಶುರುವಾಗುವುದು,ಯಾರಿಗೂ ಬೇಕಿಲ್ಲ.
--------------------------------------------------
ಕಾಂಚಾಣಕ್ಕೆ ಲಾಂಛನ
ರುಪಾಯಿಗೆ ಹೊಸ ಲಾಂಛನವನ್ನು ಅಂಗೀಕರಿಸಿರುವ ಸರಕಾರದ ಕ್ರಮದಿಂದಾಗಿ,ರುಪಾಯಿಗೆ ಹೊಸ ಖದರು ಬಂದಿದೆ.ಅದರ ಜತೆಗೆ,ಆ ಚಿಹ್ನೆಯನ್ನು ಕಂಪ್ಯೂಟರು ಮತ್ತು ಸೆಲ್‌ಪೋನುಗಳ ಕೀಲಿಮಣೆಯಲ್ಲಿ ಅಳವಡಿಸುವ ಬಗ್ಗೆಯೂ ಯೋಚಿಸಬೇಕಿದೆ.ಕೀಲಿಮಣೆಗಳ ತಯಾರಕರು ಹೊಸ ಕೀಲಿಮಣೆಗಳಲ್ಲಿ ಚಿಹ್ನೆಯನ್ನು ಅಳವಡಿಸಲು ತಯಾರಾಗಿದ್ದಾರೆ.ಆದರೆ,ಯಾವ ಕೀಲಿಯಲ್ಲಿ ಈ ಚಿಹ್ನೆ ಬರಬೇಕು ಎನ್ನುವುದನ್ನು ಭಾರತೀಯ ಮಾನಕಗಳ ಸಂಸ್ಥೆ ನಿಗದಿಪಡಿಸಬೇಕಿದೆ.ಜತೆಗೆ,ತಂತ್ರಾಂಶಗಳಲ್ಲೂ ತಕ್ಕ ಬದಲಾವಣೆ ಆಗಬೇಕಿದೆ.ಅದಕ್ಕೆ ಮುನ್ನ ರುಪಾಯಿ ಲಾಂಛನಕ್ಕೆ ಯಾವ ಯುನಿಕೋಡ್ ಮೌಲ್ಯ ಸಿಗುತ್ತದೆನ್ನುವುದೂ ನಿರ್ಧಾರವಾಗಬೇಕಿದೆ.ಇವೆಲ್ಲಾ ಆಗಲು ಇನ್ನೂ ಕಡಿಮೆ ಅಂದರೂ ಮೂರು-ನಾಲ್ಕು ತಿಂಗಳು ಬೇಕಾದೀತು.ರುಪಾಯಿ ಲಾಂಛನವು ನಮ್ಮ ವ್ಯವಸ್ಥೆಯಲ್ಲಿ ಚೆನ್ನಾಗಿ ಮಿಳಿತವಾಗಲು ವರ್ಷಗಳೇ ಬೇಕಾಗುವುದು ನಿಶ್ಚಿತ.
---------------------------------------------------
ಜಾಹೀರಾತುದಾರು ಮತ್ತು ಪತ್ರಿಕೋದ್ಯಮ
ಅಂತರ್ಜಾಲದಲ್ಲಿ ಸುದ್ದಿಯ ಲಭ್ಯತೆ ಮತ್ತು ಪತ್ರಿಕೆಗಳ ಅಂತರ್ಜಾಲ ತಾಣಗಳಿಂದ ಪತ್ರಿಕೆಗಳಿಗೆ ಕೊಡಲಿ ಪೆಟ್ಟು ಬೀಳಲಿದೆ ಎಂದು ವಿಶ್ಲೇಷಕರು ಒಪ್ಪುವುದಿಲ್ಲ.ಅಂತರ್ಜಾಲದಲ್ಲಿ ಇ-ಪೇಪರುಗಳಿದ್ದರೂ,ಕೈಲಿ ಪತ್ರಿಕೆ ಹಿಡಿದು ಓದುವುದೇ ಸಾಮಾನ್ಯ ಜನರಿಗಿನ್ನೂ ಆಪ್ಯಾಯಮಾನವೆನಿಸುತ್ತದೆ.ಆದರೆ ಜಾಹೀರಾತುದಾರರು ಪತ್ರಿಕೆಗಳಿಗೆ ಜಾಹೀರಾತು ಕೊಡುವುದನ್ನು ಬಿಟ್ಟು ಅಂತರ್ಜಾಲತಾಣಗಳಿಗೆ ತಮ್ಮ ಬಜೆಟ್ ಮೀಸಲಿರಿಸಿದರೆ,ಪತ್ರಿಕೆಗಳ ಜಾಹೀರಾತು ಆದಾಯ ಇಳಿದು,ಅವುಗಳ ಉಳಿವಿನ ಮೇಲೆ ಪ್ರಶ್ನಾರ್ಥಕ ಚಿಹ್ನೆ ಮೂಡುವುದು ಸಹಜ.ಜಾಹೀರಾತುಗಳನ್ನು ಅಂತರ್ಜಾಲದಲ್ಲಿ ಬಳಕೆದಾರರ ಆಸಕ್ತಿ ನೋಡಿಕೊಂಡು,ನೀಡಲು ಸಾಧ್ಯವಾಗುವ ಸುಧಾರಿತ ತಂತ್ರಗಳು ಇವೆ.ಕಡಿಮೆ ಖರ್ಚಿನಲ್ಲಿ ಜಾಹೀರಾತುಗಳನ್ನು ಹೆಚ್ಚು ಫಲಪ್ರದವಾಗಿಸುವುದು ಸಾಧ್ಯವಾಗುವುದರಿಂದ ಜಾಹೀರಾತುದಾರರು,ಅಂತರ್ಜಾಲ ಮಾಧ್ಯಮದಲ್ಲೇ ಹೆಚ್ಚು ಜಾಹೀರಾತು ನೀಡಲು ಮನ ಮಾಡುತ್ತಿರುವುದು,ಪತ್ರಿಕೆಗಳಿಗೆ ಮಾರಕವಾಗಬಹುದು.
--------------------------------
ಹರಿಣಿಕ್ಯಾರಿಕೇಚರ್
ಹರಿಶ್ಚಂದ್ರ ಶೆಟ್ಟಿಯವರ ಬಗ್ಗೆ ಗೊತ್ತಿಲ್ಲದ ವ್ಯಂಗ್ಯಚಿತ್ರದ ಅಭಿಮಾನಿ ಕನ್ನಡದಲ್ಲಿ ಇರಲಿಕ್ಕಿಲ್ಲ.ಇವರ ವ್ಯಂಗ್ಯಚಿತ್ರಗಳು http://harinigallery.blogspot.comನಲ್ಲಿ ಕಾಣಿಸಿಕೊಳ್ಳುತ್ತಿವೆ.ಈಗಿವರ ವ್ಯಂಗ್ಯಭಾವಚಿತ್ರಗಳಿಗೇ ಮೀಸಲಾದ ಬ್ಲಾಗೊಂದು ಸಿದ್ಧವಾಗಿದೆ.http://harinicaricature.blogspot.comನಲ್ಲಿರುವ ಈ ಬ್ಲಾಗ್ ಅವರ ಹೊಸ ಕ್ಯಾರಿಕೇಚರುಗಳನ್ನು ನಿಮಗೆ ತಲುಪಿಸಲಿವೆ.ವ್ಯಂಗ್ಯಭಾವಚಿತ್ರ ಬೇಕಾದವರು,ಅವರಿಗೆ ಮಿಂಚಂಚೆ ಮಾಡಿ,ತಮ್ಮ ಚಿತ್ರ ಕಳುಹಿಸಿ,ಅದನ್ನು ವ್ಯಂಗ್ಯಭಾವಚಿತ್ರವಾಗಿಸಿ ಕಳುಹಿಸುವ ಸೇವೆಯನ್ನೂ ಹರಿಣಿ ಒದಗಿಸಲಿದ್ದಾರೆ.ಇದಕ್ಕೆ ನಿಗದಿತ ಶುಲ್ಕ ಪಾವತಿಸಬೇಕಾಗುತ್ತದೆ.ವಿವರಗಳಿಗೆ ಅವರ ಬ್ಲಾಗು ನೋಡಿ.
-----------------------------------------------
ಎಪಿಕ್ ಎನ್ನುವ ಸುಲಭ ಬ್ರೌಸರ್
ಬ್ರೌಸರ್ ಎನ್ನುವುದು ಒಂದು ಮುಖ್ಯ ತಂತ್ರಾಂಶ.ಅಂತರ್ಜಾಲ ಜಾಲಾಟಕ್ಕೆ ಬಳಾಕೆಯಾಗುವ ಬ್ರೌಸರ್ ತಂತ್ರಾಂಶದಲ್ಲಿ ಈಗ ಫೈರ್‌ಫಾಕ್ಸ್ ಬಹು ಜನಪ್ರಿಯ.ಹಿಂದೆ ಮೈಕ್ರೋಸಾಫ್ಟಿನ ಇಂಟರ್ನೆಟ್ ಎಕ್ಸ್‌ಪ್ಲೋರರ್ ಬ್ರೌಸರ್ ಆಗಿ ಎಲ್ಲೆಲ್ಲೂ ಬಳಕೆಯಾಗುತ್ತಿತ್ತು.ಆದರೆ,ಅದರ ಜನಪ್ರಿಯತೆಯೇ,ಅದಕ್ಕೆ ಮುಳುವಾಯಿತು.ಅದರ ಭದ್ರತಾ ಕೊರತೆಗಳ ಕಾರಣ ಅದರ ಬಳಕೆ ಕಡಿಮೆಯಾಗತೊಡಗಿತು.ಈಗ ಎಪಿಕ್ ಎನ್ನುವ ಬ್ರೌಸರ್ ಬಂದಿದೆ,ಇದನ್ನು ಭಾರತದಲ್ಲೇ ತಯಾರಿಸಲಾಗಿದೆ.ಇದು ಭಾರತೀಯರ ಜಾಲಾಟಕ್ಕೆ ಸೂಕ್ತವಾಗಿ ತಯಾರಿಸಲಾಗಿದೆ.ಇದರಲ್ಲಿ ಆಂಟಿ-ವೈರಸ್ ತಂತ್ರಾಂಶವನ್ನೂ ಸೇರಿಸಿರುವುದು ವಿಶೇಷ.ಒಂದು ಅಂತರ್ಜಾಲ ತಂತ್ರಾಂಶವನ್ನು ಹೆಸರು ಮತ್ತು ನೋಟದಲ್ಲಿ ಹೋಲುವ ತಾಣಗಳ ಮೂಲಕ ಜನರನ್ನು ಮೋಸಗೊಳಿಸುವ ಫಿಶಿಂಗ್ ದಾಳಿಗಳನ್ನು ಪ್ರತಿರೋಧಿಸುವ ಸಾಮರ್ಥ್ಯವನ್ನಿದು ಹೊಂದಿರುವುದು ವಿಶೇಷ.ಫೈರ್‌ಫಾಕ್ಸ್ ಬ್ರೌಸರ್ ತಳಹದಿಯ ಮೇಲೇ ರಚಿತವಾದ ತಂತ್ರಾಂಶವಿದು.ಸುಮಾರು ಹನ್ನೊಂದು ಎಂಬಿಯಷ್ಟು ಗಾತ್ರದ ಕಡತವನ್ನು ಇಳಿಸಿಕೊಂಡು ಕಂಪ್ಯೂಟರಿನಲ್ಲಿ ಅನುಸ್ಥಾಪಿಸಿಕೊಳ್ಳಬೇಕಾಗುತ್ತದೆ.ಭಾರತೀಯ ಭಾಷೆಗಳಿಗೆ ಇಲ್ಲಿ ಅಗತ್ಯವಾದ ಅನುಕೂಲತೆಯಿದೆ.ಚುರುಕಾಗಿ ಕಾರ್ಯನಿರ್ವಹಿಸುತ್ತದೆ ಎನ್ನುವುದು ಧನಾತ್ಮಕ ಅಂಶ.ಹಲವಾರು ಸಾಮಾಜಿಕ ಜಾಲತಾಣಗಳಿಗೆ ಕ್ಲಿಕ್ಕಿಸುವ ಮೂಲಕವೇ ತೆರೆಯುವ ಸವಲತ್ತು ಎಪಿಕನ್ನು ಹೆಚ್ಚು ಬಳಕೆದಾರಸ್ನೇಹಿಯಾಗಿಸುತ್ತದೆ.ಅಲಾರಂ ತರದ ವ್ಯವಸ್ಥೆ,ನೀವು ಮಾದಬೇಕಿರುವ ಕೆಲಸದ ಪಟ್ಟಿಯನ್ನಿಟ್ಟುಕೊಳ್ಳುವ ವ್ಯವಸ್ಥೆಗಳು,ಬೇಲೂರು-ಹಳೆಬೀಡು ಅಂತಹ ಪ್ರವಾಸಿ ಸ್ಥಳಗಳ ವಾಲ್‌ಪೇಪರ್ ಎವೆಲ್ಲವೂ ಇದರಲ್ಲಿದೆ.ಅಲ್ಲದೆ ಮೈಕಂಪ್ಯೂಟರಿಗೂ ಬ್ರೌಸರ್ ಮೂಲಕವೇ ಸಾಗುವ ಅನುಕೂಲ ಇಲ್ಲಿದೆ.http://www.epicbrowser.com/ ತಾಣದಿಂದ ಇಳಿಸಿಕೊಳ್ಳಿ.
----------------------------------
ಮೊನಾಲಿಸಾ ಚಿತ್ರದಲ್ಲಿ ವರ್ಣಪದರಗಳಿವೆ
ಮೊನಾಲಿಸಾ ಚಿತ್ರ ಲಿಯೋನಾರ್ಡೋ ವಿಂಚಿಯವರ ಹೆಸರಾಂತ ವರ್ಣಚಿತ್ರ.ಇದರ ಮೂರು ಆಯಾಮಗಳ ನೋಟ,ಮೊನಾಲಿಸಾ ಸೌಂದರ್ಯ ಇವೆಲ್ಲಾ ಬಹುಪ್ರಸಿದ್ಧ.ಈಗ ಈ ಚಿತ್ರವನ್ನು ಎಕ್ಸ್‌ರೇ ಪ್ಲೊರೆಸೆನ್ಸ್ ಸ್ಪೆಕ್ಟ್ರಾಗಫಿ ಎನ್ನುವ ತಂತ್ರ ಬಳಸಿ,ಬಹು ಎಚ್ಚರಿಕೆಯಿಂದ ವಿಶ್ಲೇಷಿಸಲಾಗಿದೆ.ಆಗ ಕಂಡುಬಂದ ಅಂಶವೆಂದರೆ,ಈ ವರ್ಣಚಿತ್ರವನ್ನು ರಚಿಸಲು ಕಲಾವಿದ ಹಲವಾರು ಪದರಗಳ ವರ್ಣ ಲೇಪನ ಉಪಯೋಗಿಸಿದ್ದಾರೆ ಎನ್ನುವ ಅಂಶ.ಮೂವತ್ತರಷ್ಟು ಪದರಗಳಿದ್ದರೂ,ಅದರ ಒಟ್ಟು ದಪ್ಪ ಮಾನವನ ಕೂದಲಿನ ಅರ್ಧದಷ್ಟಿರಬಹುದು.ಇಂತಹ ತಂತ್ರ ಪ್ರಚಲಿತದಲ್ಲಿದ್ದ ತಂತ್ರವೇ ಆಗಿತ್ತಂತೆ.ಸುಮ್ಯಾಟೋ ಎಂದನ್ನದನ್ನು ಕರೆಯುತ್ತಾರೆ.ಪ್ರೆಂಚ್ ಸಂಶೋಧಕನೋರ್ವನ ಅಧ್ಯಯನದಿಂದ ಈ ಅಂಶಗಳು ಬೆಳಕಿಗೆ ಬಂದಿವೆ.ವಿಂಚಿಯು ತನ್ನೆಲ್ಲಾ ಚಿತ್ರರಚನೆಗಳಲ್ಲೂ ವಿವಿಧ ಪ್ರಯೋಗಗಳನ್ನು ಮಾಡಿರುವುದು ಸಂಶೋಧನೆಯಿಂದ ವ್ಯಕ್ತವಾಗಿರುವ ಮತ್ತೊಂದು ಅಂಶ.
-------------------------------------------------- udayavani

Labels:
ಕ್ಯಾಂಪಸ್ ಸಂದರ್ಶನ,
ಸೆಮಿಸ್ಟರಿ
Monday, July 12, 2010
ಅಂಚೆಯಣ್ಣನಿಗೆ ಸೋಲೆಕ್ಷಾ
ಅಂಚೆಯಣ್ಣನಿಗೆ ಸೋಲೆಕ್ಷಾ
ಸೌರಶಕ್ತಿಚಾಲಿತ ಮತ್ತು ಪೆಡಲ್ ಹೀಗೆ ಎರಡೂ ವಿಧದ ಬಳಕೆಯನ್ನು ಸಾಧ್ಯವಾಗಿಸಿರುವ,ಸೋಲೆಕ್ಷಾ ಎಂಬ ವಾಹನವನ್ನು ಇಂಡಿಯಾಪೋಸ್ಟ್ ಪರೀಕ್ಷಾರ್ಥ ಬಳಕೆಗೆ ಆರಂಭಿಸಿದೆ.ಮೊದಲಿಗೆ ರಾಜಾಸ್ತಾನದಲ್ಲಿ ಬಳಸಿ,ಮುಂದೆ ಇತರೆಡೆಯೂ ಬಳಸುವ ಬಗ್ಗೆ ನಿರ್ಧರಿಸಲಾಗುವುದಂತೆ.ಪಾರ್ಸೆಲ್,ಕಾಗದಪತ್ರಗಳನ್ನು ಹೇರಿಕೊಂಡು ಹೋಗಲು ಅನುಕೂಲಕರವಾಗುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ.ಸೌರಶಕ್ತಿಯನ್ನು ಬಳಸುವುದರಿಂದ ವಾಹನ ಪರಿಸರ ಮಾಲಿನ್ಯ ಉಂಟು ಮಾಡದು.ಪೆಡಲ್ ಮಾಡುವಾಗ,ಯಾಂತ್ರಿಕ ಶಕ್ತಿಯೂ ಜತೆಗೂಡುವುದರಿಂದ,ಕಡಿಮೆ ಪ್ರಯತ್ನ ಸಾಕಾಗುತ್ತದೆ.ಕೈನೆಟಿಕ್ ಮೋಟಾರ್ಸ್ ಮತ್ತು ಕೇಂದ್ರೀಯ ಯಾಂತ್ರಿಕ ಇಂಜಿನಿಯರಿಂಗ್ ಸಂಶೋಧನಾ ಸಂಸ್ಥೆಗಳು ಜತೆ ಸೇರಿ ಸೋಲೆಕ್ಷಾವನ್ನು ವಿನ್ಯಾಸಗೊಳಿಸಿವೆ.
---------------------------------
ಸ್ಮಾರ್ಟ್‌ಪೋನಿನಲ್ಲಿ ಪ್ರೊಜೆಕ್ಟರ್
ಗ್ಯಾಲಕ್ಸಿ ಬೀಮ್ ಎನ್ನುವುದು ಸ್ಯಾಮ್‌ಸಂಗ್ ಕಂಪೆನಿಯ ಹೊಸ ಸ್ಮಾರ್ಟ್‌ಫೋನ್.ಇದರ ವಿಶೇಷತೆಯೇನೆಂದರೆ,ಫೋನ್ ಜತೆಗೇ ಪ್ರಾಜೆಕ್ಟರ್ ಇದೆ.ಹಾಗಾಗಿ,ಮಾರ್ಕೆಟಿಂಗ್ ಕ್ಷೇತ್ರದವರಿಗೆ,ತಮ್ಮ ಗ್ರಾಹಕರಿಗೆ ಉತ್ಪನ್ನಗಳ ವಿವರಗಳನ್ನು ದೊಡ್ಡ ತೆರೆಯ ಮೇಲೆ ಪ್ರದರ್ಶಿಸಲು ಸಾಧ್ಯವಾಗುತ್ತದೆ.ಪ್ರಾಜೆಕ್ಟರಿನ ಪ್ರಖರತೆ ಎಷ್ಟೆಂದರೆ,ಅದನ್ನು ಐವತ್ತು ಇಂಚು ತೆರೆಯ ಮೇಲೂ ವೀಕ್ಷಿಸಬಹುದು.ಐದಿಂಚು ತೆರೆಯಿದ್ದರೂ ಸಾಕಾಗುತ್ತದೆ.ಉಳಿದಂತೆ ಸ್ಮಾರ್ಟ್‌ಫೋನ್‌ಗಳಲ್ಲಿರುವ ಎಲ್ಲಾ ಸೌಲಭ್ಯಗಳೂ ಇವೆ.
--------------------------------------------------
ಇನ್ಸಾಟ್-4Bಗೆ ನಿಶ್ಶಕ್ತಿ
ಇನ್ಸಾಟ್-4B ಸಂಪರ್ಕ ಉಪಗ್ರಹವು ವಿದ್ಯುತ್ ಪೂರೈಕೆಯ ಸಮಸ್ಯೆಯಿಂದ ಬಾಧಿತವಾಗಿದೆ.ಇದರ ಟ್ರಾನ್ಸ್‌ಪಾಂಡರ್ ಮೂಲಕ ಡೈರೆಕ್ಟ್ ಟು ಹೋಂ(ಡಿ ಟಿ ಎಚ್) ಸೇವೆ ನೀಡುತ್ತಿದ್ದ ಸನ್ ಡೈರೆಕ್ಟ್,ದೂರದರ್ಶನವೂ ಸೇರಿದಂತೆ,ಸುಮಾರು ಐವತ್ತು ಚಾನೆಲುಗಳು ಇದರಿಂದ ತೊಂದರೆಗೀಡಾಗಿವೆ.ಉಪಗ್ರಹದ ಸಾಮರ್ಥ್ಯದ ಅರ್ಧದಷ್ಟನ್ನು ಇದೀಗ ಬಳಸಲು ಸಾಧ್ಯವಾಗುತ್ತಿದೆ.ಸಮಸ್ಯೆ ಸರಿಪಡಿಸಲಾಗದಿದ್ದರೆ,ಇತರ ಉಪಗ್ರಹಗಳ ಟ್ರಾನ್ಸ್‌ಪಾಂಡರುಗಳಿಗೆ ಪ್ರಸಾರವನ್ನು ವರ್ಗಾಯಿಸುವುದು ಅನಿವಾರ್ಯ.
ಇನ್ನೊಂದೆಡೆ,ಇಸ್ರೋವು ಕಾರ್ಟೋಸ್ಯಾಟ್ ಉಪಗ್ರಹವನ್ನು ಬಾಹ್ಯಾಕಾಶಕ್ಕೇರಿಸಲು ಸಿದ್ಧತೆಗಳನ್ನು ಮಾಡುತ್ತಿದೆ.ಪಿಎಸ್‌ಎಲ್‌ವಿ ಸರಣಿಯ ರಾಕೆಟ್ ಮೂಲಕ ಉಪಗ್ರಹವನ್ನು ಉಡಾವಣೆಗೊಳಿಸಲಾಗುವುದು.ನಕ್ಷೆಗಳನ್ನು ತಯಾರಿಸಲು ಹೆಚ್ಚು ಸ್ಪಷ್ಟತೆಯ ಚಿತ್ರಗಳನ್ನು ಸೆರೆ ಹಿಡಿಯಲು ಉಪಗ್ರಹ ನೆರವಾಗುತ್ತದೆ.
------------------------------------------------
ಲೋಕಾಯುಕ್ತರ ಅಂತರ್ಜಾಲತಾಣ
http://lokayukta.kar.nic.in ಅಂತರ್ಜಾಲ ವಿಳಾಸದಲ್ಲಿ ಕರ್ನಾಟಕ ಲೋಕಾಯುಕ್ತರ ತಾಣವಿದೆ.ವಿವಿಧ ದೂರುಗಳನ್ನು ಸಲ್ಲಿಸಲು ಉಪಯೋಗಿಸಬೇಕಿರುವ ಅರ್ಜಿಯ ನಮೂನೆಗಳು,ಲೋಕಾಯುಕ್ತರೂ ಸೇರಿದಂತೆ ಅವರ ಸಿಬಂದಿಗಳ ಆದಾಯವಿವರಗಳು ಇಲ್ಲಿವೆ.ಸದ್ಯಕ್ಕಂತೂ ಆನ್‌ಲೈನ್ ದೂರು ದಾಖಲಿಸಲು ಸೌಕರ್ಯವಿಲ್ಲ.ತಾಣವನ್ನು ದಿನವಹಿ ನವೀಕರಿಸಲಾಗುತ್ತದೆ ಎಂದಿದ್ದರೂ,ವರ್ಷಗಟ್ಟಲೆ ಹಳೆಯ ಮಾಹಿತಿಯನ್ನು ಹೊಂದಿರುವ ಸರಕಾರಿ ತಾಣಗಳೇ ಹೆಚ್ಚು.ಆದರೆ ಉಪಲೋಕಾಯುಕ್ತರ ಆಸ್ತಿವಿವರಗಳ ಮೇಲೆ ಕ್ಲಿಕ್ಕಿಸಿದಾಗ,ಯಾವುದೇ ವಿವರಗಳೂ ಕಾಣದು-ಅವರ ಹುದ್ದೆ ಕಳೆದ ಆರು ತಿಂಗಳಿಂದ ಖಾಲಿಯಿದೆಯಲ್ಲಾ!
--------------------------------------------------------
ಎಚ್ ಟಿ ಸಿಯದ್ದೀಗಲೇ 4ಜಿ ಮೊಬೈಲ್
ನಮ್ಮಲ್ಲಿ ತ್ರೀಜಿ ಮೊಬೈಲ್ ಸ್ವಾಗತಿಸಲು ತೊಡಗಿದ್ದೇವೆ.ಬಿಎಸೆನೆಲ್ ತ್ರೀಜಿ ಸೇವೆಗಳನ್ನೀಗಳೇ ಆರಂಭಿಸಿದೆಯಾದರೂ,ಖಾಸಗಿ ಕಂಪೆನಿಗಳ ಸೇವೆ ಲಭ್ಯವಾಗಲು ಸೆಪ್ಟೆಂಬರ್ ವರೆಗೆ ಕಾಯಬೇಕಾದೀತು.ಈ ನಡುವೆ ತೈವಾನಿ ಕಂಪೆನಿ ಎಚ್ ಟಿ ಸಿ,ಇವೋ ಎನ್ನುವ ಸ್ಮಾರ್ಟ್‌ಪೋನನ್ನು ಬಿಡುಗಡೆ ಮಾಡುವುದರಲ್ಲಿದೆ.ಇದರಲ್ಲಿ ಧ್ವನಿಯಿಂದಲೇ ಫೋನ್ ಬಳಸುವ ಸವಲತ್ತು ಒದಗಿಸಲಾಗಿದೆ.ಸ್ಪರ್ಶಸಂವೇದಿ ತೆರೆಗಿಂತಲೂ ಇದು ಹೆಚ್ಚು ಅನುಕೂಲಕರವಾಗಬಹುದು.ಜಗತ್ತಿನ ಮೊಬೈಲ್ ತಯಾರಿಕಾ ಕಂಪೆನಿಗಳ ಪೈಕಿ ಎಚ್‌ಟಿಸಿಯದ್ದು ನಾಲ್ಕನೇ ಸ್ಥಾನ.ಕಳೆದ ವರ್ಷವೊಂದರಲ್ಲೇ ಅದು ದಾಖಲೆ ಪ್ರಮಾಣದ ಮೊಬೈಲ್‌ಗಳನ್ನು ಮಾರಾಟ ಮಾಡಿದೆ.ಇದಕ್ಕೆ ಕಾರಣ ಅದು ಗೂಗಲ್ ಆಂಡ್ರಾಯಿಡ್ ಮೊಬೈಲ್ ಕಾರ್ಯನಿರ್ವಹಣಾ ತಂತ್ರಾಂಶದ ಬೆನ್ನು ಹಿಡಿದಿರುವುದು.
---------------------------------------------------------
ಅಷ್ಟಪದಿಯ ಅಷ್ಟಮಂಗಳ ಪ್ರಶ್ನೆ
ಕಳೆದ ಒಂದು ತಿಂಗಳಿನಿಂದ ಭೂಮಿ ಸೂರ್ಯನಿಗೆ ಪ್ರದಕ್ಷಿಣೆ ಬರುವುದನ್ನು ನಿಲ್ಲಿಸಿ,ಪುಟ್‌ಬಾಲ್ ಸುತ್ತ ಪ್ರದಕ್ಷಿಣೆ ಬಂದಂತ್ತಿತ್ತು.ವಿಶ್ವಕಪ್ ಯಾರ ಮಡಿಲಿಗೆ ಎನ್ನುವಷ್ಟೇ ಅಷ್ಟಪದಿ ಪೌಲ್ ಭವಿಷ್ಯ ಸರಿಯಾಯಿತೇ ಎನ್ನುವುದನ್ನೂ ಕಾಯುವವರಿದ್ದಾರೆ.ಇದನ್ನು ಓದುವ ಹೊತ್ತಿಗೆ,ಎಲ್ಲವೂ ಸ್ಪಷ್ಟವಾಗಿರುತ್ತದೆ.ಒಂದು ಕಡೆ ಹೈಟೆಕ್ ಬಳಸುವ ಜನರು,ಇನ್ನೊಂದೆಡೆ ಅಷ್ಟಪದಿಯಂತಹ ಜೀವಿಯು ಆರಿಸಿದ ಆಹಾರದ ಪೆಟ್ಟಿಗೆಯ ಆಧಾರದಲ್ಲಿ ವಿಜಯಿಯ ಭವಿಷ್ಯ ನುಡಿಯುತ್ತದೆ ಎಂಬುದನ್ನು ನಂಬುತ್ತಾರೆ! ಕಂಪ್ಯೂಟರ್ ಮೂಲಕ ನಿಮ್ಮ ಜಾತಕ ಎಂದು ನಮ್ಮ ಜ್ಯೋತಿಷ್ಯಿಗಳು,ತಮ್ಮ ಹೈಟೆಕ್ ಪ್ರೀತಿ ಪ್ರದರ್ಶಿಸುತ್ತಿದ್ದರೆ,ಅಷ್ಟಪದಿಯನ್ನಾಧರಿಸಿದ ಭವಿಷ್ಯ ಜನರ ಗಮನ ಸೆಳೆದಿದೆ.ಇನ್ನು ಗಿಣಿರಾಮರು,ಗಿಳಿಗಳಿಗೆ ವಿದಾಯ ಹೇಳಿ,ಅಷ್ಟಪದಿಗಳನ್ನು ಸಾಕಿಕೊಳ್ಳಲು ಶುರುಮಾಡಬಹುದೇ?

ಅತ್ಯುಚ್ಚ ಗುಣಮಟ್ಟದ ವಿಡಿಯೊಗಳಿಗೆ ಯುಟ್ಯೂಬ್‌ನಲ್ಲಿ ಅವಕಾಶ
ಯುಟ್ಯೂಬ್ ವಿಡಿಯೋಗಳನ್ನು ಆನ್‌ಲೈನಿನಲ್ಲಿ ಒದಗಿಸುವ ಜನಪ್ರಿಯ ತಾಣ.ಅತ್ಯಂತ ಸ್ಪಷ್ಟವಾಗಿರುವ ವಿಡಿಯೋಗಳನ್ನೂ ಇಲ್ಲಿ ಅಪ್ಲೋಡ್ ಮಾಡುವ ಸವಲತ್ತನ್ನು ಕಲ್ಪಿಸಲಾಗಿದೆ.ಈ 4K ಸ್ಪಷ್ಟತೆ ಎಂದರೆ,ಆ ವಿಡಿಯೋಗಳನ್ನು ಇಪ್ಪತ್ತೈದಡಿ ತೆರೆಯ ಮೇಲೂ ಪ್ರದರ್ಶಿಸಬಹುದು.ಆದರೆ ಇಷ್ಟು ಸ್ಪಷ್ಟತೆಯ ವಿಡಿಯೋ ಹಿಡಿಯಲು ಬಳಸಬೇಕಾದ ಕ್ಯಾಮರಾಗಳು ಪ್ರಿಜ್ ಗಾತ್ರದ್ದಾಗಿರಬೇಕು.ಹಾಗೆಯೇ ಯುಟ್ಯೂಬಿನಿಂದ ಇಂತಹ ವಿಡಿಯೋಗಳನ್ನು ಡೌನ್‌ಲೋಡ್ ಮಾಡಿನೋಡಲು ಭಾರೀವೇಗದ ಬ್ರಾಡ್‌ಬ್ಯಾಂಡ್ ಸಂಪರ್ಕವೇ ಬೇಕು.
----------------------------------------------------------
ಅನವರತ-ಹನಿಹನಿ
ಅನಿಲ್ ರಮೇಶ್ ಅವರ ಮನದಲ್ಲಿ ಮೂಡಿದ ಯೋಚನೆಗಳ ಬ್ಲಾಗ್ ಅನವರತ.ಆಗಾಗ ಪ್ರವಾಸ ಹೋಗುವ ಹವ್ಯಾಸದಿಂದಾಗಿ,ಅವರ ಬ್ಲಾಗ್‌ನಲ್ಲಿ ಪ್ರವಾಸಾನುಭವಗಳನ್ನೂ,ಅಲ್ಲಿ ತೆಗೆದಿರುವ ಚಿತ್ರಗಳನ್ನೂ ಕಾಣಬಹುದು.ಕಟ್ಟಡ ನಿರ್ಮಾಣ ಉದ್ದಿಮೆಯಲ್ಲಿರುವ ಅನಿಲ್ ಅವರ ಬ್ಲಾಗ್ ನೋಡಲು http://anil-ramesh.blogspot.com ನೋಡಿ.
http://www.hanihani.co.cc/ ದಿಲೀಪ್ ಹೆಗ್ಡೆಯವರ ಮಾತು,ಕವಿತೆ ಮತ್ತು ಕಾರ್ಟೂನ್‌ಗಳ ಬ್ಲಾಗ್.ಆಲ್‌ರೌಂಡರ್ ತರ ಎಲ್ಲದರಲ್ಲೂ ಕೈಯಾಡಿಸಬಲ್ಲ ಇವರು,ತಮ್ಮ ಬೆಳವಣಿಗೆಗೆ ಜನರ ಪ್ರೋತ್ಸಾಹವನ್ನಪೇಕ್ಷಿಸುತ್ತಿದ್ದಾರೆ.
ಉದಯವಾಣಿ
Udayavani Bangalore

Monday, July 05, 2010
ಪ್ಲಾಸ್ಟಿಕ್ ದ್ವೀಪ
ಪ್ಲಾಸ್ಟಿಕ್ ದ್ವೀಪ
ತ್ಯಾಜ್ಯ ಪ್ಲಾಸ್ಟಿಕ್‌ನ್ನು ಸಂಸ್ಕರಿಸಿ,ಶಾಂತ ಮಹಾಸಾಗರದಲ್ಲೊಂದು ದ್ವೀಪವನ್ನು ನಿರ್ಮಿಸುವುದು ನೆದರ್ಲ್ಯಾಂಡಿನ ವಾಸ್ತುವಿನ್ಯಾಸ ಕಂಪೆನಿ WHIMನ ಯೋಚನೆ.ಈ ದ್ವೀಪದಲ್ಲಿ ಐದು ಲಕ್ಷ ಜನ ವಾಸಿಸಲು ಸವಲತ್ತು ಒದಗಿಸಲಾಗುವುದಂತೆ.ಈ ದ್ವೀಪವನ್ನು ಪ್ರವಾಸೀ ತಾಣವಾಗಿಸುವ ಜತೆ,ಜನವಸತಿಗೆ ಅರ್ಹವಾಗುವಂತೆ ನಿರ್ಮಿಸುವ ಯೋಜನೆ ಕಂಪೆನಿಗಿದೆ.ವಾಹನದ ರೀತಿ,ವಿವಿಧ ವ್ಯವಸ್ಥೆಗಳನ್ನು ಸಂಪೂರ್ಣವಾಗಿ,ಪ್ರತ್ಯೇಕ ಕಾಲುವೆಗಳ ರೀತಿ ದ್ವೀಪದಾದ್ಯಂತ ಒದಗಿಸಲು ಇಂಜಿನಿಯರುಗಳು ವಿನ್ಯಾಸಗೊಳಿಸುತ್ತಿದ್ದಾರೆ.ಇದನ್ನು ನಿರ್ಮಿಸಲು ಬಳಸುವ ಸಂಸ್ಕರಿತ ಪ್ಲಾಸ್ಟಿಕ್‌ನಿಂದ ಸಮುದ್ರ ಜೀವಿಗಳಿಗೆ ತೊಂದರೆಯಾಗದಂತೆ ದ್ವೀಪವನ್ನು ನಿರ್ಮಿಸುವ ಸವಾಲಿನ ಜತೆಗೆ,ಬಿಸಿಲು ಮತ್ತು ಉಪ್ಪು ನೀರನ್ನು ತಡೆದುಕೊಳ್ಳಬಲ್ಲ ರೀತಿ ನಿರ್ಮಿಸುವ ಸವಾಲನ್ನು ಎದುರಿಸಬೇಕಿದೆ.ವರ್ಷಾಂತ್ಯದ ವೇಳೆಗೆ ಯೋಜನೆಗಳ ರೂಪುರೇಷೆಗಳನ್ನು ಸಿದ್ಧಗೊಳಿಸಿ,ನಿಧಾನವಾಗಿ ದ್ವೀಪವನ್ನು ನಿರ್ಮಿಸುವುದು ಕಂಪೆನಿಯ ನಿರ್ಧಾರವಾಗಿದೆ.ಅಂದಹಾಗೆ ಇದು ಮೊದಲ ಪ್ಲಾಸ್ಟಿಕ್ ದ್ವೀಪವಾಗುವುದರ ಜತೆಗೆ,ಮೊದಲ ತೇಲುವ ದ್ವೀಪವೂ ಆಗಲಿದೆ.
-------------------------------------------------------
ಬ್ಯಾಟರಿ ಬದಲಿಸುವಾಗ ಧ್ರುವದ ಬಗ್ಗೆ ಗಮನ ಬೇಕಿಲ್ಲ
ಸಾಧನಗಳ ಬ್ಯಾಟರಿಯನ್ನು ಬದಲಿಸುವಾಗ,ಧನ ಮತ್ತು ಋಣ ಧ್ರುವಗಳ ಬಗ್ಗೆ ಗಮನ ಹರಿಸಬೇಕಿಲ್ಲದ ಅನುಕೂಲತೆ ಬಳಕೆದಾರರಿಗೆ ಸಿಗಲಿದೆ.ಮೈಕ್ರೋಸಾಫ್ಟ್ ಈ ಸವಲತ್ತು ನೀಡುವ ವಿಧಾನವನ್ನು ಅಭಿವೃದ್ಧಿ ಪಡಿಸಿದೆ.ಇದರಲ್ಲಿ ಬ್ಯಾಟರಿ ಸಿಕ್ಕಿಸುವ ಕೋಶದ ಎರಡೂ ಬದಿಯಲ್ಲಿ ಧನಧ್ರುವ ಮತ್ತು ಋಣ ಧ್ರುವಗಳನ್ನು ಆಧಾರ ನೀಡುವ ವ್ಯವಸ್ಥೆಯಿದೆ.ಒಳಗಿನ ತಂತಿ ಸಂಪರ್ಕ ಹೇಗಿದೆಯೆಂದರೆ,ಬ್ಯಾಟರಿಯ ಬಾಹ್ಯ ಸಂಪರ್ಕ ಯಾವ ಬದಿಯಲ್ಲಿದ್ದರೂ,ಅವುಗಳ ಒಳಗಿನ ಸಂಪರ್ಕ ಸರಣಿಕ್ರಮದಲ್ಲಿ ಬರುವಂತೆ ಏರ್ಪಡುತ್ತದೆ.ಈ ಉಪಾಯವನ್ನು ಡ್ಯುರಾಸೆಲ್ ಬ್ಯಾಟರಿ ಬಳಕೆದಾರರು,ಕ್ಲಿಯರ್‌ಸೌಂಡ್ ಹಿಯರಿಂಗ್ ಏಡ್ ತಯಾರಿಕಾ ಕಂಪೆನಿ,ನೋವಾಟ್ಯಾಕ್ ಎಲ್ ಇ ಡಿ ಫ್ಲಾಶ್‌ಲೈಟ್ ತಯಾರಿಕಾ ಕಂಪೆನಿಗಳ ಜತೆ ಹಂಚಿಕೊಳ್ಳಲು ಮೈಕ್ರೋಸಾಫ್ಟ್ ಒಪ್ಪಂದ ಮಾಡಿಕೊಂಡಿದೆ.
-------------------------------------
ಚಿತ್ರ-ವಿಚಿತ್ರ
ಈಗ ಎಲ್ಲರ ಕೈಯಲ್ಲೂ ಕ್ಯಾಮರಾ ಇರುತ್ತದೆ.ಚಿತ್ರಗಳನ್ನು ತೋರಿಸಿದರೆ,ನೋಡುವ ಉತ್ಸಾಹ ಹೆಚ್ಚು ಜನರಲ್ಲಿ ಉಳಿದಿಲ್ಲ.ಈಗ ಚಿತ್ರಗಳನ್ನು ನೋಡಬೇಕೆಂದರೆ,ಅದರಲ್ಲಿ ಏನಾದರೂ ವಿಶೇಷತೆ ಇರಬೇಕಾಗುತ್ತದೆ.ಅಂತಹ ಚಿತ್ರಗಳ ಸಂಗ್ರಹವನ್ನು http://www.flickr.com/photos/hpnadigದ ವಿಳಾಸದಲ್ಲಿ ಕಾಣಬಹುದು."ಸಂಪದ" ಅಂತರ್ಜಾಲ ತಾಣದ ನಿರ್ವಾಹಕರಾದ ಹರಿಪ್ರಸಾದ್ ನಾಡಿಗ್,ಚಿತ್ರ ತೆಗೆಯುವಾಗ ಸಣ್ಣ ಸಣ್ಣ ವಿವರಗಳತ್ತ ಗಮನಹರಿಸುವುದು ಎದ್ದು ಕಾಣಿಸುತ್ತದೆ.ವಸ್ತುಗಳು ಮೂಡಿಸುವ ವಿನ್ಯಾಸ,ಹಳೆಯವಸ್ತುಗಳ ಚಿತ್ರಗಳು,ನಾಡಿನ ಸಂಸ್ಕೃತಿ-ಜನಜೀವನ ಪ್ರತಿಬಿಂಬಿಸುವ ಚಿತ್ರಗಳು ಅವರ ವಿಶೇಷತೆ.ನವವಿವಾಹಿತ ನಾಡಿಗ್ ಅವರ ಬ್ಲಾಗ್ "ಪರಿವೇಷಣ" http://hpnadig.netನಲ್ಲಿದೆ.
---------------------------------------------------
ಬ್ರಾಡ್‌ಬ್ಯಾಂಡ್ ನಿಮ್ಮ ಜನ್ಮಸಿದ್ಧ ಹಕ್ಕು:ಫಿನ್ಲೆಂಡ್
ಫಿನ್ಲೆಂಡ್ ಸರಕಾರವು ಬ್ರಾಡ್‌ಬ್ಯಾಂಡ್ ಸಂಪರ್ಕವನ್ನು ಹೊಂದುವುದು ತನ್ನ ನಾಗರಿಕರ ಮೂಲಭೂತ ಹಕ್ಕು ಎಂದು ಸಾರಿದೆ.ಹೀಗೆ ಘೋಷಿಸಿದ ಜಗತ್ತಿನ ಮೊದಲ ರಾಷ್ಟ್ರ ಫಿನ್ಲೆಂಡ್.ಸದ್ಯಕ್ಕೆ ಒಂದು ಎಂಬಿಪಿಎಸ್ ಸಂಪರ್ಕ ಪ್ರತಿ ಮನೆಯನ್ನೂ ತಲುಪಬೇಕೆಂದು ಸರಕಾರ ನಿಗದಿಪಡಿಸಿದೆ.ಮುಂದಿನ ಐದುವರ್ಷಗಳಲ್ಲಿದನ್ನು ನೂರು ಎಂಬಿಪಿಎಸ್‌ಗೇ ಏರಿಸಲು ಸರಕಾರ ಸಂಕಲ್ಪಿಸಿದೆ.ಶೇಕಡಾ ತೊಂಭತ್ತಾರು ಮನೆಗಳೀಗಾಗಲೇ ಬ್ರಾಡ್‌ಬ್ಯಾಂಡ್ ಸಂಪರ್ಕ ಸಾಧಿಸಲಾಗಿದ್ದು,ಸುಮಾರು ನಾಲ್ಕು ಸಾವಿರ ಮನೆಗಳಿಗೆ ಸಂಪರ್ಕ ಬಾಕಿಯಿದೆ.ಇಂಗ್ಲೆಂಡಿನಲ್ಲು ಶೇಕಡಾ ಎಪ್ಪತ್ತೈದು ಮನೆಗಳಿಗೆ ಬ್ರಾಡ್‌ಬ್ಯಾಂಡ್ ಸಂಪರ್ಕ ಇದೆ.ಅಂತರ್ಜಾಲ ಸಂಪರ್ಕವನ್ನು ನಿಯಮಬಾಹಿರ ಉದ್ದೇಶಕ್ಕೆ ಬಳಸುವವರಿಗೆ,ನೋಟಿಸ್ ನೀಡಲು ಫಿನ್ನಿಶ್ ಸರಕಾರ ಉದ್ದೇಶಿಸಿದೆ.ಮುಂದಿನ ಚುನಾವಣೆ ಬಂದಾಗ,ನಮ್ಮಲ್ಲೂ ಪಕ್ಷಗಳು ಇಂತಹ ಆಶ್ವಾಸನೆಗಳನ್ನೂ ನೀಡುವುದಂತೂ ಗ್ಯಾರಂಟಿ.ಏನಂತೀರಿ?
-------------------------------------------------------------
ಏಕ-ಮೊಬೈಲ್ ಸಂಖ್ಯೆ ವೃತವಿನ್ನೂ ದೂರ
ಮೊಬೈಲ್ ಸೇವೆಯನ್ನು ಪಡೆಯಲು ನೀವು ಸದ್ಯದ ಕಂಪೆನಿಯಿಂದ, ಬೇರೆ ಕಂಪೆನಿಗೆ ಶರಣು ಹೋದರೆ,ನಿಮ್ಮ ಮೊಬೈಲ್ ಸಂಖ್ಯೆ ಬದಲಾಗುತ್ತದೆ.ಇದನ್ನು ತಪ್ಪಿಸಲು ಸಾಧ್ಯವೆನ್ನುವುದನ್ನು ಬಹಳ ಸಮಯದಿಂದ ಕೇಳುತ್ತಿದ್ದೇವೆ.ಅಂತಹ ಮೊಬೈಲ್ ಪೋರ್ಟೇಬಿಲಿಟಿಯನ್ನು ಸಾಧ್ಯವಾಗಿಸಲು,ಕಂಪೆನಿಗಳು ತಮ್ಮ ಯಂತ್ರಾಂಶ ಮತ್ತು ತಂತ್ರಾಂಶದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು.ಇದಕ್ಕೆ ತಯಾರಾಗಲು ಕಂಪೆನಿಗಳಿಗೆ ಈ ಜೂನ್ ತಿಂಗಳ ವರೆಗೆ ಸಮಯದ ಗಡುವು ನೀಡಲಾಗಿತ್ತು. ಈ ನಿಟ್ಟಿನಲ್ಲಿ ಖಾಸಗಿ ಕಂಪೆನಿಗಳು ದೂರಸಂಪರ್ಕ ನಿಯಂತ್ರಣ ಮಂಡಳಿ(TRAI)ಯ ಆದೇಶವನ್ನು ಪಾಲಿಸಲು ತುಸು ಪ್ರಯತ್ನವನ್ನಾದರೂ ಹಾಕಿವೆ.ಆದರೆ ಭಾರತ್ ಸಂಚಾರ್ ನಿಗಮ್ ಮತ್ತು ಮಹಾನಗರ ಟೆಲಿಕಾಮ್ ನಿಗಮಗಳು ಯಾವ ತಯಾರಿಯನ್ನೂ ಮಾಡಿಕೊಂಡಿಲ್ಲ.ಸಂಖ್ಯೆ ಬದಲಾಗಿ,ತಮ್ಮ ಸಂಪರ್ಕದಲ್ಲಿರುವವರಿಗೆಲ್ಲಾ ಅದನ್ನು ತಿಳಿಯಪಡಿಸುವ ತೊಂದರೆ ತಪ್ಪಿಸಲೋಸುಗ ಚಂದಾದಾರರು,ಸೇವಾದತೃವಿನ ಸೇವೆಯ ಬಗ್ಗೆ ಅಸಮಾಧಾನವಿದ್ದರೂ ಮುಂದುವರಿಯುವುದಿದೆ.ಸಂಖ್ಯೆ ಬದಲಿಸದೆ ಕಂಪೆನಿ ಬದಲಿಸಲು ಸಾಧ್ಯವಾದರೆ,ಚಂದಾದಾರರೆಲ್ಲಿ ಗುಳೆ ಹೋಗುತ್ತಾರೋ ಎಂಬ ಭಯದಿಂದ ಕಂಪೆನಿಗಳು ಈ ಸವಲತ್ತನ್ನು ನೀಡಲು ಉತ್ಸಾಹ ಹೊಂದಿಲ್ಲದಿರುವುದು ಸ್ಪಷ್ಟ.ಹೊಸ ಗಡುವನ್ನು ಅಕ್ಟೋಬರ್‌ವರೆಗೆ ನೀಡಲಾಗಿದೆ.ಅಷ್ಟರಲ್ಲಿ ಎಲ್ಲಾ ಕಂಪೆನಿಗಳೂ ಗೇಟ್‌ವೇಗಳನ್ನು ಖರೀದಿಸಿ,ಅವುಗಳ ಕಾರ್ಯನಿರ್ವಹಣೆಯನ್ನು ಪರೀಕ್ಷಿಸಿರಬೇಕು.ಹಂತ-ಹಂತವಾಗಿ ವ್ಯವಸ್ಥೆಯನ್ನು ಜಾರಿಗೆ ತರುವ ಬದಲು,ಇಡೀ ದೇಶದಲ್ಲಿ ಒಂದೇ ಸಲ,ಮೊಬೈಲ್ ಸಂಖ್ಯೆ ಉಳಿಸಿಕೊಳ್ಳುವ ವ್ಯವಸ್ಥೆ ಜಾರಿಗೆ ಬರಲಿದೆ.
-----------------------------------------------
ಓದುಗರ ಪ್ರತಿಕ್ರಿಯೆಗಳು
ಸ್ವಾಯತ್ತ ಕಾಲೇಜುಗಳ ಬಗೆಗಿನ ಬರಹದ ಬಗ್ಗೆ ಕುಂದಾಪುರದ ಸಂಪತ್‌ಕುಮಾರ್ ಪ್ರತಿಕ್ರಿಯಿಸಿ,ಈ ವ್ಯವಸ್ಥೆಯಲ್ಲಿ ಮರುಪರೀಕ್ಷೆ ತೆಗೆದುಕೊಳ್ಳುವವರಿಗೆ ಮತ್ತು ಅವರಿಗೆ ಪಾಠ ಮಾಡಬೇಕಿರುವ ಶಿಕ್ಷಕರಿಗೆ ರಜಾ ತಪ್ಪುವುದರ ಬಗ್ಗೆ ಹೇಳಿದ್ದಾರೆ.ತಮ್ಮ ಟ್ವಿಟರ್ ಕುಟುಂಬದ ಬಗೆಗಿನ "ನಿಸ್ತಂತು ಸಂಸಾರ"ದ ಬರಹ ತಮ್ಮ ಪರಿಚಯದವರಲ್ಲಿ ಕಲರವ ಎಬ್ಬಿಸಿತು ಎಂದು ಪವನಜ.ಯು.ಬಿ. ಮಿಂಚಂಚೆಯಲ್ಲಿ ಉಲ್ಲೇಖಿಸಿದ್ದಾರೆ.ಯುವಜನರು ಬ್ರಾಹ್ಮೀ ಮುಹೂರ್ತದಲ್ಲಿ ಏಳುವ ರಹಸ್ಯದ ಬಗೆಗಿನ ಬರಹ ಮಂಗಳೂರಿನ ಪ್ರತಿಭಾ ಭಟ್ ಅವರಿಗೆ "ಇಂಟರೆಸ್ಟಿಂಗ್" ಅನಿಸಿದೆ.ಆತ್ರಾಡಿ ಸುರೇಶ್ ಹೆಗ್ಡೆಯವರ "ಆಸುಮನ"ವನ್ನು ಬ್ಲಾಗನ್ನಿಲ್ಲಿ ಓದುಗರಿಗೆ ಪರಿಚಯಿಸಿದ್ದಕ್ಕೆ ಬ್ಲಾಗ್ ಬರಹದಲ್ಲಿ ಥ್ಯಾಂಕ್ಸ್ ಹೇಳಿದ್ದಾರೆ.
----------------------------------------------------------------------------
ಟ್ವಿಟರ್ ಚಿಲಿಪಿಲಿ
ಟ್ವಿಟರಿನಲ್ಲಿ ಸುಳಿದಾಡಿದ ಚಾಟೂಕ್ತಿಗಳು ಹೀಗಿದ್ದುವು:
*ಸೋಮವಾರ ಬಂದ್ ಇದೆಯೇ?ಕಚೇರಿಗೆ ಬೇಗನೆ ಬಂದು ತಡವಾಗಿ ವಾಪಸ್ಸಾಗಿ.
*ಅಂತರ್ಜಾಲ ಜಾಲಾಡುತ್ತಾ ಮಗು ತಾಯಿಗೆ ಕೇಳಿದ್ದು:"ಅಮ್ಮ,ನನಗೆ ಹೆಸರಿಟ್ಟಿದ್ದಿಯಾ...ಆದರೆ ಪಾಸ್‌ವರ್ಡ್ ಯಾಕೆ ಕೊಟ್ಟಿಲ್ಲಾ?"
*ಆತ ಫುಟ್‌ಬಾಲನ್ನೇ ತಿನ್ನುತ್ತಾನೆ,ಕುಡಿಯುತ್ತಾನೆ,ಮಲಗುತ್ತಾನೆ ಎಲ್ಲಾ ಸರಿ,ಆದರೇನು ಫುಟ್‌ಬಾಲ್ ಆಡಲು ಆತನಿಗೆ ಬರೋಲ್ಲ!
*ಟೆಲಿವಿಶನ್ ಒಂದೇ ಶಬ್ದವಾದರೆ,ಅದನ್ನು ಟಿವಿ ಅನ್ನೋದು ಯಾಕೆ? ಬರೇ ಟಿ ಅನ್ನಬೇಕಲ್ವಾ..?
-------------------------------------------------------------------------------------
ಕಾಮಾಲೆ ರೋಗದ ಐಫೋನ್ ಕ್ಯಾಮರಾ!
ಇತ್ತೀಚೆಗೆ ಬಿಡುಗಡೆಯಾದ ಐಫೋನ್4ವಿನ ಆಂಟೆನಾ ಸಮಸ್ಯೆ ಬಗ್ಗೆ ಕಳೆದವಾರ ಓದಿದ್ದೀರಿ.ಈ ವಾರ ಅದರ ಕ್ಯಾಮರಾ ಸೆರೆ ಹಿಡಿದ ಚಿತ್ರದ ಬಗೆಗೆ ವರದಿಯಾಗಿದೆ.ಐದು ಮೆಗಾಪಿಕ್ಸೆಲ್‌ನಷ್ಟು ಉತ್ತಮ ಮಟ್ಟದ ಕ್ಯಾಮರಾವನ್ನು ಹೊಂದಿರುವ ಐಫೋನ್4 ತೆಗೆಯುವ ಚಿತ್ರಗಳು,ತುಸು ಹಳದಿ ಬಣ್ಣದ್ದಾಗಿರುತ್ತವೆ.ಕ್ಯಾಮರಾ ಸೆಟಿಂಗ್ ತಪ್ಪಾಗಿರುವುದು ಈ ತೊಂದರೆಗೆ ಕಾರಣವಾಗಿರಬಹುದು.ತಂತ್ರಾಂಶದ ಹುಳುಕಿನಿಂದ ಈ ರೀತಿ ಆಗಿರುವ ಸಾಧ್ಯತೆಯಿದೆ ಎಂದು,ಐಫೋನ್ ಬಳಸಿದ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತ್ಯಾಜ್ಯ,
ದ್ವೀಪ,
ಪ್ಲಾಸ್ಟಿಕ್
Subscribe to:
Posts (Atom)