ಬ್ರಾಡ್‌ಬ್ಯಾಂಡ್:ರೂ.20000 ಕೋಟಿ
ದೇಶದ ಪ್ರತಿ ಪಂಚಾಯತ್ ಪ್ರದೇಶದಲ್ಲಿ ಬ್ರಾಡ್‌ಬ್ಯಾಂಡ್ ಸಂಪರ್ಕವನ್ನು ಲಭ್ಯವಾಗಿಸುವ ಯೋಜನೆಗೆ ಟೆಲಿಕಾಂ ಇಲಾಖೆಯ ಅನುಮತಿ ದೊರೆತಿದೆ.ಇದಕ್ಕೆ ಇಪ್ಪತ್ತು ಸಾವಿರ ಕೋಟಿ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.ಒಪ್ಟಿಕ್ ಫೈಬರ್ ಕೇಬಲ್‌ಗಳನ್ನು ದೇಶದ ಮೂಲೆ ಮೂಲೆಗೂ ಹಾಕುವುದರ ಮುಖಾಂತರ ಇದನ್ನು ಸಾಧ್ಯವಾಗಿಸುವ ಯೋಜನೆಯಿದೆ.ಯೋಜನೆಯ ಅನುಷ್ಠಾನದ ಉಸ್ತುವಾರಿಯನ್ನು ನೋಡಿಕೊಳ್ಳಲು ಒಂದು ವಿಶೇಷ ಸಮಿತಿಯ ರಚನೆಯಾಗಲಿದೆ.ಬಿ ಎಸ್ ಎನ್ ಎಲ್ ಆರಂಭಿಕ ಅನುಷ್ಠಾನ ಮತ್ತು ಸಮಿತಿ ರಚನೆಯ ಜವಾಬ್ದಾರಿಯನ್ನು ಹೊರುತ್ತದೆ.ಹಳ್ಳಿಯ ಜನರು ಮಾಹಿತಿಯನ್ನು ವಿನಿಮಯ ಮಾಡುವುದಕ್ಕೆ,ಹೊರ ಜಗತ್ತಿನ ಜತೆ ಎಗ್ಗಿಲ್ಲದೆ ವ್ಯವಹರಿಸುವುದಕ್ಕೆ ಈ ಜಾಲ ಅನುವು ಮಾಡಿ,ಹಳ್ಳಿಗಳಿಂದ ವಲಸೆ ಸಮಸ್ಯೆಯನ್ನು ಕಡಿಮೆ ಮಾಡಲು ನೆರವಾಗಬಹುದು.ಯೋಜನೆಯ ಖರ್ಚು ಇಪ್ಪತ್ತು ಸಾವಿರ ಕೋಟಿ ರೂಪಾಯಿಗಳು.
---------------------------------------------------------------------------
ಗೂಗಲ್ ಪ್ಲಸ್:ಎರಡು ಕೋಟಿ
ಮೂರೇ ವಾರಗಳಲ್ಲಿ ಇಪ್ಪತ್ತು ದಶಲಕ್ಷ ಜನರನ್ನು ತನ್ನ ಜಾಲಕ್ಕೆ ಸೇರುವಂತೆ ಮಾಡಲು ಗೂಗಲ್ ಪ್ಲಸ್ ಸಮರ್ಥವಾಗಿದೆ.ಇದು ಸಾಮಾಜಿಕ ಜಾಲತಾಣಗಳ ಮಟ್ಟಿಗೆ ಹೊಸ ದಾಖಲೆ ಎನ್ನಲಡ್ದಿಯಿಲ್ಲ.ಆದರೆ ಫೇಸ್‍ಬುಕ್‌ನಲ್ಲಿ ಸದ್ಯ ಇರುವ ಸದಸ್ಯರ ಸಂಖ್ಯೆ ಎಪ್ಪತ್ತೈದು ಕೋಟಿ ಎನುವುದನ್ನು ನೆನಪಿಸಿದರೆ,ಗೂಗಲ್ ಪ್ಲಸ್ ಬಹುದೂರದಲ್ಲಿದೆ ಎನ್ನುವುದು ಗಮನಕ್ಕೆ ಬರುತ್ತದೆ.ಅಲ್ಲದೆ ಫೇಸ್‌ಬುಕ್‌ಗೆ ಪ್ರತಿದಿನ ಅರ್ಧಾಂಶ ಸಂಖ್ಯೆಯ ಅಂದರೆ ಮೂವತ್ತು ಕೋಟಿ ಜನರಾದರೂ ಲಾಗಿನ್ ಆಗುತ್ತಾರೆ.
-----------------------------------------------------------------------------
ತೊಂದರೆಯಲ್ಲಿದ್ದಾಗ ಟ್ವೀಟಿಸಿ
ತೊಂದರೆಯಲ್ಲಿದ್ದವರು ಸಂದೇಶ ರವಾನಿಸುವ ಮೂಲಕ ನೆರವು ಪಡೆಯುವ ಘಟನೆಗಳು ಇತ್ತಿಚೆಗೆ ಸಾಮಾನ್ಯವಾಗಿವೆ.ಮೊಬೈಲ್ ಜಾಲಗಳ ಮೂಲಕ ಸಾಮಾಜಿಕ ಜಾಲತಾಣಗಳಾದ ಟ್ವಿಟರ್,ಫೇಸ್‍ಬುಕ್ ಮತ್ತು ಇತ್ತೀಚಿನ ಗೂಗಲ್ ಪ್ಲಸ್ ತಾಣಗಳನ್ನು ಹೆಚ್ಚೆಚ್ಚು ಜನರು ಬಳಸುತ್ತಿರುವುದು ಇದಕ್ಕೆ ಕಾರಣ.ಸಂಕಷ್ಟದಲ್ಲಿರುವವರ ಬಗ್ಗೆ ಮಾಹಿತಿ ಸಿಕ್ಕಿದರೆ,ಅಗ್ನಿಶಾಮಕ ದಳಗಳೋ ಅಥವಾ ಯಾವುದೇ ಸ್ವಯಂಸೇವಕ ಸಂಸ್ಥೆಗಳೋ ಸಂಕಷ್ಟದಲ್ಲಿರುವವರ ನೆರವಿಗೆ ಧಾವಿಸಬಹುದು.ತುರ್ತು ಪರಿಹಾರ ಸಿಕ್ಕಿದರೆ,ಎಷ್ಟೋ ಜೀವಗಳನ್ನು ಉಳಿಸಬಹುದು.ಆದರೆ ಸಂದೇಶಗಳು ಬಹಳ ಸಲ ಯಾವುದೇ ನಿಖರ ಮಾಹಿತಿ ನೀಡದೆ,ನಿರೀಕ್ಷಿತ ನೆರವು ಸಿಗದೇ ಹೋಗುವ ಅಪಾಯವೂ ಇದೆ.ಹಾಗಾಗಿ ಸಂದೇಶಗಳನ್ನು ಕಿರಿದಾಗಿಯೂ,ಉಪಯುಕ್ತವಾಗುವಂತೆಯೂ ಬರೆಯುವ ಕಲೆಯನ್ನು ರೂಡಿಸಿಕೊಳ್ಳುವುದು ಒಳ್ಳೆಯದು.ಆಗಿರುವ ತೊಂದರೆಯೇನು,ಯಾವ ಜಾಗದಲ್ಲಿ ಎಂದು ಸಂದೇಶಗಳಲ್ಲಿ ಸ್ಪಷ್ಟವಾಗಿ ನಮೂದಿಸಬೇಕು.ಹಾಗೆಯೆ ಸಂದೇಶಗಳನ್ನು ಶೋಧಿಸುವುದುಸುಲಭವಾಗುವಂತೆ,ಅವುಗಳಲ್ಲಿ ಪ್ರಮುಖ ಶಬ್ದಗಳನ್ನು ಬಳಸಬಹುದು.ಸಂದೇಶಗಳು ಸಂಬಂಧಿತ ಏಜನ್ಸಿಗಳಿಗೆ ಕಳುಹಿಸಲು ಸಾಧ್ಯವಾದರೆ ಇನ್ನೂ ಒಳಿತು.ಸ್ಮಾರ್ಟ್‌ಪೋನುಗಳ ಜಿಪಿಎಸ್-ಸ್ಥಾನ ಪತ್ತೆ ತಂತ್ರಜ್ಞಾನ ಬಹಳ ಪ್ರಯೋಜನಕಾರಿ.ಬಿರುಗಾಳಿ ಬೀಸಿದ ನಗರದಲ್ಲಿ,ರಸ್ತೆ ಸೂಚಕ ಫಲಕಗಳು,ಇನ್ನಿತರ ಫಲಕಗಳೂ ನಾಶವಾಗಿ,ಯಾವ ಸ್ಥಳದಲ್ಲಿ ತಾನಿದ್ದೇನೆ ಎನ್ನುವುದು ವ್ಯಕ್ತಿಗೆ ಗೊತ್ತಾಗದೇ ಹೋದರೂ,ಜಿಪಿಎಸ್ ಮೂಲಕ ಇದನ್ನು ತಿಳಿದುಕೊಳ್ಳಲು ಸಾಧ್ಯ.ನೆರವೀಯುವವರೂ ತಮ್ಮ ಸಾಧನೆಯ ಬಗ್ಗೆ ಸಂದೇಶ ರವಾನಿಸಿ,ಜನರ ಮನಸ್ಸಿನಲ್ಲಿ ಮೂಡಿರಬಹುದಾದ ಆತಂಕವನ್ನು ಕಡಿಮೆ ಮಾಡಬಹುದು.
--------------------------------------------------------
ಮ್ಯಾಕ್‌ಬುಕ್ ಏರ್:ಸೂಪರ್ ನೋಟ್ಬುಕ್ಆಪಲ್ ಕಂಪೆನಿಯು ತನ್ನ ಮ್ಯಾಕ್‍ಬುಕ್ ಏರ್ ಎನ್ನುವ ನೋಟ್‌ಬುಕ್ ಅನ್ನು ಸುಧಾರಿಸಿ ಬಿಡುಗಡೆ ಮಾಡಿದೆ.ಇದೀಗ ಅದು ಹೊಸ ಓಎಸ್ ಎಕ್ಸ್ 10.7ಲಯನ್ ಜತೆ ಬಂದಿದೆ.ಹದಿಮೂರು ಇಂಚು ಮತ್ತು ಹನ್ನೊಂದು ಇಂಚು ಹೀಗೆ ಎರಡು ಗಾತ್ರಗಳಲ್ಲಿದು ಲಭ್ಯ.ದೊಡ್ಡದರಲ್ಲಿ ನಾಲ್ಕು ಜೀಬಿ ಸ್ಮರಣಶಕ್ತಿ ಇದ್ದರೆ,ಕಿರುಗಾತ್ರದಲ್ಲಿ ಎರಡು ಜೀಬಿ ಸ್ಮರಣಕೋಶ ಇದೆ.ಅಲ್ಲದೆ ಕೋರ್ ಐ5 ಸಂಸ್ಕಾರಕ ಇದರಲ್ಲಿದೆ.ಮ್ಯಾಕ್‌ಬುಕ್-ಪ್ರೋ ಎನ್ನುವ ಇನ್ನೊಂದು ನೋಟ್‌ಬುಕ್‌ಗೆ ಇದು ಸ್ಪರ್ಧೆಯೊಡ್ದುವುದು ಸಂಭವನೀಯ.ಥಂಡರ್‌ಬೋಲ್ಟ್ ಎನ್ನುವ ಹೊಸ ನಮೂನೆಯ ಪೋರ್ಟ್ ಇದರ ಇನ್ನೊಂದು ವಿಶೇಷತೆ.ಯು ಎಸ್ ಬಿ ಎನ್ನುವ ಪೋರ್ಟ್‌ಗಳಿಗಿಂತ ಇವು ಹೆಚ್ಚು ವೇಗವಾಗಿ ದತ್ತಾಂಶ ವಿನಿಮಯ ಮಾಡಿಕೊಳ್ಳಬಲ್ಲುವು.ಇವುಗಳಿಗಿನ್ನೂ ಸಾಧನಗಳನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ.ಆದರೆ ಇನ್ನು ಮುಂದೆ ಸಾಧನಗಳ ತಯಾರಕರು ಅಂತಹ ಡ್ರೈವರ್ ತಂತ್ರಾಂಶಗಳ ಸಹಿತ ಸಾಧನಗಳನ್ನು ಬಿಡುಗಡೆ ಮಾಡದಿರರು.ಅಂದ ಹಾಗೆ ಆಪಲ್ ತನ್ನ ತ್ರೈಮಾಸಿಕ ಫಲಿತಾಂಶದಲ್ಲಿ ಭಾರೀ ಮುನ್ನಡೆ ಸಾಧಿಸಿದೆ.
-------------------------------------------------------------------------------------------
ಸ್ಮಾರ್ಟ್‌ಪೋನ್:ಯಾರು ಟಾಪ್?ಸ್ಮಾರ್ಟ್‌ಫೋನ್ ಮಾರುಕಟೆಯಲ್ಲಿ,ಇದುವರೆಗೆ ನೋಕಿಯಾ ಕಂಪೆನಿ ಮುನ್ನಡೆಯಲ್ಲಿತ್ತು.ಈಗ ಅದನ್ನು ಆಪಲ್ ಕಂಪೆನಿಯು ದ್ವಿತೀಯ ಸ್ಥಾನಕ್ಕೆ ತಳ್ಳಿದೆ.ಜತೆಗೇ ಆಪಲ್ ಎಚ್ ಟಿ ಸಿ ಮತ್ತು ಸಾಮ್ಸಂಗ್ ಕಂಪೆನಿಗಳ ಮೇಲೆ ಹಕ್ಕುಸ್ವಾಮ್ಯ ಕೇಸುಗಳನ್ನೂ ಹಾಕಿ,ಬಗ್ಗು ಬಡಿಯಲು ಪ್ರಯತ್ನಿಸುತ್ತಿದೆ.ಎಚ್ ಟಿ ಸಿ ಕಂಪೆನಿಯು ಗೂಗಲ್ ಆಂಡ್ರಾಯಿದ್ ಫೋನ್‌ಗಳನ್ನು ತಯಾರಿಸಿದ ನಂತರ ಅದ್ಭುತ ಪ್ರಗತಿ ಕಾಣುತ್ತಿರುವುದು ಎಲ್ಲರ ಕಣ್ಣು ಕುಕ್ಕಿದೆ.ಇತ್ತೀಚಿನ ವರೆಗೂ,ಎಚ್ ಟಿ ಸಿಯು ಇತರ ಸೇವಾದಾತೃಗಳ ಜತೆ ಒಪ್ಪಂದ ಮಾಡಿಕೊಂಡು ಅವುಗಳಿಗೆ ಹ್ಯಾಂಡ್‌ಸೆಟ್ ಪೂರೈಸುತ್ತಿತ್ತು.ಈಗದು ಸ್ವತಂತ್ರವಾಗಿ ಸ್ಮಾರ್ಟ್‌ಫೋನುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡತೊಡಗಿದೆ.ಅಲ್ಲದೆ ಅದರ ಸ್ಮಾರ್ಟ್‌ಫೋನುಗಳು ಬಹು ಜನಪ್ರಿಯವಾಗುತ್ತಿವೆ.ಇದು ಆಪಲ್ ಕಂಪೆನಿಗೆ ನಿದ್ದೆ ಕೆಡಿಸಿದೆಯೇನೋ!
-----------------------------------------------------------------
ಚಂದ್ರ:ಶಕ್ತಿಯ ಮೂಲ?ಹೀಲಿಯಮ್3 ಎನ್ನುವ ಧಾತುವನ್ನು ಬಳಸಿ,ಸಂಯೋಗದ ಮೂಲಕ ಶಕ್ತಿ ಉತ್ಪಾದಿಸುವುದು ಸಾಧ್ಯವೆಂದು ವಿಸ್ಕೋನ್ಸಿನ್ ವಿಶ್ವವಿದ್ಯಾಲಯದ ಸಂಶೋಧಕರು ತೋರಿಸಿಕೊಟ್ಟಿದ್ದಾರೆ.ವಿದಳನ ಪ್ರಕ್ರಿಯೆಯ ಮೂಲಕ ಅಣುಶಕ್ತಿ ಪಡೆಯುವುದು ಹೆಚ್ಚು ಸುಲಭ ಮತ್ತು ಈಗಿನ ಅಣುಶಕ್ತಿ ಸ್ಥಾವರಗಳು ಅಂತಹ ಪ್ರಕ್ರಿಯೆ ಮೂಲಕವೇ ಕೆಲಸ ಮಾಡುತ್ತಿವೆ.ಧಾತುಗಳ ಸಂಯೋಗದ ಮೂಲಕ ಶಕ್ತಿಯು ಬಿಡುಗಡೆಯಾಗುತ್ತದೆನ್ನುವುದು ಮೊದಲಿನಿಂದಲು ಗೊತ್ತಿದೆ.ಸೂರ್ಯ ಮತ್ತು ನಕ್ಷತ್ರಗಳು ಬಿಡುಗಡೆ ಮಾಡುತ್ತಿರುವ ಶಕ್ತಿ ಇದೇ ಪ್ರಕ್ರಿಯೆಯನ್ನವಲಂಬಿಸಿದೆ.ಆದರೆ ಇದನ್ನು ನಿಯಂತ್ರಿಸುವುದು ಕಠಿನ.ಆದರೆ ಸಂಶೋಧಕರು ಮಾದರಿ ಸ್ಥಾವರವನ್ನು ರಚಿಸಿ,ಹೀಲಿಯಂ ಸಂಯೋಗದಿಂದ ಶಕ್ತಿ ಬಿಡುಗಡೆ ಮಾಡಿ ತೋರಿಸಿದ್ದಾರೆನೋ ಸರಿ,ಆದರೆ ಆ ಹೀಲಿಯಂ ಧಾತು ಭೂಮಿಯ ಮೇಲೆ ಒಟ್ಟಿಗೆ ಇರುವುದೇ ಬರೇ ಮೂವತ್ತು ಕಿಲೋಗ್ರಾಮ್ ಅಂತೆ.ಚಂದ್ರನ ಮೇಲೆ ಇದಕ್ಕಿಂತ ಅದೆಷ್ಟೋ ಹೆಚ್ಚು ಹೀಲಿಯಂ ಇದೆಯೆನ್ನುವುದು,ಚಂದ್ರ ಭೂಮಿಗೆ ಶಕ್ತಿಯ ಮೂಲವಾಗಬಹುದು ಎನ್ನುವ ಲೆಕ್ಕಾಚಾರಕ್ಕೆ ಕಾರಣ.ಹೀಲಿಯಂ ವಿಕಿರಣ ಮುಕ್ತ ಶಕ್ತಿ ನೀಡುತ್ತದಂತೆ.ಹೀಲಿಯಮ್3 ಅಪೂರ್ವ ಧಾತುವಾದ್ದರಿಂದ ಅದರ ಬೆಲೆ ಭಾರೀ ಹೆಚ್ಚು.ಪ್ರತಿಗ್ರಾಮಿಗೆ ಒಂದು ಸಾವಿರ ಡಾಲರ್ ಬೆಲೆ, ಈಗ ಏಳುಸಾವಿರ ಡಾಲರಿಗೇರಿದೆ.ಅದನ್ನು ಬಳಸಿ ವಿದ್ಯುತ್ ತಯಾರಿಸಿದರೆ,ವಿದ್ಯುತ್ ಬೆಲೆ ಎಷ್ಟಾಗಬಹುದು ಎಂದು ಯೋಚಿಸಿ.ಡ್ಯುಟೀರಿಯಮ್ ಮತ್ತು ಟ್ರೀಟಿಯಮ್ ಎನ್ನುವ ಧಾತುಗಳು ಅಪಾಯಕಾರಿ ಎನ್ನುವ ಕಾರಣ,ಹೀಲಿಯಂ ಆಧಾರಿತ ಸ್ಥಾವರ ಅಭಿವೃದ್ಧಿಗೆ ಪ್ರಯತ್ನ ನಡೆದಿದೆ.ಭೂಮಿಯಲ್ಲಿ ಅಪೂರ್ವವಾಗಿರುವ ಹೀಲಿಯಮ್3 ಚಂದ್ರನ ಮೇಲೆ ಟನ್‌ಗಟ್ಟಲೆ ಇದೆ.ಅದು ಇರುವ ಸ್ಥಳವೂ ಗೊತ್ತು.ಹಾಗಾಗಿ ಚಂದ್ರನ ಮೇಲೆ ಠಿಕಾಣಿ ಹೂಡಿ,ಹೀಲಿಯಮ್3 ರವಾನಿಸಲು ಸಾಧ್ಯವಾದರೆ,ಭೂಮಿಯ ಮೇಲೆ ಅದನ್ನಲವಂಬಿಸಿದ ಸ್ಥಾವರ ಸ್ಥಾಪಿಸಬಹುದು.
----------------------------
ತುಷಾರ:ವಾರ್ಷಿಕ ಚಂದಾ ಗೆಲ್ಲಿ!ಈ ಪ್ರಶ್ನೆಗೆ ಸರಿಯುತ್ತರ ಕಳುಹಿಸಿ,ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ಶೋಭಾ ಮೋಹನ್,ಬೆಂಗಳೂರು.
*ಭಾರತದ ಐಟಿ ಕಂಪೆನಿಗಳ ಪೈಕಿ,ಮೂರನೆ ಸ್ಥಾನಕ್ಕೆ ಪೈಪೋಟಿ ಇರುವ ಕಂಪೆನಿಗಳು ಯಾವುವು?
(ಉತ್ತರವನ್ನು nistantusansaara@gmail.comಗೆ ಮಿಂಚಂಚೆ ಮಾಡಿ ವಿಷಯ:NS41 ನಮೂದಿಸಿ.)
ಕಳೆದ ವಾರದ ಬಹುಮಾನಿತ ಉತ್ತರ:
*ಜುಲೈ 24ಕ್ಕೆ ಆರು ವರ್ಷ ಪೂರೈಸುವ ಜನಪ್ರಿಯ ಕನ್ನಡ ಸಮುದಾಯ ತಾಣ ಸಂಪದ.ನೆಟ್
*ವಾರ್ಷಿಕೋತ್ಸವ ಸಂದರ್ಭ ನಡೆದ ಇನ್ನೊಂದು ವಿಶೇಷ ಕಾರ್ಯಕ್ರಮ ಸಾರಂಗ ಮೀಡಿಯಾ ವತಿಯಿಂದ "ಹಂಸನಾದ" ಪುಸ್ತಕ ಬಿಡುಗಡೆ.ಸರಿಯುತ್ತರಗಳು ಬಂದಿಲ್ಲ.
Udayavani Unicode
-------------------------------
Udayavani
*ಅಶೋಕ್‌ಕುಮಾರ್ ಎ