ಶ್ರೆಡರ್ ಸವಾಲು
ಡಿಏಆರ್‌ಪಿಏ-ಅಮೇರಿಕಾದ ಭದ್ರತೆ ಬಗ್ಗೆ ಕಾಳಜಿ ವಹಿಸುವ ಪೆಂಟಾಗನ್‌ನ ಸಂಸ್ಥೆ.ಇದು ಆಗಾಗ ಸ್ಪಧೆಗಳನ್ನು ಏರ್ಪಡಿಸಿ,ಭಾರೀ ಮೊತ್ತದ ಬಹುಮಾನಗಳನ್ನು ನೀಡುತ್ತದೆ.ಈ ಸಲ ಅದು ಸಂದೇಶದ ತುಣುಕುಗಳನ್ನು ಸವಾಲಾಗಿ ನೀಡಿದೆ.ಸಂದೇಶ ಬರೆದ ಕಾಗದವನ್ನು ಹರಿಯುವ ಯಂತ್ರದಲ್ಲಿ ಹಾಕಿದಾಗ ಸಿಕ್ಕಿದ ಚೂರುಗಳನ್ನು ಸವಾಲಾಗಿ ನೀಡಲಾಗಿದೆ.ಇದನ್ನು ಕಂಪ್ಯೂಟರ್ ಮೂಲಕ ಅಥವಾ ಇನ್ನಾವುದೇ ವಿಧಾನದಿಂದ ವಿಶ್ಲೇಷಿಸಿ,ಅದರಲ್ಲಿ ಅಡಗಿರುವ ಸಂದೇಶವೇನು ಎಂದು ಕಂಡುಹಿಡಿದವರಿಗೆ ಐವತ್ತು ಸಾವಿರ ಡಾಲರು ಬಹುಮಾನ ಸಿಗಲಿದೆ.ಕಳೆದ ವರ್ಷಗಳಲ್ಲಿ ರೊಬೋಕಾರ್ ರೇಸ್,ಕೆಂಪು ಬಲೂನ್‌ಗಳಿಗಾಗಿ ಹುಡುಕಾಟದಂತಹ ಸ್ಪರ್ಧೆಗಳನ್ನು ಏಜನ್ಸಿ ಏರ್ಪಡಿಸಿತ್ತು.ಹರಿದ ಕಾಗದಗಳಲ್ಲಿರುವ ಸಂದೇಶವನ್ನು ಪತ್ತೆ ಹಚ್ಚಲು ಶಕ್ತರಾದರೆ,ಅದು ಪೆಂಟಾಗನ್‌ಗೆ ಖುಷಿಕೊಡದು.ಆಸಕ್ತರು https://www.shredderchallenge.com, ತಾಣದಿಂದ ಐದು ಕಡತಗಳನ್ನು ಇಳಿಸಿಕೊಂಡು,ಸಮಸ್ಯೆ ಬಗೆಹರಿಸಲು ಶಕ್ತರಾದರೆ,ಅವರ ಉತ್ತರಗಳು ಮತ್ತು ಅವನ್ನು ಊಹಿಸಿದ್ದು ಹೇಗೆ ಎನ್ನುವ ವಿವರಗಳನ್ನು ಮಿಂಚಂಚೆ ಮಾಡಿ ತಿಳಿಸಿದರೆ ಸರಿ.ಸವಾಲನ್ನು ಸ್ವೀಕರಿಸಿ,ತಾಣದಲ್ಲಿ ನೋಂದಾಯಿಸಿದವರ ಸಂಖ್ಯೆ ಸತತವಾಗಿ ಏರುತ್ತಿದೆ.ಹಿಂದಿನ ಕೆಂಪು ಬಲೂನ್ ಪತ್ತೆ ಹಚ್ಚಿ ಸ್ಪರ್ಧೆಯಲ್ಲಿ ಹತ್ತು ಬಲೂನುಗಳು ದೇಶದ ಯಾವ ಸ್ಥಳಗಳಲ್ಲಿವೆ ಎನ್ನುವುದನ್ನು ನೀಡಿದ ಸುಳಿವುಗಳ ಆಧಾರದಲ್ಲಿ ಪತ್ತೆ ಹಚ್ಚಬೇಕಿತ್ತು.ಎಂಐಟಿಯ ಮೀಡಿಯಾ ಲ್ಯಾಬ್‌ನವರು ಇದನ್ನು ಹತ್ತು ಗಂಟೆಗಳೊಳಗೆ ಬಿಡಿಸಲು ಸಮರ್ಥರಾಗಿದ್ದರು.ಈ ಸಲದ ಸವಾಲು ಎಷ್ಟು ಸಮಯದಲ್ಲಿ ಬಗೆಹರಿಯುತ್ತದೆ,ಅಥವಾ ಇದನ್ನು ಬಗೆಹರಿಸಲೇ ಸಾಧ್ಯವಿಲ್ಲವೇ ಎನ್ನುವುದನ್ನು ಕಾದು ನೋಡಬೇಕು.ಭಯೋತ್ಪಾದಕರ ಸಂದೇಶಗಳು ಈ ರೀತಿ ಹರಿದ ಸ್ಥಿತಿಯಲ್ಲಿ ಸಿಕ್ಕಿದಾಗ,ಅವನ್ನು ಅರ್ಥೈಸುವುದು ಹೇಗೆ ಎನ್ನುವಂತಹ ನಿಜ ಜೀವನದ ಸಮಸ್ಯೆಗಳಲ್ಲಿ ಈ ಸವಾಲಿನ ಜವಾಬು ಉಪಯುಕ್ತವಾಗಲಿದೆ.
---------------------------------------------
ಐಫೋನ್ ಈಗ ಫೋಟೋ ಸ್ಕ್ಯಾನರ್ ಆಗಬಲ್ಲದು
ಐಫೋನ್‌ಗೆ ನೂರಾರು ತಂತ್ರಾಂಶಗಳು ಅಭಿವೃದ್ಧಿಯಾಗಿವೆ.ಈಗ ಅದನ್ನು ಸ್ಕ್ಯಾನರ್ ಆಗಿ ಬಳಸಬಹುದಾದ ಅಪ್ಲಿಕೇಶನ್ ಅಭಿವೃದ್ಧಿಯಾಗಿದೆ.ಹಳೆಯ ಫೋಟೋಗಳ ಪ್ರಿಂಟುಗಳನ್ನು ಅಂತರ್ಜಾಲದಲ್ಲಿ ಹಾಕುವಷ್ಟು ಮಟ್ಟದ ಸ್ಕ್ಯಾನಿಂಗನ್ನು ಈ ತಂತ್ರಾಂಶದಿಂದ ಸಾಧಿಸಬಹುದು.ಮುಂದೆ ಆಂಡ್ರಾಯಿಡ್ ಮತ್ತಿತರ ನಿರ್ವಹಣಾವ್ಯವಸ್ಥೆಗಳಿಗೂ ಇಂತಹುದ್ದೇ ತಂತ್ರಾಂಶ ಬಿಡುಗಡೆಯಾಗಲಿದೆ.ಐಫೋನ್ ತಂತ್ರಾಂಶ ಐಪ್ಯಾಡ್ ಸಹಿತ ಎಲ್ಲಾ ಐಫೋನ್ ಮಾಡೆಲುಗಳ ಜತೆಯೂ ಬಳಸಲು ಸಾಧ್ಯವಾಗುವಂತೆ ರಚಿತವಾಗಿದೆ.ಇದು ಉಚಿತ ತಂತ್ರಾಂಶವಾಗಿ ಲಭ್ಯವಾಗಲಿದೆ.ಈ ತಂತ್ರಾಂಶ ಬಳಸಿ ಸ್ಕ್ಯಾನ್ ಮಾಡಿದ ಚಿತ್ರಗಳನ್ನು http://1000memories.com/ ತಾಣಕ್ಕೆ ಅಪ್ಲೋಡ್ ಮಾಡಬಹುದು.ತಂತ್ರಾಂಶವನ್ನು ಅಭಿವೃದ್ಧಿ ಪಡಿಸಿ,ಉಚಿತವಾಗಿ ಒದಗಿಸಿರುವ ಈ ತಾಣವು ಹೆಚ್ಚಿನ ಬಳಕೆದಾರರನ್ನು ಪಡೆಯುವತ್ತ ಕಣ್ಣು ಹಾಕಿದೆ ಎನ್ನುವುದರಲ್ಲಿ ಅನುಮಾನವಿಲ್ಲ.
-------------------------------------------
ಏರುತ್ತಿರುವ ಫೇಸ್‌ಬುಕ್ ಹುಚ್ಚು
ಫೇಸ್‌ಬುಕ್ ತಾಣಕ್ಕೆ ಎಂಭತ್ತು ಕೋಟಿ ಜನ ಸದಸ್ಯರಾಗಿದ್ದಾರೆ.ಅವರ ಪೈಕಿ ಅರ್ಧಾಂಶ ಅಂದರೆ ನಲುವತ್ತು ಕೋಟಿ ಜನ ದಿನಾಲೂ ಫೇಸ್‌ಬುಕ್ ತಾಣಕ್ಕೆ ಹಾಜರಿ ಹಾಕಿಯೇ ಹಾಕುತ್ತಾರೆ.ತಿಂಗಳಲ್ಲಿ ಸರಾಸರಿ ಆರುಗಂಟೆಗೂ ಅಧಿಕ ಸಮಯವನ್ನವರು ಈ ತಾಣದಲ್ಲಿ ಕಳೆಯುತ್ತಾರೆ.ಕಳೆದ ವರ್ಷ ಈ ಆವಧಿ ನಾಲ್ಕು ಗಂಟೆ ಮೀರಿತ್ತು.ಫೇಸ್‌ಬುಕ್ ತಾಣದಲ್ಲಿ ಹೊತ್ತು ಕಳೆಯಲು ಆಟಗಳಿಗೆ ಬರವಿಲ್ಲ.ಪಟ್ಟಾಂಗ,ಮಿಂಚಂಚೆ ಸೇವೆಯನ್ನೂ ಒದಗಿಸಿ ಫೇಸ್‌ಬುಕ್ ಜನರು ಹೆಚ್ಚು ಸಮಯ ಲಾಗಿನ್ ಆಗಿರಲು ಪ್ರೇರಿಸುತ್ತಿದೆ.ಹೆಚ್ಚಿನವರು ತಮ್ಮ ಪ್ರವಾಸದ ವೇಳೆ ತೆಗೆದ ಚಿತ್ರಗಳನ್ನು ಫೇಸ್‌ಬುಕ್ ಮೂಲಕವೇ ತಮ್ಮ ಮಿತ್ರರು ಮತ್ತು ಬಳಗದವರ ಜತೆ ಹಂಚಿಕೊಳ್ಳುತ್ತಾರೆ.ಗಂಟೆಗಟ್ಟಲೆ ಈ ತಾಣದಲ್ಲೇ ಸಮಯವ್ಯಯ ಮಾಡುವ ವಿದ್ಯಾರ್ಥಿಗಳು ಮತ್ತು ಯುವ ಜನತೆ ಹೀಗೆ ಮಾಡುವುದು ಸರಿಯಲ್ಲ ಎನ್ನುವ ಅಪರಾಧಿ ಪ್ರಜ್ಞೆಯನ್ನು ಹೊಂದಿದ್ದೂ,ಅದನ್ನು ಬದಲಿಸಲು ಸಾಧ್ಯವಾಗದಷ್ಟು ತಾಣದ ಬಳಕೆಯ ಚಟಕ್ಕೆ ಗುರಿಯಾಗಿದ್ದಾರೆ.ಹೆತ್ತವರ,ಗೆಳೆಯರ ಮತ್ತು ಬಂಧು ಬಳಗದವರ ಜತೆ ನೇರವಾಗಿ ಸಮಯಕಳೆಯುವುದು ಬಿಟ್ಟು,ಈ ರೀತಿ ಮಿಥ್ಯಾ ಪ್ರಪಂಚದಲ್ಲಿ ತೇಲುವುದು ತರವಲ್ಲ ಎನ್ನುವ ಅರಿವೇನೋ ಅವರಿಗಿದೆ,ಆದರೆ ಅದನ್ನು ಬದಲಿಸಲವರಿಗೆ ಸಾಧ್ಯವಾಗುತ್ತಿಲ್ಲ.
-------------------------------
ಗೂಗಲ್ ಆಫರ್ಸ್:ವಿಸ್ತರಣೆ
ಗ್ರೂಪಾನ್ ಎನ್ನುವ ಅಂತರ್ಜಾಲ ತಾಣವು ಪ್ರತಿದಿನ ಗ್ರಾಹಕರಿಗೆ ಲಭ್ಯವಿರುವ ಆಕರ್ಷಕ ಕೊಡುಗೆಗಳು,ಅವುಗಳು ಲಭ್ಯವಿರುವ ವಾಣಿಜ್ಯ ಮಳಿಗೆಗಳ ವಿವರಗಳನ್ನು ನೀಡುವ ತಾಣವಾಗಿ ಬೆಳೆದಿದೆ.ಗೂಗಲ್ ಈ ಕಂಪೆನಿಯ ಮೇಲೆ ಕಣ್ಣು ಹಾಕಿ,ಅದನ್ನು ಕೊಳ್ಳುವ ಪ್ರಯತ್ನ ಮಾಡಿ ವಿಫಲವಾಯಿತು.ಇದೀಗ ಗ್ರೂಪಾನ್ ತಾಣ ತನ್ನ ಐಪಿಓವನ್ನು ನಡೆಸಿ,ಸಾರ್ವಜನಿಕರಿಗೆ ತನ್ನ ಶೇರುಗಳನ್ನು ಮಾರುವ ಯತ್ನಕ್ಕಿಳಿಯಲಿದೆ.ಈ ನಡುವೆ ಗೂಗಲ್ ಕೂಡಾ ಇದೇ ರೀತಿಯ ಸೇವೆಯನ್ನು ಒದಗಿಸಲು ಆರಂಭಿಸಿತು.ಗೂಗಲ್ ಆಫರ್ಸ್ ಎನ್ನುವ ಹೆಸರಿನ ಸೇವೆಯನ್ನದು ಈಗ ಮತ್ತಷ್ಟು ವಿಸ್ತರಿಸಲಿದೆ.ಇದಕ್ಕಾಗಿ ಗೂಗಲ್ ಇಂತಹ ಸೇವೆಯನ್ನು ಒದಗಿಸುತ್ತಿರುವ ಹಲವಾರು ತಾಣಗಳ ಜತೆ ಒಪ್ಪಂದ ಮಾಡಿಕೊಂಡು,ಅವುಗಳ ಮೂಲಕ ಮಾಹಿತಿಯನ್ನು ಪಡೆಯುತ್ತಲಿದೆ.ಹೀಗಾಗಿ,ಗೂಗಲ್ ಗ್ರಾಹಕನಿಗೆ ಲಭ್ಯವಿರುವ ಆಕರ್ಷಕ ಕೊಡುಗೆಗಳ ಬಗ್ಗೆ ಹೆಚ್ಚು ನಿಖರ ಮತ್ತು ಸಮಗ್ರ ಮಾಹಿತಿಯನ್ನು ಒದಗಿಸುವ ಪ್ರಯತ್ನದಲ್ಲಿದೆ.ಆದರೆ ಗ್ರೂಪಾನ್ ಕಂಪೆನಿಯು ಗೂಗಲ್ ಸ್ಪರ್ಧೆಯನ್ನು ಎದುರಿಸುವ ಧೈರ್ಯ ಹೊಂದಿದೆ.ಅದು ತನ್ನ ಐಪಿಓ ಯೋಜನೆಯ ಜತೆ ಮುಂದುವರಿಯುವ ಯೋಚನೆಯಲ್ಲಿದೆ.

ಸಾಂಸಂಗ್ ಮುಂದೆ
ಈ ತ್ರೈಮಾಸಿಕದಲ್ಲಿ ಸ್ಮಾರ್ಟ್‌ಫೋನ್ ಮಾರಾಟದಲ್ಲಿ ಅಪಲ್ ಕಂಪೆನಿಯನ್ನು ಸಾಂಸಂಗ್ ಕಂಪೆನಿಯು ಹಿಂದಿಕ್ಕಿದೆ.ಐಫೋನ್‌ನ ಹೊಸ ಮಾದರಿಗಾಗಿ ಕಾದುಕುಳಿತ ಜನ ಹಳೆಯ ಮಾದರಿಗಳ ಖರೀದಿಯಲ್ಲಿ ಆಸಕ್ತಿ ವಹಿಸದ್ದು ಮಾರಾಟದಲ್ಲಿ ಆಪಲ್ ಕಂಪೆನಿ ಹಿಂದೆ ಬೀಳಲು ಕಾರಣವಾಗಿರ ಬಹುದು ಎನ್ನುವುದು ವಿಶ್ಲೇಷಣೆ.ಸಾಂಸಂಗ್ ಇಪ್ಪತ್ತೆಂಟು ದಶಲಕ್ಷ ಸ್ಮಾರ್ಟ್‌ಫೋನ್ ಮಾರಿದ್ದರೆ,ಆಪಲ್ ಹದಿನೇಳು ದಶಲಕ್ಷ,ನೋಕಿಯಾ ಹದಿನೇಳು ದಶಲಕ್ಷಕ್ಕಿಂತ ತುಸು ಕಡಿಮೆ ಸ್ಮಾರ್ಟ್‌ಫೋನ್ ಮಾರಾಟ ಮಾಡಿವೆ.
------------------------------
ತುಷಾರ:ವಾರ್ಷಿಕ ಚಂದಾ ಗೆಲ್ಲಿ!
ಈ ಪ್ರಶ್ನೆಗೆ ಸರಿಯುತ್ತರ ಕಳುಹಿಸಿ,ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ಶೋಭಾ ಮೋಹನ್,ಬೆಂಗಳೂರು.
*ಗ್ರೂಪಾನ್ ತಾಣದ ವಿಳಾಸವೇನು?
(ಉತ್ತರವನ್ನು nistantusansaara@gmail.comಗೆ ಮಿಂಚಂಚೆ ಮಾಡಿ ವಿಷಯ:NS52 ನಮೂದಿಸಿ.)
ಕಳೆದ ವಾರದ ಬಹುಮಾನಿತ ಉತ್ತರ:
*ಸಿ ಕಂಪ್ಯೂಟರ್ ಭಾಷೆಯ ಮಹತ್ವ-ಈಗಿನ ಪೈಥಾನ್,ರೂಬಿ ಯಾವುದೇ ಭಾಷೆಗಳು ಸಿ ಭಾಷೆಯಲ್ಲೇ ಅಭಿವೃದ್ಧಿಯಾಗಿದೆ.ಅಂತರ್ಜಾಲದ ಸರ್ವರ್‌ಗಳು,ಬ್ರೌಸರುಗಳು ಇವೆಲ್ಲವನ್ನು ಸಿಯಲ್ಲೆ ರಚಿಸಿರುವುದೇ ಹೆಚ್ಚು.ಬಹುಮಾನ ವಿಜೇತರು ಶರತ್,ಹಳ್ಳಿಹೊಳೆ.ಅಭಿನಂದನೆಗಳು.
Udayavani
*ಅಶೋಕ್‌ಕುಮಾರ್ ಎ